ಸ್ಕಾರ್ಪಿಯೊ ವಿಶೇಷ ಆವೃತ್ತಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ

By Nagaraja

ದೇಶದ ನಂ.1 ಕ್ರೀಡಾ ಬಳಕೆಯ ವಾಹನ ಮಹೀಂದ್ರ ಸ್ಕಾರ್ಪಿಯೊ ತಾಜಾತನವನ್ನು ಪಡೆಯುತ್ತಿದೆ. ಇವೆಲ್ಲವನ್ನು ಸೂಚಿಸುವಂತೆಯೇ ಸ್ಕಾರ್ಪಿಯೊದ ವಿಶೇಷ ಆವೃತ್ತಿಯು ಪರೀಕ್ಷಾರ್ಥ ಸಂಚಾರದ ವೇಳೆಯಲ್ಲಿ ಸೆರೆ ಹಿಡಿಯಲಾಗಿದೆ.

ಸಂಪೂರ್ಣವಾಗಿ ಮರೆಮಾಚಿರುವ ಸ್ಕಾರ್ಪಿಯೊ ನೈಜ ರಸ್ತೆ ಪರಿಸ್ಥಿತಿಯಲ್ಲಿ ಟೆಸ್ಟಿಂಗ್ ನಡೆಸಲಾಗುತ್ತಿತ್ತು. ಈ ವೇಳೆಯಲ್ಲಿ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಸ್ಕಾರ್ಪಿಯೊ ವಿಶೇಷ ಆವೃತ್ತಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ

ಮಹೀಂದ್ರವನ್ನು ದೇಶದ ನಂ.1 ಎಸ್‌ಯುವಿಯಾಗಿಸುವಲ್ಲಿ ಸ್ಕಾರ್ಪಿಯೊದ ಪಾತ್ರ ಮಹತ್ವದಾಗಿತ್ತು. ಈಗ ಮತ್ತಷ್ಟು ಮಾರಾಟ ಗುರಿಯಿರಿಸಿಕೊಂಡಿರುವ ಸಂಸ್ಥೆಯು ಹೊಸ ಆವೃತ್ತಿಯನ್ನು ಪರಿಚಯಿಸಿದೆ.

ಸ್ಕಾರ್ಪಿಯೊ ವಿಶೇಷ ಆವೃತ್ತಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ

ನೂತನ ಬಾಡಿ ಶೈಲಿಯ ಗ್ರಾಫಿಕ್ಸ್, ಕಪ್ಪು ವರ್ಣದ ಅಲಾಯ್ ವೀಲ್, ಕೆಂಪು ವರ್ಣದ ಬ್ರೇಕ್ ಕ್ಯಾಲಿಪರ್, ಕ್ರೀಡಾತ್ಮಕ ನೋಟ ಎಲ್ಲವೂ ಮಹೀಂದ್ರ ಸ್ಕಾರ್ಪಿಯೊ ಪಾಲಿಗೆ ತಾಜಾತನವನ್ನು ತುಂಬಿದೆ.

ಸ್ಕಾರ್ಪಿಯೊ ವಿಶೇಷ ಆವೃತ್ತಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ

ನೂತನ ಲಿಮಿಟೆಡ್ ಎಡಿಷನ್, ಕ್ಲೈಮೇಟ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್, ಟಿಪಿಎಂಎಸ್, ಆರು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮುಂತಾದ ವ್ಯವಸ್ಥೆಗಳನ್ನು ಪಡೆಯಲಿದೆ.

ಸ್ಕಾರ್ಪಿಯೊ ವಿಶೇಷ ಆವೃತ್ತಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಅಂತೆಯೇ ಅತಿ ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪಿದೆ.

ಸ್ಕಾರ್ಪಿಯೊ ವಿಶೇಷ ಆವೃತ್ತಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ

ಸ್ಕಾರ್ಪಿಯೊ ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಗಿಂತಲೂ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಲಿದೆ. ಇದಕ್ಕನುಗುಣವಾಗಿ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲಾಗುವುದು.

ಸ್ಕಾರ್ಪಿಯೊ ವಿಶೇಷ ಆವೃತ್ತಿ ಪರೀಕ್ಷಾರ್ಥ ಸಂಚಾರ ವೇಳೆ ಸೆರೆ

ಸ್ಕಾರ್ಪಿಯೊ ಬೇಸ್ ವೆರಿಯಂಟ್ 2.5 ಲೀಟರ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 75 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 2 ವೀಲ್ ಡ್ರೈವ್ ಪಡೆಯಲಿದೆ. ಇದರ ಜೊತೆಗೆ 2.2 ಲೀಟರ್ ಮತ್ತು ಹೊಸತಾದ 1.9 ಲೀಟರ್ ಸೇರ್ಪಡೆಯಾಗಿದೆ. ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಂಡುಬರಲಿದೆ.

ಚಿತ್ರ ಕೃಪೆ: ರಷ್ ಲೇನ್

Most Read Articles

Kannada
English summary
Scorpio Special Edition Spied
Story first published: Saturday, February 27, 2016, 12:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X