ಹೈದ್ರಾಬಾದ್‌ನಲ್ಲಿ ಭೀಕರ ಅಪಘಾತ- ಬೆಚ್ಚಿಬಿಳಿಸಿದ ಸಿಸಿಟಿವಿ ದೃಶ್ಯಾವಳಿಗಳು..!

Written By:

ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಭೀಕರ ಅಪಘಾತಕ್ಕಿಡಾಗಿದ್ದು, ದುರಂತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ.

ಹೈದ್ರಾಬಾದ್‌ನಲ್ಲಿ ಭೀಕರ ಅಪಘಾತ-ಬೆಚ್ಚಿಬಿಳಿಸಿದ ಸಿಸಿಟಿವಿ ದೃಶ್ಯಾವಳಿ

ಯುವಕರ ಗುಂಪೊಂದು ವೇಗವಾಗಿ ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ದುರಂತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹೈದ್ರಾಬಾದ್‌ನಲ್ಲಿ ಭೀಕರ ಅಪಘಾತ-ಬೆಚ್ಚಿಬಿಳಿಸಿದ ಸಿಸಿಟಿವಿ ದೃಶ್ಯಾವಳಿ

ಹೈದ್ರಾಬಾದ್‌ನ ಬಂಜಾರ್ ಹಿಲ್‌ನಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಹ್ಯುಂಡೈ ಐ20 ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೂರು ಸುತ್ತು ಉರುಳಿ ಬಿದ್ದಿದೆ.

ಹೈದ್ರಾಬಾದ್‌ನಲ್ಲಿ ಭೀಕರ ಅಪಘಾತ-ಬೆಚ್ಚಿಬಿಳಿಸಿದ ಸಿಸಿಟಿವಿ ದೃಶ್ಯಾವಳಿ

ಅದೃಷ್ಟವಶಾತ್ ಘಟನೆ ಸ್ಥಳದಲ್ಲೇ ಕಡಿಮೆ ವಾಹನ ಇದ್ದ ಪರಿಣಾಮ ದೊಡ್ಡ ಮಟ್ಟದ ಅನಾಹತು ತಪ್ಪಿದ್ದು, ಕಾರಿನಲ್ಲಿ ಮೂವರು ಯುವಕರಲ್ಲಿ 20 ವರ್ಷದ ಮಹ್ಮಮದ್ ಅಲಿ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಗಾಯಗೊಂಡಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರೇ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದು, ಭೀಕರ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಹೈದ್ರಾಬಾದ್‌ನಲ್ಲಿ ಭೀಕರ ಅಪಘಾತ-ಬೆಚ್ಚಿಬಿಳಿಸಿದ ಸಿಸಿಟಿವಿ ದೃಶ್ಯಾವಳಿ

ರಸ್ತೆ ನಿಮಯ ಉಲ್ಲಂಘನೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರಗಳು ಹತ್ತಾರು ಕಾನೂನು ಜಾರಿಗೆ ತಂದರು ಇಂತಹ ಭೀಕರ ಅಪಘಾತ ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

Read more on ಅಪಘಾತ accident
English summary
Read in Kannada about High Speed Clash Accident in Hyderabad.
Story first published: Saturday, July 15, 2017, 16:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark