ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

Written By:

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ಸ್ ಭಾಗವಾಗಿರುವ ಕಿಯಾ ಮೋಟಾರ್ಸ್ ದೇಶಕ್ಕೆ ಲಗ್ಗೆಯಿಡುವ ಸಂಬಂಧಿಸಿದಂತೆ ಕಳೆದ ಕೆಲವು ಸಮಯಗಳಿಂದ ಚರ್ಚೆಯಲ್ಲಿದೆ. ಈಗ ಎಲ್ಲವೂ ಅಂತಿಮಗೊಳ್ಳುತ್ತಿದ್ದು, ಕಿಯಾ ಮೋಟಾರ್ಸ್ ಭಾರತಕ್ಕೆ ಅಧಿಕೃತ ದಾಪುಗಾಲು ಹಾಕಲು ಸಜ್ಜಾಗಿದೆ.

ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

ಹ್ಯುಂಡೈ ಮೋಟಾರ್ ಕಾರ್ಪೋರೇಷನ್ ಉಪಾಂಗ ಸಂಸ್ಥೆಯಾಗಿರುವ ಸಿಯೋಲ್ ತಳಹದಿಯ ಕಿಯಾ ಮೋಟಾರ್ಸ್, ಪ್ರಮುಖವಾಗಿಯೂ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಮಾರಾಟವನ್ನು ಹೊಂದಿದೆ.

ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

ನಿಧಾನವಾಗಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯನ್ನು ಕಿಯಾ ಗುರಿ ಮಾಡುತ್ತಿದೆ. ಸ್ಪರ್ಧಾತ್ಮಕ ಬೆಲೆಗಳಲ್ಲಿ ಗುಣಮಟ್ಟದ ಉತ್ಪನ್ನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ.

ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

ಕಿಯಾ ಕಾರು ಶ್ರೇಣಿಯನ್ನು ಗಮನಿಸಿದಾದ ಕಾಂಪಾಕ್ಟ್ ಪಿಕಾಂಟೊದಿಂದ ಆರಂಭವಾಗಿ ರಿಯೊ, ಸ್ಪೋರ್ಟೆಜ್ ಹಾಗೂ ಸೊರೆಂಟೊಗಳಂತಹ ಅತ್ಯುತ್ತಮ ಉತ್ಪನ್ನಗಳನ್ನು ಹೊಂದಿದೆ.

ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಎಸ್ ಯುವಿ ವಿಭಾಗದಲ್ಲಿ ಭಾರತದಲ್ಲಿ ಅತಿ ಹೆಚ್ಚಿನ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಕಿಯಾ ರಿಯೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಪರಿಪೂರ್ಣ ಆಯ್ಕೆಯಾಗಿರಲಿದೆ.

ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

ಕಿಯಾ ಸ್ಪೋರ್ಟೆಜ್ ಕ್ರೀಡಾ ಬಳಕೆಯ ವಾಹನ ಸಹ ಪ್ರಭಾವಶಾಲಿ ಎನಿಸೆಕೂಂಡಿದೆ. ಇದು ಅಮೆರಿಕ ಹಾಗೂ ಯುರೋಪ್ ಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದು, ಇದೇ ಯಶಸ್ಸನ್ನು ಭಾರತದಲ್ಲೂ ಮುಂದುವರಿಸಲಿದೆ.

ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

ಎರಡನೇ ಕೊರಿಯಾದ ಎರಡನೇ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯು ಆಗಿರುವ ಕಿಯಾ, ವಿಶ್ವಸಾರ್ಹ ಕಾರುಗಳ ನಿರ್ಮಾಣದಲ್ಲಿ ಹೆಸರು ಮಾಡಿದೆ.

ಭಾರತದತ್ತ ದಾಪುಗಾಲು ಹಾಕತೊಡಕಿದ ಕಿಯಾ ಮೋಟಾರ್ಸ್

ಹ್ಯುಂಡೈ ಕಾರುಗಳ ತಳಹದಿಯಲ್ಲಿ ಚಾಸೀ, ಎಂಜಿನ್ ಮತ್ತು ಗೇರ್ ಬಾಕ್ಸ್ ಗಳನ್ನು ಹಂಚಿಕೊಂಡರೂ ಕಿಯಾ ಕಾರುಗಳು ವಿಭಿನ್ನವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Read more on ಕಾರು car
English summary
Yes, Kia Motors Is Finally Coming To India!
Story first published: Saturday, November 19, 2016, 17:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark