ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

Written By:

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಜಗತ್ತಿನಾದ್ಯಂತ ನೂರಾರು ಸಂಶೋಧನೆಗಳು ನಡೆಯುತ್ತಿದ್ದು, ಪರಿಸರದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿರುವ ಡೀಸೆಲ್ ಎಂಜಿನ್ ವಾಹನಗಳಿಂದಾಗುತ್ತಿರುವ ಹಾನಿ ಕುರಿತಾದ ಮಾಹಿತಿ ಇಲ್ಲಿದೆ.

ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

ನಾವೇಲ್ಲಾ ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ದುಡ್ಡು ನೀರಿನಂತೆ ಖರ್ಚಾಗುತ್ತದೆ ಅಂತಾ ತಲೆಕೆಡಿಸಿಕೊಳ್ಳೊದು ಕಾಮನ್. ಆದ್ರೆ ಬೆಲೆ ಏರಿಕೆಗಿಂತಲೂ ಗಂಭೀರ ಪರಿಣಾಮ ಒಂದು ಪರಿಸರದ ಮೇಲೆ ಉಂಟಾಗುತ್ತಿರುವುದು ನಾವು ಹೆಚ್ಚು ಇಷ್ಟಪಡುತ್ತಿರುವ ಡೀಸೆಲ್ ವಾಹನಗಳಿಂದ ಅಂದ್ರೆ ತಪ್ಪಾಗಲಾರದು.

ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

ಹೌದು, ಕೇಂದ್ರಿಯ ವಿಜ್ಞಾನ ಮತ್ತು ಪರಿಸರ ಅಧ್ಯಯನ ಇಲಾಖೆ(ಸಿಎಸ್‌ಸಿ) ಬಹಿರಂಗ ಪಡಿಸಿರುವ ಅಧ್ಯಯನವೊಂದರಲ್ಲಿ ಇಂತದೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಪೆಟ್ರೋಲ್ ಎಂಜಿನ್ ವಾಹನಗಳಿಂದ ಡೀಸೆಲ್ ಎಂಜಿನ್ ವಾಹನಗಳೇ ಮೊಸ್ಟ್ ಡೇಂಜರ್ ಎಂಬುವುದು ಸಾಬೀತಾಗಿದೆ.

ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

ಈಗ ಎಲ್ಲರ ಬಾಯಲ್ಲೂ ಡೀಸೆಲ್ ವಾಹನದ್ದೇ ಜಪ. ಕಾರು ಡೀಲರ್‌ಗಳಂತೂ ಡೀಸೆಲ್ ವಾಹನಗಳ ವಿಚಾರಣೆಯಿಂದ ದಂಗಾಗಿದ್ದಾರೆ. ಇತ್ತೀಚೆಗಂತೂ ಡೀಸೆಲ್ ವೆಹಿಕಲ್ ಕ್ರೇಜ್ ವಿಪರೀತವಾಗಿದೆ. 2015-116ರಲ್ಲಿ ಡೀಸೆಲ್ ಆಧಾರಿತ ಎಸ್‌ಯುವಿಗಳಿಗೆ ಶೇ.35ರಷ್ಟು ಬೇಡಿಕೆ ಹೆಚ್ಚಿದೆ ಅಂದ್ರೆ ನಂಬಲೇಬೇಕು.

ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

ಇದೇ ಕಾರಣಕ್ಕೆ ಪೆಟ್ರೋಲ್ ವಾಹನಗಳಿಂತ ಡೀಸೆಲ್ ವಾಹನಗಳು ಶೇ.25 ರಿಂದ ಶೇ.65ರಷ್ಟು ಹಾನಿ ಎಂದು ಉಲ್ಲೇಖಿಸಿರುವ ಸಿಎಸ್‌ಸಿ, ಅತಿಯಾದ ಇಂಗಾಲ ಮೊನಾಕ್ಸೈಡ್ ಹೈಡ್ರೋಕಾರ್ಬನ್ ಹೊರಸೂಸುವಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

ಆರೋಗ್ಯದ ಮೇಲೆ ಎಫೆಕ್ಟ್

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಾರ್ವಜನಿಕ ಆರೋಗ್ಯ ಸಂಘಟನೆಗಳು ಈಗಾಗಲೇ ಡೀಸೆಲ್ ವಾಹನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಇದರ ಮಾಲಿನ್ಯವು ಕ್ಯಾನ್ಸರ್‌‌ಗೆ ಕಾರಕವಾಗಿವೆ. ಇದು ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿವೆ ಅಂತಾರೆ ತಜ್ಞರು.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

ಸಾಮಾನ್ಯವಾಗಿ ಇಂಧನಗಳಲ್ಲಿರುವ ಪ್ರಮುಖ ಮಾಲಿನ್ಯಕಾರಕ ಅಂಶಗಳೆಂದರೆ ನೈಟ್ರಸ್ ಆಕ್ಸೈಡ್ (ಎನ್‌ಒ2) ಮತ್ತು ಕಣಗಳು. ಇಂಥ ಮಾಲಿನ್ಯಕಾರಕ ಅಂಶಗಳನ್ನು ಹೊರಸೂಸಲು ಪೆಟ್ರೋಲ್ ವಾಹನಕ್ಕಿಂತ ಡೀಸೆಲ್ ವಾಹನಕ್ಕೆ ಹೆಚ್ಚಿನ ಅನುಮತಿ ಇದೆ. ಅರ್ಥಾತ್ ಡೀಸೆಲ್ ಕಾರುಗಳು ಪೆಟ್ರೋಲ್ ಕಾರಿಗಿಂತ ಮೂರು ಪಟ್ಟು ಜಾಸ್ತಿ ಎನ್‌ಒ2ವನ್ನು ಹೊರಸೂಸಬಹುದೆನ್ನುತ್ತಾರೆ ಸಿಎಸ್‌ಇ ನಿರ್ದೇಶಕಿ ಅನುಮಿತಾ ಚೌಧರಿ.

ಅಧ್ಯಯನ- ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳೇ ಹೆಚ್ಚು ಡೇಂಜರ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸಾಮಾನ್ಯವಾಗಿ ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರು ಆವೃತ್ತಿಗಳು ಹೆಚ್ಚಿನ ಮೈಲೇಜ್ ಹೊಂದಿದ್ದು, ಡೀಸೆಲ್ ಕಾರು ಹೆಚ್ಚಳ ಇದು ಕೂಡಾ ಪ್ರಮುಖ ಕಾರಣ. ಹೀಗಾಗಿಯೇ ಪರಿಸರ ಮಾಲಿನ್ಯಕ್ಕೆ ಡಿಸೇಲ್ ಕಾರುಗಳ ಕೊಡುಗೆ ತುಸು ಹೆಚ್ಚೆ ಎಂದು ಹೇಳಬಹುದು. ಇದರಿಂದಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಗಳ ಜಾರಿ ಅಗತ್ಯವಿದೆ.

English summary
Read in Kannada about Diesel SUVs And Cars Emit More Harmful Gases Than Petrol Vehicles.
Story first published: Monday, August 14, 2017, 14:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark