ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

Written By:

ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ರೆನೊ ಕ್ವಿಡ್‌ನ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆವೃತ್ತಿ ಬಿಡುಗಡೆ ಮಾಡುತ್ತಿರುವ ಬಗ್ಗೆ ನಾವು ಈಗಾಗಲೇ ವರದಿ ಮಾಡಿರುತ್ತೇವೆ. ಈ ಸಂಬಂಧ ಸ್ವತ: ರೆನೊ ಸಂಸ್ಥೆಯೇ ಅಧಿಕೃತ ಚಿತ್ರವನ್ನು ಬಿತ್ತರಿಸಿದೆ. ಹಾಗಿರಬೇಕೆಂದರೆ ನೂತನ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ಆದ ಸುದ್ದಿ ಬೆಳಕಿಗೆ ಬಂದಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ ಎಎಂಟಿ ಕಾರು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 4.29 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ಕ್ವಿಡ್ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಿರುವ 1.0 ಲೀಟರ್ ಆವೃತ್ತಿಯಲ್ಲಿ ಎಎಂಟಿ ಗೇರ್ ಬಾಕ್ಸ್ ಆಳವಡಿಕೆಯಾಗಲಿದೆ. ನಿಮ್ಮ ಮಾಹಿತಿಗಾಗಿ ರೆನೊ ಕ್ವಿಡ್ ಒಂದು ಲೀಟರ್ ಆವೃತ್ತಿಯು ಕಳೆದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿತ್ತು.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ಇದರಲ್ಲಿರುವ ತ್ರಿ ಸಿಲಿಂಡರ್ ಎಸ್ ಸಿಇ ಪೆಟ್ರೋಲ್ ಎಂಜಿನ್ 91 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ನೂತನ ರೆನೊ ಕ್ವಿಡ್ ಎಎಂಟಿ ಕಾರು ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ ಆರ್ ಎಕ್ಸ್ ಟಿ ಮತ್ತು ಆರ್ ಎಕ್ಸ್ ಟಿ (ಐಚ್ಛಿಕ).

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ರೆನೊ ಕ್ವಿಡ್ ಆರ್ ಎಕ್ಸ್ ಟಿ ಮತ್ತು ಟಾಪ್ ಎಂಡ್ ಆರ್ ಎಕ್ಸ್ ಟಿ (ಐಚ್ಛಿಕ) ವೆರಿಯಂಟ್ ಗಳು ಅನುಕ್ರಮವಾಗಿ 4.19 ಹಾಗೂ 4.42 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ಅಂದರೆ ನೂತನ ಎಎಂಟಿ ಮಾದರಿಗಳು ಮ್ಯಾನುವಲ್ ವೆರಿಯಂಟ್ ಗಿಂತಲೂ ಸರಿ ಸುಮಾರು 46,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ದೇಶದೆಲ್ಲೆಡೆ ಸ್ಥಿತಗೊಂಡಿರುವ ರೆನೊ ಡೀಲರುಗಳು ರೆನೊ ಕ್ವಿಡ್ ಎಎಂಟಿ ಕಾರಿಗಾಗಿ ಬುಕ್ಕಿಂಗ್ ಸ್ವೀಕರಿಸುತ್ತಿದ್ದು, ಆಸಕ್ತ ಗ್ರಾಹಕರು ಮುಗಂಡವಾಗಿ 10,000 ರುಪಾಯಿಗಳನ್ನು ಪಾವತಿಸಿ ತಮ್ಮ ಕನಸಿನ ಕಾರನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ಅಂದ ಹಾಗೆ ನೂತನ ರೆನೊ ಕ್ವಿಡ್ ಎಎಂಟಿ ಕಾರು ನವೆಂಬರ್ ಎರಡನೇ ವಾರದಲ್ಲಿ ದೇಶದ ಮಾರುಕಟ್ಟೆಗೆ ಪ್ರವೇಶ ನೀಡಲಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ರೆನೊ ಬಿಡುಗಡೆ ಮಾಡಿರುವ ಟೀಸರ್ ಚಿತ್ರದಲ್ಲಿ ನೀವು ಚಾಲನೆ ಮಾಡುವ ವಿಧವನ್ನು ಬದಲಾಯಿಸಿಕೊಳ್ಳಲು ತಯಾರಾಗಿರಿ ಎಂದು ಉಲ್ಲೇಖಿಸಲಾಗಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ಸಾಂಪ್ರದಾಯಿಕ ಗೇರ್ ಲಿವರ್ ಗಳಿಗಿಂತ ವಿಭಿನ್ನವಾಗಿ ವೃತ್ತಾಕಾರದಲ್ಲಿರುವ ಇದನ್ನು ತಿರುಗಿಸುವ ಮೂಲಕ ಚಾಲನಾ ವಿಧಗಳನ್ನು ಬದಲಾಯಿಸಬಹುದಾಗಿದೆ. ಇದು ನ್ಯೂಟ್ರಲ್, ಡ್ರೈವ್ ಅಥವಾ ರಿವರ್ಸ್ ಚಾಲನಾ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

ಬಿಡುಗಡೆಗೆ ಮೊದಲೇ ರೆನೊ ಕ್ವಿಡ್ ಎಎಂಟಿ ಕಾರಿನ ಬೆಲೆ ಲೀಕ್ ?

ಇದಕ್ಕೂ ಮೊದಲು ಡಸ್ಟರ್ ನಲ್ಲೂ ಎಎಂಟಿ ಆಯ್ಕೆಯನ್ನು ಕೊಡಲಾಗಿತ್ತು. ಆದರೆ ನೂತನ ಕ್ವಿಡ್, ಡಯಲ್ ಆಕಾರದ ಗೇರ್ ಬಾಕ್ಸ್ ಪಡೆದುಕೊಳ್ಳುತ್ತಿರುವುದು ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Read more on ರೆನೊ renault
English summary
Rumour: Renault Kwid AMT Model Prices To Start From Rs 4.29 Lakh
Story first published: Thursday, November 3, 2016, 16:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark