ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

Written By:

ಟ್ರಕ್ ಕ್ಯಾಬಿನ್‌ಗಳನ್ನು ಹವಾನಿಯಂತ್ರಣಗೊಳಿಸಲು ಡಿಸೆಂಬರ್ 31, 2017ರ ಗಡುವನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

ಟ್ರಕ್ ಕ್ಯಾಬಿನ್‌ಗಳ ಹವಾನಿಯಂತ್ರಣಗೊಳಿಸುವಿಕೆ ಕಡ್ಡಾಯ ಮಾಡಲು ಏಪ್ರಿಲ್ 1ನೇ ತಾರೀಕು ಕೊನೆಯ ದಿನಾಂಕ ಎಂದಿದ್ದ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದ್ದು, ಗಡುವನ್ನು ಮುಂಬರುವ ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ.

ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

ಎಲ್ಲಾ N2(3.5 ಇಂದ 12 ಟನ್‌) ಮತ್ತು N3 (12 ಟನ್ ನಂತರ) ಟ್ರಕ್‌ಗಳು ಹವಾನಿಯಂತ್ರಣ ಕ್ಯಾಬಿನ್‌ಗಳನ್ನು ಹೊಂದಬೇಕು ಎಂದು ರಾಜ್ಯ ರಸ್ತೆ ಸಾರಿಗೆ, ಹೆದ್ದಾರಿಗಳು ಮತ್ತು ಶಿಪ್ಪಿಂಗ್ ಸಚಿವಾಲಯ ತಿಳಿಸಿತ್ತು.

ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

ಹವಾನಿಯಂತ್ರಿತ ಕ್ಯಾಬಿನ್‌ಗಳು ಚಾಲಕರಿಗೆ ಹೆಚ್ಚು ಅನುಕೂಲ ಒದಗಿಸಲಿದ್ದು, ಆದಷ್ಟು ವಾಹನ ಚಾಲಕರಿಗೆ ಆಯಾಸ ಕಡಿಮೆ ಮಾಡಲಿದೆ.

ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

ದೂರ ಪ್ರಯಾಣವನ್ನು ಮಾಡುವ ಟ್ರಕ್ ಚಾಲಕರು ಹೆಚ್ಚು ಆಯಾಸಗೊಳ್ಳುತ್ತಿದ್ದು, ಈ ಕಾರಣದಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿರುವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ ಎನ್ನಬಹುದು.

ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಮತ್ತು ಮೂರು ಲಕ್ಷ ಜನರು ಗಾಯಗೊಳ್ಳುತ್ತಿದ್ದರೆ. ಟ್ರಕ್‌ಗಳಲ್ಲಿ ಎಸಿ ಅಳವಡಿಕೆಯಿಂದಾಗಿ ಆ ಸಂಖ್ಯೆಯನ್ನು ಕಡಿಮೆಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

ಇತ್ತೀಚಿನ ಅಧಿಕೃತ ಮಾಹಿತಿ ಪ್ರಕಾರ, 2015ರಲ್ಲಿ ರಸ್ತೆ ಅಪಘಾತಗಳಿಂದಾಗಿ 1,46,133 ಲಕ್ಷ ಜನರು ಮರಣ ಹೊಂದಿದ್ದು, ಇದರಲ್ಲಿ ಶೇಕಡಾ 11.4 ರಷ್ಟು ಟ್ರಕ್ ಅಪಘಾತಗಳು ಎನ್ನಬಹುದು.

ಡಿಸೆಂಬರ್ 31ರ ನಂತರ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಿದ ಕೇಂದ್ರ

ಈ ಚಾಲಕನ ಆಯಾಸದ ಕಾರಣದಿಂದಾಗಿ ರಸ್ತೆ ಅಪಘಾತಗಳ ಏರಿಕೆ ಪರಿಗಣಿಸಿ ಅತ್ಯುತ್ತಮ ರೀತೀಯ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಸಿ ಕೋಣೆಗಳು ದೇಶದಾದ್ಯಂತ ಇರುವಂತಹ ಲಕ್ಷಾಂತರ ಟ್ರಕ್ ಚಾಲಕರ ಕಂಫರ್ಟ್ ಒದಗಿಸಲಿದೆ.

Read more on ಟ್ರಕ್ truck
English summary
The central government had issued a deadline of April 1, 2017, for air conditioned truck cabins. But now it has been extended to December 31, 2017.
Story first published: Thursday, July 27, 2017, 12:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark