ಬೆನೆಲ್ಲಿ ಸಂಸ್ಥೆಯ ಮತ್ತೊಂದು ಕ್ರೂಸರ್ ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

Written By:

ಇಟಾಲಿಯನ್ ಮೋಟಾರ್ ಸೈಕಲ್ ತಯಾರಕ ಕಂಪೆನಿಯಾಗಿರುವ ಬೆನೆಲ್ಲಿ ಭಾರತದಲ್ಲಿ ಕ್ರೂಸರ್ ಮಾದರಿಯನ್ನು ಪರೀಕ್ಷಿಸುತ್ತಿದ್ದು, ಸದ್ಯದರಲ್ಲಿಯೇ ಬಿಡುಗಡೆಯಾಗಲಿರುವ ಈ ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಬೆನೆಲ್ಲಿ ಸಂಸ್ಥೆಯ ಮತ್ತೊಂದು ಕ್ರೂಸರ್ ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಪುಣೆ ರಸ್ತೆಗಳ ಮೇಲೆ ಪರೀಕ್ಷಿಸುತ್ತಿರುವ ವೇಳೆಯಲ್ಲಿ ಹೆಚ್ಚು ಮರೆಮಾಡಲಾಗಿರುವ ಸ್ಥಿತಿಯಲ್ಲಿ ಕಾಣಿಸಿಕೊಡಿರುವ ಈ ಹೊಚ್ಚ ಹೊಸ ಮಾದರಿಯ ಮೊಟೊಬಿ-250 ಮೋಟಾರ್ ಸೈಕಲ್ ಪತ್ತೆಯಾಗಿದ್ದು, ಸದ್ಯ ಕಾಣಿಸಿಕೊಂಡಿರುವ ಈ ಬೈಕ್ ನಿರ್ಮಾಣ ಆವೃತ್ತಿಯಗಿದೆ ಎಂದು ತಿಳಿದುಬಂದಿದೆ.

ಬೆನೆಲ್ಲಿ ಸಂಸ್ಥೆಯ ಮತ್ತೊಂದು ಕ್ರೂಸರ್ ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಬೆನೆಲ್ಲಿ ಮೊಟೊಬಿ 250 ಮೋಟಾರ್ ಸೈಕಲ್ ಈಗಾಗಲೇ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ವಾಹನದ ಬೆಲೆ ಇಂಡೋನೇಷ್ಯಾದಲ್ಲಿ Rp 35.6 ಮಿಲಿಯನ್(ಭಾರತದಲ್ಲಿ ಸುಮಾರು 1.7 ಲಕ್ಷ ರೂ) ಬೆಲೆ ಹೊಂದಿದೆ.

ಬೆನೆಲ್ಲಿ ಸಂಸ್ಥೆಯ ಮತ್ತೊಂದು ಕ್ರೂಸರ್ ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಈ ಬೈಕ್ 251.8 ಸಿಸಿ ದ್ರವದಿಂದ ತಂಪಾಗುವ ಸಮಾನಾಂತರ-ಟ್ವಿನ್ ಎಂಜಿನ್ ಪಡೆದುಕೊಂಡಿದ್ದು, 16.5 ಏನ್‌ಎಂ ತಿರುಗುಬಲದಲ್ಲಿ 17.4 ರಷ್ಟು ಟಾರ್ಕ್ ಉತ್ಪಾದನೆ ಮಾಡಲಿದೆ ಹಾಗು 5-ವೇಗದ ಗೇರ್ ಬಾಕ್ಸ್ ಜೋಡಣೆಗೊಂಡಿದೆ.

ಬೆನೆಲ್ಲಿ ಸಂಸ್ಥೆಯ ಮತ್ತೊಂದು ಕ್ರೂಸರ್ ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಮೊಟೊಬಿ-250 ಬಸ್ಸಿನೆಟ್ ರೀತಿಯ ಫ್ರೇಮ್ ಆದರಿತವಾಗಿರುವ ಕ್ರೂಸರ್ ಬೈಕ್ ಆಗಿದ್ದು, ಮುಂಭಾಗದಲ್ಲಿ ಒಂದು ಡಿಸ್ಕ್ ಹೊಂದಿರುವ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ರೀತಿಯ ಬ್ರೇಕ್ ಪಡೆದುಕೊಂಡಿದೆ. ಕಾಣಿಸಿರುವ ಬೈಕಿನಲ್ಲಿ ಎಬಿಎಸ್ ಸೌಲಭ್ಯವಿಲ್ಲ ಎಂಬುದು ತಿಳಿದು ಬರುತ್ತದೆ.

ಬೆನೆಲ್ಲಿ ಸಂಸ್ಥೆಯ ಮತ್ತೊಂದು ಕ್ರೂಸರ್ ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಈ ಮೋಟಾರ್ ಸೈಕಲ್ 14 ಲೀಟರ್‌ನಷ್ಟು ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿದ್ದು, ಕೆಲವೇ ತಿಂಗಳಿನಲ್ಲಿ ಮೊಟೊಬಿ-250 ಭಾರತದಲ್ಲಿ ಬಿಡುಗಡೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಬೆನೆಲ್ಲಿ ಸಂಸ್ಥೆಯ ಮತ್ತೊಂದು ಕ್ರೂಸರ್ ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

ಬೆನೆಲ್ಲಿ ತನ್ನ ಮತ್ತೆರಡು ಮೋಟಾರ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಬಜಾಜ್ ಅವೆಂಜರ್ 220, ಯುಎಂ ರೆನೆಗಡೆ ಕಮಾಂಡೊ ಮತ್ತು ಹೈಸಂಗ್ ಅಕ್ವಿಲಾ 250 ಕ್ರೂಸರ್ ಬೈಕುಗಳೊಂದಿಗೆ ಈ ಮೊಟೊಬಿ-250 ದ್ವಿಚಕ್ರ ವಾಹನ ಸ್ಪರ್ಧೆ ನೆಡೆಸಲಿದೆ.

English summary
Italian motorcycle manufacturer Benelli is testing a cruiser in India. IAB has spotted the MotoBi-250 in Pune; the spotted model appears to be the production version.
Story first published: Friday, August 4, 2017, 19:02 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark