ಸದ್ದಿಲ್ಲದೆ ಪೋರ್ಷೆ ಪನಮೆರಾ ಡೀಸೆಲ್ ಆವೃತ್ತಿ ಬಿಡುಗಡೆ

Written By:

ಸದ್ದಿಲ್ಲದೆ ಮಗದೊಂದು ಅತ್ಯಂತ ದುಬಾರಿ ಪೋರ್ಷೆ ಕಾರು ಭಾರತ ಪ್ರವೇಶ ಪಡೆದಿದೆ. ಎಲ್ಲ ಹೊಸತನದಿಂದ ಕೂಡಿರುವ ಪೋರ್ಷೆ ಪನಮೆರಾ ಡೀಸೆಲ್ ಆವೃತ್ತಿಯು ದೇಶದಲ್ಲಿ ಬಿಡುಗಡೆಯಾಗಿದೆ.

ಬೆಲೆ ಮಾಹಿತಿ: 1.04 ಕೋಟಿ ರು. (ಎಕ್ಸ್ ಶೋ ರೂಂ ಮಹಾರಾಷ್ಟ್ರ)

ಎಂಜಿನ್ ತಾಂತ್ರಿಕತೆ

ನೂತನ ಪೋರ್ಷೆ ಪನಮೆರಾ ಡೀಸೆಲ್ ಕಾರು 3.0 ಲೀಟರ್ ವಿ6 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 550 ಎನ್ ಎಂ ತಿರುಗುಬಲದಲ್ಲಿ 250 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಏಳು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಪೋರ್ಷೆ ಪನಮೆರಾ ಡೀಸೆಲ್ ಆವೃತ್ತಿ

ವೈಶಿಷ್ಟ್ಯಗಳು

19 ಇಂಚುಗಳ ಅಲಾಯ್ ವೀಲ್, ಬೈ ಕ್ಸೆನಾನ್ ಹೆಡ್ ಲೈಟ್ ಜೊತೆ ಪೋರ್ಷೆ ಡೈನಾಮಿಕ್ ಲೈಟ್ ಸಿಸ್ಟಂ, ಆಕ್ಟಿವ್ ಸಸ್ಪೆನ್ಷನ್ ಮ್ಯಾನೇಜ್ ಮೆಂಟ್ ಮತ್ತು ಪಾರ್ಕ್ ಅಸಿಸ್ಟ್ ಸೇವೆಗಳಿರಲಿದೆ.

ಕಾರಿನೊಳಗೆ ಬ್ಲ್ಯಾಕ್ ಹಾಗೂ ಬೀಜ್ ಲೆಥರ್ ಒಳಮೈಯನ್ನು ಕೊಡಲಾಗಿದೆ. ಇದು ಕಾರಿಗೆ ಹೆಚ್ಚು ಐಷಾರಾಮಿ ಅನುಭವ ನೀಡಲಿದ್ದು, ಏಳು ಇಂಚುಗಳ ಟಚ್ ಸ್ಕ್ರೀನ್ ಜೊತೆಗೆ ಪೋರ್ಷೆ ಕಮ್ಯೂನಿಕೇಷನ್ ಮ್ಯಾನೇಜ್ ಮೆಂಟ್, 14 ಬೋಸ್ ಸೌರಂಡ್ ಸಿಸ್ಟಂ ಸ್ಪೀಕರ್ ಮುಂತಾದ ಸೇವೆಗಳಿರಲಿದೆ.

English summary
Porsche Panamera Diesel Edition Launched In India For Rs. 1.04 Crore
Story first published: Thursday, January 21, 2016, 11:42 [IST]
Please Wait while comments are loading...

Latest Photos

X