ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

ಸಣ್ಣ ಕಾರುಗಳು ಮತ್ತು ಎಸ್‌ಯುವಿ ಕಾರುಗಳ ಬೆಲೆ ಮೇಲೆ ಜಿಎಸ್‌ಟಿ ತೆರಿಗೆ ಹೇಗೆ ಪರಿಣಾಮ ಬೀರಲಿದೆ ಎಂಬ ಸಂಪೂರ್ಣ ವಿವರ ಈ ಲೇಖನದಲ್ಲಿದೆ, ಒಮ್ಮೆ ಓದಿ.

By Girish

ಸಣ್ಣ ಕಾರುಗಳು ಮತ್ತು ಎಸ್‌ಯುವಿ ಕಾರುಗಳ ಬೆಲೆ ಮೇಲೆ ಜಿಎಸ್‌ಟಿ ತೆರಿಗೆ ಹೇಗೆ ಪರಿಣಾಮ ಬೀರಲಿದೆ ಎಂಬ ಸಂಪೂರ್ಣ ವಿವರ ಈ ಲೇಖನದಲ್ಲಿದೆ, ಒಮ್ಮೆ ಓದಿ.

ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್‌ನಿಂದ ಹಿಡಿದು ಪೂರ್ಣ ಗಾತ್ರದ ಎಸ್‌ಯುವಿ, ಕಾಂಪ್ಯಾಕ್ಟ್ ಸೆಡಾನ್, ಐಷಾರಾಮಿ, ಹೈಬ್ರಿಡ್‌ ಮತ್ತು ವಿದ್ಯುತ್ ಕಾರುಗಳ ಬೆಲೆ ಏರಿಳಿತದ ಬಗ್ಗೆ ಈಗಾಗಲೇ ಕಾರು ಉತ್ಪಾದಕ ಸಂಸ್ಥೆಗಳು ಬಿಡುಗಡೆಗೊಳಿಸಿವೆ.

ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

1. ನಾಲ್ಕು ಮೀಟರ್‌ಗಿಂತ ಕಡಿಮೆ ಉದ್ದ ಇರುವಂತಹ ವಾಹನ :

  • A. 1.2-ಲೀಟರ್‌ಗಿಂತ ಕಡಿಮೆ ಪೆಟ್ರೋಲ್ ಎಂಜಿನ್ -
  • ಈ ವಿಭಾಗವು ಭಾರತ ದೇಶದಲ್ಲಿ ಅತಿ ದೊಡ್ಡದು ಮತ್ತು ಅತ್ಯಂತ ಜನಪ್ರಿಯವಾದ ಭಾಗಗಳಲ್ಲಿ ಒಂದಾಗಿದೆ.

    ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

    1.2-ಲೀಟರ್‌ಗಿಂತ ಕಡಿಮೆ ಪೆಟ್ರೋಲ್ ಎಂಜಿನ್, ಶೇಕಡಾ 28% ರಷ್ಟು ಜಿಎಸ್‌ಟಿ ಸ್ಲ್ಯಾಬ್ ಹೊಂದಿರಲಿದೆ ಮತ್ತು ಇದರ ಜೊತೆ ಹೆಚ್ಚುವರಿ ಶೇಕಡಾ 1% ಸೆಸ್ ವಿಧಿಸಲಾಗುತ್ತದೆ.

    ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

    ಈ ವಿಭಾಗದ ಕಾರುಗಳ ಬೆಲೆ ಶೇಕಡಾ 2.5 ರಷ್ಟು ಕಡಿಮೆಯಾಗಲಿದೆ, ಮಾರುತಿ ಸುಜುಕಿ ಆಲ್ಟೊ, ಬಲೆನೊ, ಡಿಜೈರ್, ಹ್ಯುಂಡೈ ಐ20, ಗ್ರ್ಯಾಂಡ್ ಐ10, ಪೋಕ್ಸ್‌ವಾಗನ್ ಪೊಲೊ, ಟಾಟಾ ಟಿಯೊಗೊ, ಟಾಟಾ ಟಿಗೊರ್, ಟೊಯೊಟಾ ಎಟಿಯೋಸ್ ಲಿವಾ, ಫೋರ್ಡ್ ಇಕೊಸ್ಪೋರ್ಟ್ (ಇಕೊ ಬೊಸ್ಟ್ ಇಂಜಿನ್‌ನೊಂದಿಗೆ) ಕಾರುಗಳು ಈ ವಿಭಾಗದಲ್ಲಿ ಇರಲಿವೆ.

    ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

    • B. 1.5-ಲೀಟರ್‌ಗಿಂತ ಕಡಿಮೆ ಡೀಸೆಲ್ ಎಂಜಿನ್
    • ಈ ವಿಭಾಗವು ಸಹ ಭಾರತದಲ್ಲಿ ಪ್ರಖ್ಯಾತಿ ಪಡೆದಿದ್ದು, ತ್ವರಿತವಾಗಿ ಬೆಳೆಯುತ್ತಿರುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಉಪ-ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಈ ವಿಭಾಗದಲ್ಲಿ ಬರಲಿವೆ.

      ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

      1.5-ಲೀಟರ್‌ಗಿಂತ ಕಡಿಮೆ ಡೀಸೆಲ್ ಎಂಜಿನ್, ಶೇಕಡಾ 28% ರಷ್ಟು ಜಿಎಸ್‌ಟಿ ಸ್ಲ್ಯಾಬ್ ಹೊಂದಿರಲಿದೆ ಮತ್ತು ಇದರ ಜೊತೆ ಹೆಚ್ಚುವರಿ ಶೇಕಡಾ 3% ಸೆಸ್ ವಿಧಿಸಲಾಗುತ್ತದೆ.

      ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

      ಈ ವಿಭಾಗದ ಕಾರುಗಳ ಬೆಲೆ ಶೇಕಡಾ 2.25 ರಷ್ಟು ಕಡಿಮೆಯಾಗಲಿದೆ, ಮಾರುತಿ ಸುಜುಕಿ ವಿಟಾರಾ ಬ್ರೀಝ, ಡಿಜೈರ್ ಡೀಸೆಲ್, ಹುಂಡೈ ಐ20 ಡೀಸೆಲ್, ಮಹೀಂದ್ರಾ ಟಿಯುವಿ 300, ಕ್ಯುವಿ 100, ಫೋರ್ಡ್ ಎಕೊಸ್ಪೋರ್ಟ್ ಡೀಸೆಲ್, ಟಾಟಾ ಟಿಗೊರ್ ಡೀಸೆಲ್, ಹುಂಡೈ ಎಕ್ಸ್‌ಸೆಂಟ್ ಡೀಸೆಲ್ ಕಾರುಗಳು ಈ ವಿಭಾಗದಲ್ಲಿ ಇರಲಿವೆ.

      ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

      • C. 1.5-ಲೀಟರ್‌ ಡೀಸೆಲ್ ಮತ್ತು 1.2-ಲೀಟರ್‌ ಪೆಟ್ರೋಲ್‌ಗಿಂತಲೂ ಹೆಚ್ಚಿನ ಎಂಜಿನ್
      • ನಾಲ್ಕು ಮೀಟರ್‌ಗಿಂತ ಕಡಿಮೆ ಉದ್ದ ಇರುವಂತಹ ವಾಹನ ವಿಭಾಗದ ವರ್ಗದಲ್ಲಿ ಕಾರುಗಳ ಸಂಖ್ಯೆ ಬೆರಳನೆಣಿಕೆಯಷ್ಟು ಇವೆ ಎನ್ನಬಹುದು.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        11.5-ಲೀಟರ್‌ ಡೀಸೆಲ್ ಮತ್ತು 1.2-ಲೀಟರ್‌ ಪೆಟ್ರೋಲ್‌ಗಿಂತಲೂ ಹೆಚ್ಚಿನ ಎಂಜಿನ್, ಶೇಕಡಾ 28% ರಷ್ಟು ಜಿಎಸ್‌ಟಿ ಸ್ಲ್ಯಾಬ್ ಹೊಂದಿರಲಿದೆ ಮತ್ತು ಇದರ ಜೊತೆ ಹೆಚ್ಚುವರಿ ಶೇಕಡಾ 15% ಸೆಸ್ ವಿಧಿಸಲಾಗುತ್ತದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ವಿಭಾಗದ ಕಾರುಗಳ ಬೆಲೆ ಶೇಕಡಾ1.7 ರಷ್ಟು ಕಡಿಮೆಯಾಗಲಿದೆ, 1.4 ಲೀಟರ್ ಹ್ಯುಂಡೈ ಐ20 ಸ್ವಯಂಚಾಲಿತ, 1.5-ಲೀಟರ್ ಫೋರ್ಡ್ ಇಕೊ‌ಸ್ಪೋರ್ಟ್ ಪೆಟ್ರೋಲ್ ಕಾರುಗಳು ಈ ವಿಭಾಗದಲ್ಲಿ ಇರಲಿವೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ವಿಭಾಗ ಭಾರತೀಯ ಆಟೊ ಕ್ಷೇತ್ರದಲ್ಲಿ ಒಂದು ಸಣ್ಣ ಭಾಗವಾಗಿದ್ದು, ಈ ವರ್ಗ ಆಟೊ ಉದ್ಯಮವನ್ನು ದೊಡ್ಡ ಪ್ರಭಾವ ಬೀರುವುದಿಲ್ಲ ಎನ್ನಬಹುದು.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        2. ನಾಲ್ಕು ಮೀಟರ್‌ಗಿಂತ ಉದ್ದ ಇರುವಂತಹ ವಾಹನ(ಎಸ್‌ಯುವಿ ಹೊರತುಪಡಿಸಿ) :

