ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ..!!

Written By:

ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ತಡೆಯುವ ಉದ್ದೇಶದಿಂದ ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡು ಸರ್ಕಾರವು ಚಾಲನೆ ಸಂದರ್ಭದಲ್ಲಿ ಡ್ರೈವಿಂಗ್ ಲೈಸೆನ್ಸ್ ಮೂಲ ಪ್ರತಿ ಹೊಂದಿರುವುದನ್ನ ಕಡ್ಡಾಯಗೊಳಿಸಿದೆ.

To Follow DriveSpark On Facebook, Click The Like Button
ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ

ಈ ಹಿಂದೆ ವಿವಿಧ ಅಪಘಾತ ಪ್ರಕರಣಗಳ ಸಂಬಂಧಿಸಿದಂತೆ 9500 ಡ್ರೈವಿಂಗ್ ಲೈಸೆನ್ಸ್‌ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದ ತಮಿಳುನಾಡು ಸರ್ಕಾರ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ವಾಹನ ಚಾಲನೆ ಸಂದರ್ಭದಲ್ಲಿ ಮೂಲ ಪ್ರತಿ ಹೊಂದುವುದನ್ನು ಕಡ್ಡಾಯ ಮಾಡಿದೆ.

ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ

ಇಷ್ಟು ದಿನಗಳ ಕಾಲ ಬಹುತೇಕ ವಾಹನ ಸವಾರರು ಮೂಲ ಪ್ರತಿಗೆ ಬದಲಾಗಿ ನಕಲು ಪ್ರತಿ ಹೊಂದಿರುತ್ತಿದ್ದರು. ಆದ್ರೆ ಅಪರಾಧ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೂಲ ಪ್ರತಿಯನ್ನೇ ಹೊಂದುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಭಾರೀ ಪ್ರಮಾಣದ ದಂಡ ತೆರಬೇಕಿದೆ.

ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ

ಅಲ್ಲದೇ ಕಳೆದ ವರ್ಷ ತಮಿಳುನಾಡು ಒಂದರಲ್ಲೇ 13 ಸಾವಿರ ಜನ ಅಪಘಾತದಲ್ಲಿ ದುರ್ಮಕ್ಕಿಡಾಗಿದ್ದು, ಈ ವಿಚಾರವಾಗಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿತ್ತು.

ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ

ಜೊತೆಗೆ ಅಪರಾಧಗಳ ಸಂಖ್ಯೆಯನ್ನು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಇದೇ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳನ್ನು ಕಠಿಣಗೊಳಿಸಿದ್ದ ತಮಿಳುನಾಡು ಪೊಲೀಸರು ಮೊದಲ ಹಂತದಲ್ಲಿ 9500 ಚಾಲನಾ ಪರವಾಗಿಗೆಗಳನ್ನು ರದ್ದುಗೊಳಿಸಿದ್ದರು.

Recommended Video
Yamaha Fazer 25 Launched In India - DriveSpark
ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ

ಇನ್ನು ತಮಿಳುನಾಡಿನಲ್ಲಿ ಡ್ರೈವಿಂಗ್ ಸಂದರ್ಭ ಲೈಸೆನ್ಸ್ ಹೊಂದುವುದು ಕಡ್ಡಾಯಗೊಳಿಸುತ್ತಿದ್ದಂತೆ ರಾಜ್ಯ ಪೊಲೀಸರು ಕೂಡಾ ಈ ಬಗ್ಗೆ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಅಗತ್ಯವೆನಿಸಿದಲ್ಲಿ ಬೆಂಗಳೂರಿನಲ್ಲೂ ಹೊಸ ಕಾನೂನು ಜಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವಿಂಗ್ ವೇಳೆ ಇನ್ಮುಂದೆ ಪರವಾನಿಗೆ ಮೂಲ ಪ್ರತಿ ಹೊಂದುವುದು ಕಡ್ಡಾಯ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅಪಘಾತ ಸಂಖ್ಯೆ ತಡೆಯಲು ತಮಿಳುನಾಡು ಸರ್ಕಾರ ಕೈ ಗೊಂಡಿರುವ ಕ್ರಮ ಸೂಕ್ತವಾಗಿದ್ದು, ತ್ವರಿತ ಗತಿಯಲ್ಲಿ ಅದು ಇತರೆ ಪ್ರಮುಖ ನಗರಗಳಲ್ಲೂ ಜಾರಿಗೊಳ್ಳುವ ಅವಶ್ಯಕತೆಯಿದೆ.

English summary
Read in Kannada about Drivers must carry their original Driving license in Tamil Nadu.
Story first published: Thursday, August 24, 2017, 19:20 [IST]
Please Wait while comments are loading...

Latest Photos