ಭಾರತದ ಮೊಟ್ಟ ಮೊದಲ ಬಿಎಸ್-6 ಎಂಜಿನ್ ಆರ್ & ಡಿ ಘಟಕ ಸ್ಥಾಪನೆ
ಭಾರತವು ತನ್ನ ಮೊಟ್ಟ ಮೊದಲ ಅತ್ಯಾಧುನಿಕ ಬಿಎಸ್-VI (BS6) ಇಂಧನದ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವ ಸೌಲಭ್ಯವನ್ನು ಪಡೆದುಕೊಂಡಿದೆ.
ಭಾರತವು ತನ್ನ ಮೊಟ್ಟ ಮೊದಲ ಅತ್ಯಾಧುನಿಕ ಬಿಎಸ್-VI (BS6) ಇಂಧನದ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವ ಸೌಲಭ್ಯವನ್ನು ಪಡೆದುಕೊಂಡಿದೆ.

ಇತ್ತೀಚೆಗಷ್ಟೇ ಬಿಎಸ್-IV ಎಂಜಿನ್ ಕಡ್ಡಾಯಗೊಳಿಸಿದ್ದ ಭಾರತದ ಸರ್ಕಾರ, ಇಂಧನ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದ್ದು, ಮೊದಲ ಅತ್ಯಾಧುನಿಕ ಬಿಎಸ್-VI (BS6) ಇಂಧನದ ಸಂಶೋಧನೆ ನೆಡೆಸುವ ಹೊಸ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.

ಈ ಸಂಶೋಧನೆ ಮಾಡುವ ಘಟಕವು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ದೆಹಲಿಯಲ್ಲಿ ಈ ಘಟಕ ಸ್ಥಾಪನೆಗೆ ಮುಂದಾಗಿದೆ.

ಘಟಕ ಉದ್ಘಾಟಿಸಿ ಮಾತನಾಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, "ಹೊಸ BS-VI ಎಂಜಿನ್ ನಿಯಮಗಳನ್ನು 2020ರ ಏಪ್ರಿಲ್ ಒಳಗಾಗಿ ದೇಶದೆಲ್ಲೆಡೆ ಅಳವಡಿಸಲಾಗುತ್ತದೆ" ಎಂದು ತಿಳಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ಪೆಟ್ರೋಲ್, ಡೀಸೆಲ್, ಎಥನಾಲ್-ಮಿಶ್ರಿತ ಪೆಟ್ರೋಲ್, ಜೈವಿಕ ಡೀಸೆಲ್, ಸಿಎನ್‌ಜಿ, ಎಲ್ಎನ್‌ಜಿ, ಸಿಎನ್‌ಜಿ ಹೈಡ್ರೊಜೆನ್, 2ಜಿ-ಎಥನಾಲ್ ಇಂಧನಗಳು ಬಿಎಸ್- VI ಗುಣಮಟ್ಟ ಪೂರೈಸುವಂತೆ ವಿನ್ಯಾಸಗೊಳಿಸ ಕಡೆ ಕೆಲಸ ಮಾಡಲಿದೆ.

ಇಂದನಗಳಲ್ಲಿ ಬಿಎಸ್- VI ಎಂಜಿನ್ ಗುಣಮಟ್ಟದ ಬಗ್ಗೆ ಸಂಶೋಧನೆ ನೆಡೆಸುವ ಜೊತೆಗೆ, ಸಹ ಇಂಧನ ದಕ್ಷತೆ ಮತ್ತು ಎಂಜಿನ್ ಬಾಳಿಕೆಯ ಬಗ್ಗೆಯೂ ಅಬಿವ್ರುದ್ದಿ ಕಾರ್ಯ ಕೈಗೊಳ್ಳಲಿದೆ.

ಈಗಾಗಲೇ ಸಾಕಷ್ಟು ಮಾಲಿನ್ಯ ಸಮಸ್ಯೆ ಅನುಭವಿಸುತ್ತಿರುವ ಭಾರತದಲ್ಲಿ ಈ ರೀತಿಯ ನಿರ್ಧಾರ ಹೆಚ್ಚು ಉಪಯೋಗವಾಗಲಿದ್ದು, ಗಾಳಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಾಯ ಮಾಡಲಿದೆ.


Click it and Unblock the Notifications