        ಹೆಚ್ಚು ಬಲಿಷ್ಠವಾಗಿದ್ದರು ಸಹ ಎಸ್‌ಯುವಿ ವಿಭಾಗದಲ್ಲಿ ಕಾಣಿಸಿಕೊಳ್ಳದ ಕಾರುಗಳನ್ನು ಈ ವಿಭಾಗದಲ್ಲಿ ಕಾಣಬಹುದಾಗಿದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ನಾಲ್ಕು ಮೀಟರ್‌ಗಿಂತ ಉದ್ದ ಇರುವಂತಹ ವಾಹನ(ಎಸ್‌ಯುವಿ ಹೊರತುಪಡಿಸಿ)ಗಳ ಮೇಲೆ ಶೇಕಡಾ 28% ರಷ್ಟು ಜಿಎಸ್‌ಟಿ ಸ್ಲ್ಯಾಬ್ ಹೊಂದಿರಲಿದೆ ಮತ್ತು ಇದರ ಜೊತೆ ಹೆಚ್ಚುವರಿ ಶೇಕಡಾ 15% ಸೆಸ್ ವಿಧಿಸಲಾಗುತ್ತದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ವಿಭಾಗದ ಕಾರುಗಳ ಬೆಲೆ ಶೇಕಡಾ 8.6% ರಷ್ಟು ಕಡಿಮೆಯಾಗಲಿದ್ದು, ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, 5 ಬಾಗಿಲುಗಳ ಮಿನಿ ಮತ್ತು ಮರ್ಸಿಡಿಸ್-ಬೆಂಜ್ ಇ-ಕ್ಲಾಸ್ ಮತ್ತು ಎಸ್-ಕ್ಲಾಸ್ ಮುಂತಾದ ದೊಡ್ಡ ಕಾರುಗಳು ಈ ವಿಭಾಗದಲ್ಲಿ ಬರುತ್ತವೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        3. ನಾಲ್ಕು ಮೀಟರ್‌ಗಿಂತ ಉದ್ದ ಇರುವಂತಹ ವಾಹನ :

        ಎಂಜಿನ್ ಗಾತ್ರದ(ಸ್ಥಳಾಂತರ) ಹೊರತಾಗಿ 4-ಮೀಟರ್‌ಗಿಂತ ಹೆಚ್ಚಿನ ಎಲ್ಲಾ ದೊಡ್ಡ ಶ್ರೇಣಿಯ ಕಾರುಗಳು ಈ ವಿಭಾಗದಲ್ಲಿ ಕಾಣಬಹುದಾಗಿದ್ದು, ಹೆಚ್ಚು ಪ್ರಖ್ಯಾತಿ ಪಡೆದ ವಿಭಾಗ ಇದಾಗಿದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ನಾಲ್ಕು ಮೀಟರ್‌ಗಿಂತ ಉದ್ದ ಇರುವಂತಹ ವಾಹನಗಳ ಮೇಲೆ ಶೇಕಡಾ 28% ರಷ್ಟು ಜಿಎಸ್‌ಟಿ ಸ್ಲ್ಯಾಬ್ ಹೊಂದಿರಲಿದೆ ಮತ್ತು ಇದರ ಜೊತೆ ಹೆಚ್ಚುವರಿ ಶೇಕಡಾ 15% ಸೆಸ್ ವಿಧಿಸಲಾಗುತ್ತದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ವಿಭಾಗದ ಕಾರುಗಳ ಬೆಲೆ ಶೇಕಡಾ 12% ರಷ್ಟು ಕಡಿಮೆಯಾಗಲಿದ್ದು, ಮರ್ಸಿಡಿಸ್ ಬೆಂಜ್ ಜಿಎಲ್‌ಸಿ, ಆಡಿ ಕ್ಯೂ 7, ಫೋರ್ಡ್ ಎನ್‌ಡೆವರ್, ಪೋಕ್ಸ್‌ವಾಗನ್ ಟೈಗೌನ್, ಟೊಯೊಟಾ ಫಾರ್ಚುನರ್, ಮಹೀಂದ್ರಾ ಸ್ಕಾರ್ಪಿಯೊ, ಮಹೀಂದ್ರಾ ಎಕ್ಸ್‌ಯುವಿ 500, ಟಾಟಾ ಹೆಕ್ಸಾ ಸೇರಿದಂತೆ ಮುಂತಾದ ದೊಡ್ಡ ಕಾರುಗಳು ಈ ವಿಭಾಗದಲ್ಲಿ ಬರುತ್ತವೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        4. ಹೈಬ್ರಿಡ್ ಕಾರುಗಳು :

        ಹೈಬ್ರಿಡ್ ತಂತ್ರಜ್ಞಾನ ಪ್ರಪಂಚದಾದ್ಯಂತ ಜನಪ್ರಿಯವಾಗಿದ್ದರೂ ಸಹ ಭಾರತದಲ್ಲಿ ಕೆಲವೇ ಕೆಲವು ಹೈಬ್ರಿಡ್ ಕಾರುಗಳು ಮಾರಾಟವಾಗುತ್ತಿರುವುದನ್ನು ನಾವು ನೋಡಬಹುದಾಗಿದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ಹೈಬ್ರಿಡ್ ಕಾರುಗಳು ಮೇಲೆ ಶೇಕಡಾ 28% ರಷ್ಟು ಜಿಎಸ್‌ಟಿ ಸ್ಲ್ಯಾಬ್ ಹೊಂದಿರಲಿದೆ ಮತ್ತು ಇದರ ಜೊತೆ ಹೆಚ್ಚುವರಿ ಶೇಕಡಾ 15% ಸೆಸ್ ವಿಧಿಸಲಾಗುತ್ತದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ವಿಭಾಗದ ಕಾರುಗಳ ಬೆಲೆ ಶೇಕಡಾ 13.3% ರಷ್ಟು ಕಡಿಮೆಯಾಗಲಿದ್ದು, ಟೊಯೊಟಾ ಕ್ಯಾಮ್ರಿ ಹೈಬ್ರಿಡ್, ಪ್ರಿಯಸ್, ಹೋಂಡಾ ಅಕಾರ್ಡ್, ವೊಲ್ವೊ ಎಕ್ಸ್‌ಸಿ90 ಟಿ8(ಪ್ಲಗ್ ಇನ್ ಹೈಬ್ರಿಡ್) ಮತ್ತು ಲೆಕ್ಸಸ್ ಆರ್‌ಎಕ್ಸ್450ಎಚ್ ಎಸ್‌ಯುವಿ ಮತ್ತು ಇಎಸ್300ಎಚ್ ಸೆಡಾನ್.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        5. ಎಲೆಕ್ಟ್ರಿಕ್ ವಾಹನಗಳು :

        ಪ್ರಸ್ತುತ, ಮಹೀಂದ್ರಾ ಸಂಸ್ಥೆ ಮಾತ್ರ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಉತ್ಪಾದನೆ ಮಾಡುತ್ತಿದ್ದು, ಭವಿಷ್ಯದ ಇಂಧನವಾಗಿರುವ ವಿದ್ಯುತ್ ಕಾರುಗಳ ಬಗ್ಗೆ ಭಾರತದಲ್ಲಿ ಹೆಚ್ಚಿನ ಅರಿವು ಮೂಡಬೇಕಾಗಿದೆ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ವಿಭಾಗ ಅತಿ ಕಡಿಮೆ ಶೇಕಡ 12% ಜಿಎಸ್‌ಟಿ ಸ್ಲ್ಯಾಬ್ ಮಾತ್ರ ಒಳಗೊಂಡಿರುತ್ತದೆ ಮತ್ತು ಯಾವುದೇ ರೀತಿಯ ಸೆಸ್ಸ್ ಚಾರ್ಜ್ ಇರುವುದಿಲ್ಲ.

        ಜಿಎಸ್‌ಟಿ ನಂತರ ಎಲ್ಲಾ ಕಾರುಗಳ ಬೆಲೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !!

        ಈ ವಿಭಾಗದ ಕಾರುಗಳ ಬೆಲೆ ಶೇಕಡಾ 7.5% ರಷ್ಟು ಕಡಿಮೆಯಾಗಲಿದ್ದು, ಮಹೀಂದ್ರಾ ಇ2ಓ ಮತ್ತು 5-ಬಾಗಿಲಿನ ಮಹೀಂದ್ರಾ ಇವಿರೊಟೊ ಕಾರುಗಳು ಮಾತ್ರ ಭಾರತದಲ್ಲಿ ಮಾರಾಟವಾಗುತ್ತಿರುವ ಸಂಪೂರ್ಣ ವಿದ್ಯುತ್ ಎಂಜಿನ್ ಪಡೆದ ಎಂಜಿನ್ ಕಾರುಗಳು.

Most Read Articles

Kannada
English summary
Here's our detailed report on how the GST impact on cars and SUVs is going to affect their prices in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X