ಹೊಸ ಟೊಯೊಟಾ ಫಾರ್ಚ್ಯುನರ್‌ನಲ್ಲಿ ಏನೆಲ್ಲ ಬದಲಾವಣೆಯಾಗಿದೆ?

By Nagaraja

ಹೊಚ್ಚ ಹೊಸ ಇನ್ನೋವಾ ಕ್ರೈಸ್ಟಾ ಬಿಡುಗಡೆಯಾದ ಸಂದರ್ಭದಲ್ಲೇ ನೂತನ ಫಾರ್ಚ್ಯುನರ್ ಭಾರತಕ್ಕೆ ಪ್ರವೇಶಿಸುವ ಬಗ್ಗೆ ಸುದ್ದಿಗಳು ಹರಡಿದ್ದವು. ಇದೀಗ ಎಲ್ಲವೂ ಅಂದುಕೊಂಡಂತೆ ನಡೆದಿದ್ದು ನೂತನ 2016 ಟೊಯೊಟಾ ಫಾರ್ಚ್ಯುನರ್ ಟೊಯೊಟಾ ಡೀಲರುಗಳನ್ನು ತಲುಪಿದೆ.

ಅಹಮಾಬಾದ್ ನಲ್ಲಿ ಸ್ಥಿಗೊಂಡಿರುವ ಡೀಲರ್ ನಲ್ಲಿ ಹೊಸ ಟೊಯೊಟಾ ಫಾರ್ಚ್ಯುನರ್ ಚಿತ್ರಗಳು ಬಹಿರಂಗವಾಗಿದೆ. ಇದನ್ನು ದೇಶಕ್ಕೆ ಮೊದಲ ಬಾರಿಗೆ 2015 ಅಕ್ಟೋಬರ್ ತಿಂಗಳಲ್ಲಿ ಆಮದು ಮಾಡಲಾಗಿತ್ತು.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

ನೂತನ ಟೊಯೊಟಾ ಫಾರ್ಚ್ಯುನರ್ ಹೊರಮೈಯಲ್ಲಿ ಪರಿಷ್ಕೃತ ವಿನ್ಯಾಸ, ಕ್ರೋಮ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಕಂಡುಬರಲಿದೆ.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

ಇನ್ನುಳಿದಂತೆ 18 ಇಂಚುಗಳ ಅಲಾಯ್ ಚಕ್ರಗಳು, ಪರಿಷ್ಕೃತ ಟೈಲ್ ಲ್ಯಾಂಪ್ ಮತ್ತು ಎಲ್ ಇಡಿ ಸೇವೆಯನ್ನು ಕಾಣಬಹುದಾಗಿದೆ.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

ಟೊಯೊಟಾ ನ್ಯೂ ಗ್ಲೋಬರ್ ಆರ್ಕಿಟೇಕ್ಚರ್ (ಟಿಎನ್‌ಜಿಎ) ತಳಹದಿಯಲ್ಲಿ ನಿರ್ಮಿತ 2016 ಟೊಯೊಟಾ ಫಾರ್ಚ್ಯುನರ್, ಸಿ ಪಿಲ್ಲರ್ ನಡುವೆ ದಿಟ್ಟವಾದ ರೇಖೆಯನ್ನು ಪಡೆದಿದೆ.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

2016 ಟೊಯೊಟಾ ಫಾರ್ಚ್ಯುನರ್ ಎರಡು ಡೀಸೆಲ್ ಹಾಗೂ ಒಂದು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಪೈಕಿ ಭಾರತಕ್ಕೆ ಡೀಸೆಲ್ ಆವೃತ್ತಿಯು ಮಾತ್ರ ಆಗಮನವಾಗುವ ಸಾಧ್ಯತೆಯಿದೆ.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

ಇನ್ನೋವಾ ಕ್ರೈಸ್ಟಾದಲ್ಲಿರುವದಕ್ಕೆ ಸಮಾನವಾದ 2.4 ಲೀಟರ್ ಡೀಸೆಲ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

ಹಾಗೆಯೇ 2.8 ಲೀಟರ್ ಎಂಜಿನ್ 450 ಎನ್ ಎಂ ತಿರುಗುಬಲದಲ್ಲಿ 175 ಅಶ್ವಶಕ್ತಿಯನ್ನು ನೀಡಲಿದೆ. ಅಂತೆಯೇ ಆರು ಸ್ಪೀಡ್ ಮ್ಯಾನುವಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ದೇಶದ ಹಲವು ಗಣ್ಯ ವ್ಯಕ್ತಿಗಳು ಟೊಯೊಟಾ ಫಾರ್ಚ್ಯುನರ್ ಐಷಾರಾಮಿ ಕ್ರೀಡಾ ಬಳಕೆಯ ವಾಹನವನ್ನು ಆಶ್ರಯಿಸಿಕೊಂಡಿದ್ದಾರೆ. ಈಗ ಮತ್ತಷ್ಟು ಆಧುನಿಕತೆಗೆ ಮೊರೆ ಹೋಗುತ್ತಿರುವ ಸಂಸ್ಥೆಯು ಹೊಸ ತಲೆಮಾರಿನ ಫಾರ್ಚ್ಯುನರ್ ಬಿಡುಗಡೆ ಮಾಡುವ ತವಕದಲ್ಲಿದೆ.

ಡೀಲರ್ ಬಳಿ ತಲುಪಿದ ಟೊಯೊಟಾ ಫಾರ್ಚ್ಯುನರ್‌

ಇನ್ನೋವಾ ಕ್ರೈಸ್ಟಾಗಿಂತಲೂ ಗರಿಷ್ಠ ವೈಶಿಷ್ಟ್ಯ ಹಾಗೂ ಸುರಕ್ಷತೆಗಳನ್ನು ಹೊಸ ಫಾರ್ಚ್ಯುನರ್ ಕಾರಿನಲ್ಲಿ ಕಾಪಾಡಿಕೊಳ್ಳಲಾಗುವುದು. ಪ್ರೀಮಿಯಂ ವಿಭಾಗದಲ್ಲಿ ಹೊಸ ಅಲೆಯೆಬ್ಬಿಸುವುದು ಗ್ಯಾರಂಟಿ.

Most Read Articles

Kannada
English summary
2016 Toyota Fortuner Reaches Dealerships In India
Story first published: Monday, October 3, 2016, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X