ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್(ಜಿಎಸ್‌ಟಿ)ಸೆಸ್ ದರ ಹೆಚ್ಚಳದ ನಂತರ ಫೋರ್ಡ್ ಇಂಡಿಯ ಸಂಸ್ಥೆಯು ತನ್ನ ಪ್ರೀಮಿಯಂ ಎಸ್ಯುವಿ ಎಂಡೀವರ್ನ ಬೆಲೆಯನ್ನು ಹೆಚ್ಚಿಸಿದೆ.

By Girish

ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್(ಜಿಎಸ್‌ಟಿ)ಸೆಸ್ ದರ ಹೆಚ್ಚಳದ ನಂತರ ಫೋರ್ಡ್ ಇಂಡಿಯ ಸಂಸ್ಥೆಯು ತನ್ನ ಪ್ರೀಮಿಯಂ ಎಸ್ಯುವಿ ಎಂಡೀವರ್ನ ಬೆಲೆಯನ್ನು ಹೆಚ್ಚಿಸಿದೆ.

ಪರಿಷ್ಕೃತ ಜಿಎಸ್‌ಟಿ : ಫೋರ್ಡ್ ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಫೋರ್ಡ್ ಇಂಡಿಯ ಸಂಸ್ಥೆಯು ತನ್ನ ಎಸ್‌ಯುವಿಗಳ ಬೆಲೆಗಳನ್ನು ಹೊಸ ಜಿಎಸ್‌ಟಿ ಸೆಸ್ ದರಗಳ ಅಡಿಯಲ್ಲಿ ಸರಿ ಸುಮಾರು ರೂ. 1.8 ಲಕ್ಷದಷ್ಟು ಫೋರ್ಡ್ ಎಂಡೇವರ್ ಕಾರಿನ ಬೆಲೆಗಳನ್ನು ಹೆಚ್ಚಿಸಲಾಗಿದೆ. ಎಂಡೀವರ್ ಕಾರಿನ ಬೆಲೆಯು ರೂ 1.2 ಲಕ್ಷದಿಂದ ರೂ 1.8 ಲಕ್ಷಕ್ಕೆ ಏರಿಕೆಯಾಗಿದೆ.

ಪರಿಷ್ಕೃತ ಜಿಎಸ್‌ಟಿ : ಫೋರ್ಡ್ ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಫೋರ್ಡ್ ಎಂಡೇವರ್ ವಾಹನದ ಹೊಸ ಬೆಲೆಗಳು ಏರಿಕೆಯಾಗಿದ್ದು, ಸದ್ಯ ರೂ. 25.95 ಲಕ್ಷದಿಂದ 32.68 ಲಕ್ಷದವರೆಗೆ ಬೆಲೆ ಪಡೆದುಕೊಂಡಿದ್ದು, ಹೊಸ ಬೆಲೆಗಳು ನೆನ್ನೆಯಿಂದಲೇ ಜಾರಿಗೆ ಬಂದಿವೆ.

ಪರಿಷ್ಕೃತ ಜಿಎಸ್‌ಟಿ : ಫೋರ್ಡ್ ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಪರಿಷ್ಕೃತ ಜಿಎಸ್‌ಟಿ ಸೆಸ್ ಪ್ರಕಾರ, ಭಾರತದಲ್ಲಿನ ಎಸ್‌ಯುವಿ ಕಾರುಗಳ ಬೆಲೆಗಳನ್ನು ಶೇಕಡಾ 15% ರಿಂದ 22% ರವರೆಗೆ ಮತ್ತೆ ಏರಿಕೆ ಮಾಡಿ ಭಾರತ ಸರ್ಕಾರ ಆದೇಶ ಹೊರಡಿಸಿದ್ದು, ಈ ಪ್ರಕಾರ ಈಗಾಗಲೇ ಕೆಲವು ಕಂಪನಿಗಳು ದರ ಬದಲಾವಣೆ ಕಾರ್ಯಕ್ಕೆ ಮುಂದಾಗಿವೆ.

ಪರಿಷ್ಕೃತ ಜಿಎಸ್‌ಟಿ : ಫೋರ್ಡ್ ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಅಧಿಕೃತ ಮಾಹಿತಿ ಪ್ರಕಾರ ಮಂಡಳಿಯ ಐಷಾರಾಮಿ ಕಾರುಗಳ ಮೇಲಿನ ತೆರಿಗೆಯು 28ರಷ್ಟು ಇದ್ದು ಇದರ ಜೊತೆ 22%ರಷ್ಟು ಸೆಸ್ಸ್ ಒಳಗೊಂಡಿರಲಿದೆ. ಇದರ ಸಂಯೋಜನೆಯೊಂದಿಗೆ ಶೇಕಡಾ 50% ರಷ್ಟು ತೆರಿಗೆ ಹೇರಿಕೆಯಾಗಿದೆ.

ಪರಿಷ್ಕೃತ ಜಿಎಸ್‌ಟಿ : ಫೋರ್ಡ್ ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಜಿಎಸ್‌ಟಿ ಅನುಷ್ಠಾನವಾಗುವುದಕ್ಕೂ ಮೊದಲು, ಎಸ್‌ಯುವಿ ಕಾರುಗಳು ಶೇಕಡಾ 55.30% ರಷ್ಟು ತೆರಿಗೆ ಹೊಂದಿದ್ದವು. ಆದರೆ, ಜಿಎಸ್‌ಟಿ ನಂತರ, ಎಸ್‌ಯುವಿ ಕಾರುಗಳು ಕೇವಲ ಶೇಕಡ % 28ರಷ್ಟು ಸ್ಲ್ಯಾಬ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿವೆ. ಮತ್ತು ಈ ತೆರಿಗೆಯು ಕಾರುಗಳ ಶಕ್ತಿ ಮತ್ತು ಶೈಲಿಯನ್ನು ಅವಲಂಬಿಸಿರುತ್ತದೆ.

ಪರಿಷ್ಕೃತ ಜಿಎಸ್‌ಟಿ : ಫೋರ್ಡ್ ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಫೋರ್ಡ್ ಎಂಡೀವರ್ ಕಾರು 2.2 ಲೀಟರ್ 4 ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಮತ್ತು 3.2 ಲೀಟರ್ 5 ಸಿಲಿಂಡರ್ ಟರ್ಬೊ ಡೀಸೆಲ್ ಮೋಟಾರ್ ಆಯ್ಕೆ ಪಡೆದುಕೊಳ್ಳಲಿದ್ದು, ಕ್ರಮವಾಗಿ 158 ಮತ್ತು 197 ಅಶ್ವಶಕ್ತಿಯನ್ನು ಉತ್ಪಾದನೆ ಮಾಡುತ್ತವೆ.

ಪರಿಷ್ಕೃತ ಜಿಎಸ್‌ಟಿ : ಫೋರ್ಡ್ ಎಂಡೇವರ್ ಕಾರಿನ ಬೆಲೆ ಹೆಚ್ಚಳ ಮಾಡಿದ ಫೋರ್ಡ್

ಜಿಎಸ್‌ಟಿ ಸೆಸ್‌ನ ಪರಿಷ್ಕರಣೆಯ ಕಾರಣದಿಂದಾಗಿ ಭಾರತದಲ್ಲಿ ಎಸ್‌ಯುವಿಗಳ ಬೆಲೆ ಹೆಚ್ಚಳವಾಗಿದ್ದು, ಟೊಯೊಟಾ ಫಾರ್ಚುನರ್ ನಂತರ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಈ ಫೋರ್ಡ್ ಎಂಡೇವರ್ ಐಷಾರಾಮಿ ಎಸ್‌ಯುವಿ ಪ್ರಿಯರಿಗೆ ಈ ವಿಚಾರ ಕೊಂಚ ಮಟ್ಟಿನ ಬೇಸರ ತಂದಿರುವುದಂತೂ ಖಂಡಿತ.

Most Read Articles

Kannada
English summary
Ford India has increased the prices of its premium SUV Endeavour after Goods and Service Tax (GST) Cess rates were hiked.
Story first published: Tuesday, September 26, 2017, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X