ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿದ ಮೆಕ್‌ಲರೇನ್

Written By:

ಸೂಪರ್ ಕಾರು ಮಾದರಿಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಮೆಕ್‌ಲರೇನ್ ಸಂಸ್ಥೆಯು ತನ್ನ ಎಲ್ಲಾ ಸೂಪರ್ ಕಾರು ಮಾದರಿಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುತ್ತಿದ್ದು, ಈ ಕುರಿತಾದ ಮಹತ್ವದ ವರದಿ ಇಲ್ಲಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿದ ಮೆಕ್ಲರ್ನ್‌

ಬ್ರಿಟಿಷ್ ಸೂಪರ್ ಕಾರು ಉತ್ಪಾದನಾ ಸಂಸ್ಥೆಯಾದ ಮೆಕ್‌ಲರೇನ್ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಹತ್ವದ ಯೋಜನೆ ರೂಪಿಸುತ್ತಿದ್ದು, 2018ರ ಹೊತ್ತಿಗೆ ಎಲ್ಲಾ ಸೂಪರ್ ಕಾರು ಮಾದರಿಗಳನ್ನು ಡಿಸೇಲ್, ಪೆಟ್ರೋಲ್ ಮಾದರಿಗಳಂತೆ ಎಲೆಕ್ಟ್ರಿಕ್ ಎಂಜಿನ್ ಜೊತೆ ಅಭಿವೃದ್ಧಿಗೊಳಿಸಲಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿದ ಮೆಕ್ಲರ್ನ್‌

ಇದರ ಜೊತೆಗೆ ಸೂಪರ್ ಪವರ್ ಎಲೆಕ್ಟ್ರಿಕ್ ಎಂಜಿನ್‌ಗಳನ್ನು ಪರಿಚಯಿಸಲು ಉದ್ದೇಶಿಸಿರುವ ಮೆಕ್‌ಲರೇನ್, ಉತ್ತಮ ಕಾರ್ಯನಿರ್ವಹಣೆಗಾಗಿ ಅಂತರಾಷ್ಟ್ರೀಯ ಮಟ್ಟದ ತಜ್ಞರೊಂದಿಗೆ ಹೊಸ ವೈಶಿಷ್ಟ್ಯತೆಗಳನ್ನು ಅಭಿವೃದ್ಧಿಪಡಿಸಲಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿದ ಮೆಕ್ಲರ್ನ್‌

ಇನ್ನೊಂದು ವಿಚಾರವೆಂದರೆ ಆಯ್ದ ಗ್ರಾಹಕರಿಗೆ ಮಾತ್ರ ಎಲೆಕ್ಟ್ರಿಕ್ ಎಂಜಿನ್‌ಗಳನ್ನು ಒದಗಿಸಲು ಚಿಂತಿಸಿರುವ ಮೆಕ್ಲರ್ನ್ ಸಂಸ್ಥೆಯು, ಮೊದಲಿಗೆ ಪಿ15 ಮತ್ತು ಮೂರು ಆಸನವುಳ್ಳ ಬಿಪಿ23 ಸೂಪರ್ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿದ ಮೆಕ್ಲರ್ನ್‌

ಕೇವಲ ಎಲೆಕ್ಟ್ರಿಕ್ ಅಷ್ಟೇ ಅಲ್ಲದೇ 2022ರ ವೇಳೆಗೆ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡಲಿರುವ ಮೆಕ್‌ಲರೇನ್, ಪ್ರತಿಷ್ಠಿತ ಫಾರ್ಮುಲಾ ಇ ರೇಸ್‌ಗಳಲ್ಲಿ ತನ್ನ ಎಲೆಕ್ಟ್ರಿಕ್ ಉತ್ಪನ್ನಗಳೊಂದಿಗೆ ಹೊಸ ಸಾಧನೆಯ ಮಾಡುವ ತವಕದಲ್ಲಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿದ ಮೆಕ್ಲರ್ನ್‌

ಹೀಗಾಗಿಯೇ ಎಲೆಕ್ಟ್ರಿಕ್ ಕಾರುಗಳ ಜೊತೆ ಜೊತೆಗೆ 2018ರ ವೇಳೆ ಸ್ಪೋರ್ಟ್ ಮಾದರಿಯ ಹೈಬ್ರಿಡ್ ಕಾರುಗಳನ್ನು ಬಿಡುಗೊಳಿಸಲಿದ್ದು, ಸೂಪರ್ ಕಾರು ಮಾದರಿಗಳಲ್ಲೇ ಮೆಕ್‌ಲರೇನ್ ಹೊಸ ಅಧ್ಯಾಯ ಸೃಷ್ಠಿಸುವುದಲ್ಲಿ ಯಾವುದೇ ಅನುಮಾನವಿಲ್ಲ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೆ ವಿಶೇಷ ಯೋಜನೆ ರೂಪಿಸಿದ ಮೆಕ್ಲರ್ನ್‌

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಕಾರು ಮಾದರಿಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಮೆಕ್‌ಲರೇನ್ ಸಂಸ್ಥೆ ಮಹತ್ವದ ಯೋಜನೆ ರೂಪಿಸುವ ಮೂಲಕ ಸೂಪರ್ ಕಾರುಗಳ ಮಾದರಿಗಳಲ್ಲಿ ಹೊಸ ಭರವಸೆ ಮೂಡಿಸಲಿದೆ.

English summary
Read in Kannada about All-Electric McLaren Supercar In The Works.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark