ರಾಜ್ಯ ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

Written By:

ಬೆಂಗಳೂರಿನಲ್ಲಿ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗೆ ಅಸ್ತು ಎಂದಿರುವ ಸಿಎಂ ಸಿದ್ಧರಾಮಯ್ಯನವರು, 150 ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಅಸ್ತು ಎಂದಿದ್ದಾರೆ. ಜೊತೆಗೆ ಕೆಎಸ್‌ಆರ್‌ಟಿಸಿಗೆ ನೂತನವಾಗಿ 3250 ಬಸ್‌ಗಳನ್ನು ಒದಗಿಸುವ ಬೃಹತ್ ಯೋಜನೆಗೂ ಅನುಮೋದನೆ ನೀಡಿದ್ದಾರೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಬಹುದಿನಗಳಿಂದಲೂ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆಗೆ ಚಿಂತನೆ ನಡೆದಿತ್ತು. ಇದಕ್ಕಾಗಿ ಕಳೆದ ಬಾರಿಯೇ ಹಲವು ಯೋಜನೆಗಳನ್ನು ರೂಪಿಸಿದ್ದರೂ ಹಣಕಾಸು ವಿಚಾರವಾಗಿ ಬೃಹತ್ ಯೋಜನೆಗೆ ಹಿನ್ನೆಡೆಯಾಗಿತ್ತು. ಆದ್ರೆ ಈ ಬಾರಿಯ ಬಜೆಟ್‍ನಲ್ಲಿ ಅನುಮೋದನೆ ನೀಡಲಾಗಿದೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಇನ್ನು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಬಸ್‍‌ಗಳಲ್ಲಿನ ಪ್ರಯಾಣವೇ ಉತ್ತಮವಾಗಿರಲಿದೆ. ಜೊತೆಗೆ ಪರಿಸರ ಸ್ನೇಹಿಯಾಗಿರುವುದಲ್ಲದೇ ಕಡಿಮೆ ನಿರ್ವಹಣೆಯೂ ಇರಲಿದೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ಈ ಹಿಂದೆಯೇ ಯೋಜನೆ ರೂಪಿಸಿದ್ದ ಬಿಎಂಟಿಸಿ, ರಾಜ್ಯ ಸರ್ಕಾರದ ಅನುಮೋದನೆಗಾಗಿ ಯೋಜನೆಯ ಕರುಡು ಪ್ರತಿ ಕಳುಹಿಸಿತ್ತು. ಆದ್ರೆ ಹಣಕಾಸು ಕೊರತೆಯ ಮಧ್ಯೆಯು ಬೃಹತ್ ಯೋಜನೆಗೆ ಅಸ್ತು ಎಂದಿರುವ ರಾಜ್ಯ ಸರ್ಕಾರವು, ಕೆಎಸ್‌ಆರ್‌ಟಿಸಿಗೂ ಹೆಚ್ಚುವರಿಯಾಗಿ 3250 ಬಸ್‌ಗಳ ಖರೀದಿಗೂ ಹಣ ಬಿಡುಗಡೆಗೆ ಅನುಮೋದನೆ ನೀಡಿದೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಕೇಂದ್ರ ಸರ್ಕಾರದ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಸಮಿತಿ ಅಡಿ ವಿದ್ಯುತ್ ಚಾಲಿತ ಬಸ್‌ಗಳನ್ನು ಅಳವಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಬಿಎಂಟಿಸಿ ಈಗಾಗಲೇ ತಾತ್ವಿಕ ಅನುಮೋದನೆ ಕೂಡಾ ನೀಡಿದೆ. ಹೀಗಾಗಿ ಯೋಜನೆಗೆ ಈಗಾಗಲೇ ಪೂರ್ವ ತಯಾರಿ ಕೂಡಾ ನಡೆದಿದೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಮೊನ್ನೆಯಷ್ಟೇ ಯುಐಟಿಪಿ ಇಂಡಿಯಾ ಸೆಮಿನಾರ್‌ನಲ್ಲಿ ಭಾಗಿಯಾಗಿದ್ದ ಬಿಎಂಟಿಸಿ ಎಂ.ಡಿ ಏಕ್‌ರೂಪ್ ಕೌರ್, ಅತ್ಯುತ್ತಮ ಸಾರಿಗೆ ವ್ಯವಸ್ಥೆಗೆ ಎಲೆಕ್ಟ್ರಿಕ್ ಬಸ್‌ಗಳ ಅವಶ್ಯಕತೆ ಎಂದಿದ್ದರು. ಅಂತೆಯೇ ಇದೀಗ ಬೃಹತ್ ಯೋಜನೆ ಜಾರಿ ಬರುತ್ತಿದ್ದು, ಬಜೆಟ್‌ನಲ್ಲಿ ಭಾರೀ ಪ್ರಮಾಣದ ಅನುದಾನ ಸಿಕ್ಕಿದೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಕೇವಲ ಎಲೆಕ್ಟ್ರಿಕ್ ಬಸ್‌ಗಳ ಯೋಜನೆಗೆ ಒತ್ತು ನೀಡದ ರಾಜ್ಯ ಸರ್ಕಾರ ರಾಜ್ಯದ ವಿವಿಧ ಸಾರಿಗೆ ನಿಗಮಗಳ ಬೇಡಿಕೆಗೆ ಸ್ಪಂದಿಸಿದೆ. ಹೀಗಾಗಿ ರಾಜ್ಯ ಸಾರಿಗೆ ಇಲಾಖೆಗೆ ಹೊಸ ಹೊಸ ಯೋಜನೆಗಳಿಗೆ ಬಜೆಟ್‌ನಲ್ಲಿ ಮನ್ನಣೆ ನೀಡಲಾಗಿದ್ದು, ಸಿದ್ದು ಜಾಣ್ಮೆಯ ಬಜೆಟ್‌ ಮಂಡಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಇದಷ್ಟೇ ಅಲ್ಲದೇ ಎಲೆಕ್ಟ್ರಿಕ್ ಬಸ್‌ಗಳನ್ನು ಬಳಸಲಿರುವ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದ್ದು, ಮಾಲಿನ್ಯ ತಡೆಗಟ್ಟುವ ಉದ್ದೇಶ ಹೊಂದಲಾಗಿದೆ.

ಸಿದ್ದು ಬಜೆಟ್ 2017: ಬೆಂಗಳೂರಿನಲ್ಲಿ ಇನ್ಮುಂದೆ ರಸ್ತೆಗಿಳಿಯಲಿವೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು..!!

ಎಲ್ಲವೂ ಅಂದುಕೊಂಡತ್ತೆ ಆದಲ್ಲಿ ಈ ವರ್ಷಾಂತ್ಯಕ್ಕೆ ಎಲೆಕ್ಟ್ರಿಕ್ ಬಸ್‌ಗಳು ಸೇವೆಗೆ ಸಿದ್ಧವಾಗಲಿದ್ದು, ಈಗಲಾದ್ರೂ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಬಿಳುತ್ತಾ ಕಾಯ್ದು ನೋಡಬೇಕಿದೆ.

ಟೊಯೊಟಾ ಪ್ರಿಯಸ್ ಕಾರುಗಳ ಚಿತ್ರಗಳ ಗ್ಯಾಲರಿ

ಹೊಚ್ಚ ಹೊಸ ಟೊಯೊಟಾ ಪ್ರಿಯಸ್ ಕಾರುಗಳ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಬಜೆಟ್ budget
English summary
Karnataka Budget 2017-18: KSRTC to get Additional 3250 Buses and Bengaluru to have 150 Electric Buses shortly.
Please Wait while comments are loading...

Latest Photos