ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ವಾಣಿಜ್ಯ ವಾಹನಗಳ ಉತ್ವಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ್ ಬೆಂಝ್ ಸಂಸ್ಥೆಯು, ಪ್ರಸ್ತುತ ತಂತ್ರಜ್ಞಾನಗಳನ್ನು ಹೊಂದಿರುವ ಹೆವಿ ಡ್ಯೂಟಿ ಟ್ರಕ್ಸ್‌ಗಳನ್ನು ಬಿಡುಗಡೆಗೊಳಿಸಿದೆ.

By Praveen

ಭಾರತೀಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಬೇಡಿಕೆಗೆ ಅನುಗುಣವಾಗಿ ಹೊಚ್ಚ ಹೊಸ ಹೆವಿ ಡ್ಯೂಟಿ ಟ್ರಕ್ಸ್‌ಗಳನ್ನು ಬಿಡುಗಡೆಗೊಳಿಸಿರುವ ಭಾರತ್ ಬೆಂಝ್ ಸಂಸ್ಥೆಯು, ಪ್ರಮುಖ ಟ್ರಕ್ ಮಾದರಿಗಳಿಗೆ ತ್ರೀವ ಸ್ಪರ್ಧೆ ಒಡ್ಡುವ ತವಕದಲ್ಲಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಈ ಹಿಂದಿನ ಬಿಎಸ್ 3 ವಾಹನಗಳ ಬೆಲೆಗಳನ್ನೇ ಮುಂದುವರಿಸಿರುವ ಭಾರತ್ ಬೆಂಝ್, ಪ್ರಸ್ತುತ ಬೆಲೆಗಳಲ್ಲಿ ಬಿಎಸ್ 4 ವಾಹನಗಳನ್ನು ಬಿಡುಗಡೆಗೊಳಿಸಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಹೊಸದಾಗಿ ಬಿಡುಗಡೆಗೊಂಡಿರುವ ವಾಹನಗಳು ಉತ್ತಮ ಇಂಧನ ಕಾರ್ಯಕ್ಷಮತೆ ಹೊಂದಿದ್ದು, ಕಡಿಮೆ ನಿರ್ವಹಣಾ ವೆಚ್ಚದ ಜೊತೆ ಸಾಕಷ್ಟು ಸುರಕ್ಷಾ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಹೊಸ ಶ್ರೇಣಿಯ ಟ್ರಕ್ ಮಾದರಿಗಳಲ್ಲಿ ಹೊರಗಿನ ಮಾರ್ಪಾಡುಗಳಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಟ್ರಕ್ ಮುಂಭಾಗದಲ್ಲಿ ಸಿಗ್ನೇಟರ್ ಗ್ರಿಲ್ ಮತ್ತು ಹೊಸ ರೀತಿ ಎಲ್ಇಡಿ ಡಿಆರ್‌ಎರ್ ಸೌಲಭ್ಯ ಹೊಂದಿವೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಬೆಂಝ್ ಟ್ರಕ್‌ಗಳಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಟ್ರಕ್‌ ಒಳಭಾಗದಲ್ಲಿ ತೊಳೆಯಬಹುದಾದ ಫ್ಯಾಬ್ರಿಕ್ ಸೀಟ್‌ಗಳನ್ನು ಹೊಂದಿದೆ. ಜೊತೆಗೆ ಕಪ್ಪು ಥೀಮ್ ಡ್ಯಾಶ್‌ಬೋರ್ಡ್ ಮತ್ತು ಉನ್ನತ-ಮಟ್ಟದ ಮಾದರಿಗಳಲ್ಲಿ ವುಡ್ ವರ್ಕ್ಸ್ ಒಳಗೊಂಡಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಬಿಎಸ್ 3 ವಾಹನಗಳ ನಿಷೇಧಕ್ಕೂ ಮುನ್ನವೇ ಬಿಎಸ್ 4 ವಾಹನಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಆರಂಭಿಸಿದ್ದ ಭಾರತ್ ಬೆಂಝ್ ಸಂಸ್ಥೆಯು, ಸದ್ಯ ಟ್ರಕ್ ಮಾದರಿಗಳ ಜೊತೆಗೆ ಟ್ರ್ಯಾಕ್ಟರ್ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಈಗಾಗಲೇ ಹೊಸ ಮಾದರಿಯ 1 ಸಾವಿರ ಟ್ರಕ್‌ಗಳನ್ನು ಮಾರಾಟಗೊಳಿಸಿರುವ ಭಾರತ್ ಬೆಂಝ್, ಎಸ್‌ಎಸ್ಆರ್ ತಂತ್ರಜ್ಞಾನೊಂದಿಗೆ ಬಿಎಸ್ 4 ವಾಹನಗಳನ್ನು ಅಭಿವೃದ್ಧಿಗೊಳಿಸಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಭಾರತ್ ಬೆಂಝ್ ಟ್ರಕ್‌ಗಳಲ್ಲಿ ಕಡಿಮೆ ನಿರ್ವಹಣಾ ಮತ್ತು ಹೆಚ್ಚು ಬಾಳಿಕೆ ಬರುವಂತಹ ಕ್ಲಚ್ ಹಾಗೂ ಬ್ರೇಕ್ ಲೈನಿಂಗ್ ಜೋಡಿಸಲಾಗಿದ್ದು, ಹಿಂದಿನ ಮಾದರಿಗಿಂತ 400 ಕೆಜಿ ಭಾರವನ್ನು ಕಡಿತಗೊಳಿಸಲಾಗಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಹೊಸ ಶ್ರೇಣಿಯ ಟ್ರಕ್‌ಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನಹರಿಸಲಾಗಿದ್ದು, ಕ್ರೂಸ್ ಕಂಟ್ರೋಲರ್ ಮತ್ತು ಇಂಧನ ಕಳ್ಳತನ ತಡೆಗೆ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಹೊಸ ವೆಶಿಷ್ಟ್ಯತೆಗಳ ಜೊತೆ ಜೊತೆಗೆ ಟ್ಯೂಬ್‌ಲೆಸ್ ಟೈರ್‌ಗಳು, ಎಸಿ ಮತ್ತು ಪ್ರಿಮಿಯಂ ಮಾದರಿಗಳಲ್ಲಿ ರಿವರ್ಸ್ ಕ್ಯಾಮರಾ ಸೌಲಭ್ಯವನ್ನು ಒಳಗೊಂಡಿರುತ್ತವೆ.

ಹಳೆಯ ಬೆಲೆಗಳೊಂದಿಗೆ ಬಿಡುಗಡೆಗೊಂಡ ಹೊಚ್ಚ ಹೊಸ ಭಾರತ್ ಬೆಂಝ್ ಹೆವಿ ಡ್ಯೂಟಿ ಟ್ರಕ್ಸ್

ಒಟ್ಟಿನಲ್ಲಿ ಹೊಸ ಮಾದರಿಯಲ್ಲಿ ಸಿದ್ಧಗೊಂಡು ಹಳೆ ಬೆಲೆಗಳಲ್ಲಿ ಮಾರಾಟಗೊಳ್ಳುತ್ತಿರುವ ಭಾರತ್ ಬೆಂಝ್ ಟ್ರಕ್‌ಗಳು, ಸದ್ಯ ಟಾಟಾ ಮತ್ತು ವೊಲ್ಪೋ ಟ್ರಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ.

Most Read Articles

Kannada
Read more on ಬೆಂಝ್
English summary
Raed in Kannada about Bharat-Benz has launched its new range of heavy duty trucks in the Indian market.
Story first published: Monday, May 29, 2017, 13:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X