ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಜರ್ಮನಿಯ ಐಕಾನಿಕ್ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್, ನವೀಕೃತ ಬೀಟ್ಲ್ ಕಾರನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ.

By Nagaraja

ಒಂದು ವರ್ಷದಷ್ಟು ಹಿಂದೆ ಹೊಸ ತಲೆಮಾರಿನ ಬೀಟ್ಲ್ ಕಾರು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ದೇಶವನ್ನು ತಲುಪಿದ ಫೋಕ್ಸ್ ವ್ಯಾಗನ್ ಬೀಟ್ಲ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 28.73 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಿತ್ತು. ಪ್ರಸ್ತುತ ಐಕಾನಿಕ್ ಕಾರೀಗ ಹೊಸ ಸ್ವರೂಪದೊಂದಿಗೆ ಕಾಲಿಡಲು ಸಜ್ಜಾಗುತ್ತಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಹೌದು, 2017ನೇ ಸಾಲಿನಲ್ಲಿ ನವೀಕೃತ ಫೋಕ್ಸ್ ವ್ಯಾಗನ್ ಬೀಟ್ಲ್ ಕಾರು ಭಾರತ ಮಾರುಕಟ್ಟೆಯನ್ನು ತಲುಪಲಿದೆ. ಆದರೆ ಬಿಡುಗಡೆ ದಿನಾಂಕ ಮಾತ್ರ ಇನ್ನಷ್ಟೇ ಬಯಲಾಗಬೇಕಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಹಳೆಯ ತಲೆಮಾರಿ ಫೋಕ್ಸ್ ವ್ಯಾಗನ್ ಬೀಟ್ಲ್ ಕಾರು 500ರಷ್ಟು ಯುನಿಟ್ ಗಳು ದೇಶದಲ್ಲಿ ಮಾರಾಟ ಕಂಡಿತ್ತು. ಈಗ ನೂತನ ಆವೃತ್ತಿಯೂ ಇದಕ್ಕಿಂತಲೂ ಹೆಚ್ಚಿನ ಮಾರಾಟವನ್ನು ಗುರಿಯಾಗಿರಿಸಲಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಇನ್ನೊಂದೆಡೆ ಹೊಸ ತಲೆಮಾರಿನ ಫೋಕ್ಸ್ ವ್ಯಾಗನ್ ಬೀಟ್ಲ್ 2016 ಅಕ್ಟೋಬರ್ 31ರಂದು ಬಿಡುಗಡೆಯಾಗಿತ್ತಲ್ಲದೆ ಇದುವರೆಗೆ 175 ಯುನಿಟ್ ಗಳಷ್ಟು ಮಾರಾಟವನ್ನು ಸಾಧಿಸಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಫೋಕ್ಸ್ ವ್ಯಾಗನ್ ಬೀಟ್ಲ್, ಜರ್ಮನಿಯ ಸಂಸ್ಥೆಯ ಪ್ರತಿಷ್ಠೆಯ ಸಂಕೇತವಾಗಿದೆ. ಹಾಗಾಗಿ ದಶಕಗಳ ಬಳಿಕವೂ ಈ ಕ್ಲಾಸಿಕ್ ಕಾರಿನ ಮಾರಾಟವನ್ನು ಜೀವಂತವಾಗಿರಿಸಿಕೊಂಡಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಪರಿಷ್ಕೃತ ಫೋಕ್ಸ್ ವ್ಯಾಗನ್ ಬೀಟ್ಲ್ ಕಾರಿನ ಆಯಾಮದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುದಿಲ್ಲ. ಬದಲಾಗಿ ಕಾರಿನ ಅಂದತೆಯಲ್ಲಿ ಬದಲಾವಣೆ ಕಂಡುಬರಲಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಕಳೆದ 70 ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಐಕಾನಿಕ್ ಕ್ಲಾಸಿಕ್ ವಿನ್ಯಾಸವನ್ನು ಮೈಗೂಡಿಸಿಕೊಳ್ಳಲಿದ್ದು, ಮೆಕ್ಸಿಕೊದಲ್ಲಿ ನಿರ್ಮಾಣವಾಗಿ ಭಾರತವನ್ನು ತಲುಪಲಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಕಾರಿನಡಿಯಲ್ಲಿ 1.4 ಲೀಟರ್ ಟಿಎಸ್ ಐ ಪೆಟ್ರೋಲ್ ಎಂಜಿನ್ ಜೋಡಣೆಯಾಗಲಿದ್ದು, 147 ಅಶ್ವಶಕ್ತಿ ಮತ್ತು ಏಳು ಸ್ಪೀಡ್ ಡಿಎಸ್ ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಫೋಕ್ಸ್ ವ್ಯಾಗನ್ ಬೀಟ್ಲ್ ದೇಶದ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಮಿನಿ ಕೂಪರ್, ಮರ್ಸಿಡಿಸ್ ಎ ಕ್ಲಾಸ್, ಬಿಎಂಡಬ್ಲ್ಯು 1 ಸಿರೀಸ್ ಮತ್ತು ಫಿಯೆಟ್ 500 ಅಬಾರ್ತ್ ಕಾರುಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಈ ನಡುವೆ ನೂತನ ಪಸ್ಸಾಟ್ ಮತ್ತು ಟೈಗ್ವಾನ್ ಮಾದರಿಯನ್ನು ಫೋಕ್ಸ್ ವ್ಯಾಗನ್ ಬಿಡುಗಡೆ ಮಾಡಲಿದೆ. ತದಾ ಬಳಿಕ 2017ನೇ ಸಾಲಿನ ದ್ವಿತಿಯಾರ್ಧದಲ್ಲಷ್ಟೇ ಹೊಸ ಬೀಟ್ಲ್ ಆಗಮನವಾಗುವ ಸಾಧ್ಯತೆಯಿದೆ.

ಫೋಕ್ಸ್‌ವ್ಯಾಗನ್ ಪ್ರತಿಷ್ಠಿತ ಕಾರು ನವೀಕೃತ ಬೀಟ್ಲ್ ಭಾರತಕ್ಕೆ

ಟೈಗ್ವಾನ್ ಕ್ರೀಡಾ ಬಳಕೆಯ ವಾಹನವು ಫೋಕ್ಸ್ ವ್ಯಾಗನ್ ಪಾಲಿಗೆ ನಿರ್ಣಾಯಕವೆನಿಸಲಿದೆ. ಏತನ್ಮಧ್ಯೆ ಸ್ಕೋಡಾ ಸಹ ಕೊಯಿಯಾಕ್ ಎಸ್ ಯುವಿ ಹೊರತರಲಿದೆ.

Most Read Articles

Kannada
English summary
Facelifted Volkswagen Beetle To Make Its Way To India In 2017; Here’s More
Story first published: Wednesday, November 30, 2016, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X