ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

Written By:

ರೆನೊ ಕ್ವಿಡ್ ಸಣ್ಣ ಕಾರು ಭಾರತದಲ್ಲಿ ಒಂದು ಲಕ್ಷ ಯುನಿಟ್ ಗಳ ಮಾರಾಟದ ಮೈಲುಗಲ್ಲನ್ನು ತಲುಪಿದೆ. ದೇಶದ ಸಣ್ಣ ಕಾರು ವಿಭಾಗದಲ್ಲಿ ಹೊಸ ಕ್ರಾಂತಿಯ ಅಲೆಯೆಬ್ಬಿಸಿರುವ ರೆನೊ ಕ್ವಿಡ್ ನೇರವಾಗಿ ಮಾರುತಿ ಸುಜುಕಿ ಆಲ್ಟೊ ಕಾರಿಗೆ ಸೆಡ್ಡನ್ನು ಒಡ್ಡುತ್ತಿದೆ. ಈಗ 2016ನೇ ಸಾಲು ಕೊನೆಯ ಹಂತಕ್ಕೆ ತಲುಪಿರುವಂತೆಯೇ ಕ್ವಿಡ್ ಒಂದು ಲಕ್ಷ ಮಾರಾಟವನ್ನು ದಾಟಿದೆ.

To Follow DriveSpark On Facebook, Click The Like Button
ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ಪ್ರಸಕ್ತ ಸಾಲಿನಲ್ಲಿ ಕ್ವಿಡ್ ಕಾರಿನ ಎರಡು ಆವೃತ್ತಿಗಳನ್ನು ರೆನೊ ಬಿಡುಗಡೆಗೊಳಿಸಿತ್ತು. ಅವುಗಳೆಂದರೆ ಕ್ವಿಡ್ ಶಕ್ತಿಶಾಲಿ 1.0 ಲೀಟರ್ ಮತ್ತು ಕ್ವಿಡ್ ಈಸಿ ಆರ್ ಎಎಂಟಿ ಕಾರು.

ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ಕ್ವಿಡ್ ಬೇಸ್ ವೆರಿಯಂಟ್ 799 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 72 ಎನ್ ಎಂ ತಿರುಗುಬದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ಹಾಗೆಯೇ ಕ್ವಿಡ್ ಶಕ್ತಿಶಾಲಿ 999 ಸಿಸಿ ತ್ರಿ ಸಿಲಿಂಡರ್ ಎಂಜಿನ್ 91 ಎನ್ ಎಂ ತಿರುಗುಬದಲ್ಲಿ 67 ಅಶ್ವಶಕ್ತಿಯನ್ನು ನೀಡುತ್ತದೆ. ಇದು ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ಭಾರತದಲ್ಲಿ ಮಾರುತಿ ಆಲ್ಟೊ ಕೆ10 ಜೊತೆಗೆ, ಸೆಲೆರಿಯೊ, ಹ್ಯುಂಡೈ ಐ10, ಟಾಟಾ ಟಿಯಾಗೊ ಮತ್ತು ಮಾರುತಿ ಆಲ್ಟೊ 800 ಮಾದರಿಗಳಿಗೆ ಕ್ವಿಡ್ ಪ್ರತಿಸ್ಪರ್ಧಿಯಾಗಿದೆ.

ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ರೆನೊ ಕ್ವಿಡ್ ಶ್ರೇಣಿಯ ಕಾರುಗಳು ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 2.64 ಲಕ್ಷ ರು.ಗಳಿಂದ 3.95 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ಇದಕ್ಕೂ ಮೊದಲು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ 2016 ಜನವರಿ ತಿಂಗಳಿಂದ ಆಗಸ್ಟ್ ವರೆಗಿನ ಅವಧಿಯಲ್ಲಿ 85,000 ಕಾರುಗಳನ್ನು ಮಾರಾಟ ಮಾಡಿರುವುದಾಗಿ ರೆನೊ ತಿಳಿಸಿತ್ತು. ಈ ಪೈಕಿ ಕ್ವಿಡ್ ಮಾತ್ರವಾಗಿ 65,000 ಯುನಿಟ್ ಗಳ ಮಾರಾಟವನ್ನು ಗಿಟ್ಟಿಸಿಕೊಂಡಿತ್ತು.

ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ಇಲ್ಲಿಗೆ ರೆನೊ ಕ್ವಿಡ್ ಓಟ ಕೊನೆಗೊಳ್ಳುವುದಿಲ್ಲ. ಮುಂದಿನ ವರ್ಷ ಕ್ವಿಡ್ ವಿಶೇಷ ಆವೃತ್ತಿಗಳಾದ ಕ್ಲೈಂಬರ್ ಮತ್ತು ರೇಸರ್ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆಯು ಹೊಂದಿದೆ.

ಒಂದು ಲಕ್ಷ ಮಾರಾಟ ಮೈಲುಗಲ್ಲು ತಲುಪಿದ ರೆನೊ ಕ್ವಿಡ್

ಅಂದ ಹಾಗೆ ಭಾರತದಲ್ಲಿ ಕ್ವಿಡ್ ಜೊತೆಗೆ ಪಲ್ಸ್, ಸ್ಕಾಲಾ, ಲೊಡ್ಜಿ ಹಾಗೂ ಡಸ್ಟರ್ ಶ್ರೇಣಿಯ ಕಾರುಗಳನ್ನು ರೆನೊ ಮಾರಾಟ ಮಾಡುತ್ತಿದೆ.

Read more on ರೆನೊ renault
English summary
Renault Kwid Surpasses One Lakh Sales Milestone In India
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark