ಇನ್ಮುಂದೆ ದಿನಂಪ್ರತಿ ತೈಲ ಬೆಲೆ ಪರಿಷ್ಕರಣೆ- ಹಾಗಾದ್ರೆ ಬೆಲೆಗಳನ್ನು ತಿಳಿಯೋದು ಹೇಗೆ?

Written By:

ಮೇ.16ರಿಂದ ದೇಶದ ಪ್ರಮುಖ ನಗರಗಳಲ್ಲಿ ದಿನಂಪ್ರತಿ ತೈಲ ಬೆಲೆ ಪರಿಷ್ಕರಣೆ ಕಾರ್ಯರೂಪಕ್ಕೆ ಬರುತ್ತಿದ್ದು, ದಿನಂಪ್ರತಿ ಬದಲಾಗುವ ತೈಲ ಬೆಲೆಗಳ ಮಾಹಿತಿ ತಿಳಿಯಲು ಕೆಲವು ಮಾರ್ಗಸೂಚಿಗಳನ್ನು ಸೂಚಿಸಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲ ಬೆಲೆ ಆಧರಿಸಿ ಇನ್ಮುಂದೆ ದಿನಂಪ್ರತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿಗದಿಯಾಗಲಿದ್ದು, ಸುಲಭವಾಗಿ ಬೆಲೆ ಏರಿಳಿತಗಳನ್ನು ತಿಳಿಯಬಹುದಾಗಿದೆ.

ತೈಲ ಬೆಲೆಗಳ ಪಾರದರ್ಶಕತೆ ಕಾಯ್ದುಕೊಳ್ಳಲು ಹಲವು ಸುಲಭ ಮಾರ್ಗಗಳನ್ನು ಸೂಚಿಸಿರುವ ತೈಲ ಕಂಪನಿಗಳು, ಬೆಲೆಗಳ ಗೊಂದಲ ನಿವಾರಣೆಗಾಗಿ ಎಸ್ಎಂಎಸ್, ಆ್ಯಪ್ ಮತ್ತು ವೈಬ್‌ಸೈಟ್ ಮೂಲಕ ಪ್ರಸ್ತುತ ಬೆಲೆಗಳ ಮಾಹಿತಿ ನೀಡಲಿವೆ.

ಎಸ್ಎಂಎಸ್ ಸೇವೆಗಾಗಿ

ಇಂಡಿಯನ್ ಆಯಿಲ್ ಕಾರ್ಪೋರೆಷನ್ (IOC)- Type RSP < SPACE > DEALER CODE to 9224992249


ಭಾರತ್ ಪೆಟ್ರೋಲಿಯಂ (BP) - Type RSP < SPACE > DEALER CODE to 9223112222


ಹಿಂದೂಸ್ತಾನ್ ಪೆಟ್ರೋಲಿಯಂ (HP) - Type HPPRICE < SPACE > DEALER CODE to 9222201122

ಮೊಬೈಲ್ ಆ್ಯಪ್
ದಿನಂಪ್ರತಿ ಬದಲಾಗುವ ಬೆಲೆಗಳನ್ನು ತಿಳಿಯಲು ಆ್ಯಪ್ ವ್ಯವಸ್ಥೆ ಕೂಡಾ ಇದೆ.

ಇಂಡಿಯನ್ ಆಯಿಲ್ ಕಾರ್ಪೋರೆಷನ್- Fuel@IOC

ಭಾರತ್ ಪೆಟ್ರೋಲಿಯಂ- SmartDrive

ಹಿಂದೂಸ್ತಾನ್ ಪೆಟ್ರೋಲಿಯಂ- My HPCL

ಇನ್ನು ಮೊದಲ ಹಂತದಲ್ಲಿ ಪುದುಚೇರಿ, ವೈಜಾಕ್, ಉದಯ್‌ಪುರ್, ಜಮಶೇಡ್‌ಪುರದಲ್ಲಿ ಮತ್ತು ಚಂಡಿಘರ್ ನಗರಗಳಲ್ಲಿ ಪ್ರತಿದಿನವೂ ತೈಲ ಪರಿಷ್ಕರಣೆ ಕಾರ್ಯರೂಪ ಬರುತ್ತಿದೆ.

ಸದ್ಯ ಐದು ನಗರಗಳಲ್ಲಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುವ ಪ್ರತಿದಿನ ತೈಲ ದರ ಪರಿಷ್ಕರಣೆ ನಿರ್ಣಯವು ಪೆಟ್ರೋಲಿಯಂ ಸಂಸ್ಥೆಗಳಿಗೆ ಲಾಭವಾದಲ್ಲಿ ಮುಂಬರುವ ದಿನಗಳಲ್ಲಿ ದೇಶದ ಎಲ್ಲ ನಗರಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಗ್ರಾಹಕರಿಗೆ ಲಾಭವೋ? ನಷ್ಟವೋ?

ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆ ಅನುಗುಣವಾಗಿ ಪ್ರತಿದಿನ ದರಗಳು ಬದಲಾದರೆ ಗ್ರಾಹಕರಿಗೆ ಮತ್ತು ವಿತರಕರಿಗೆ ಲಾಭವಾಗಲಿದೆ. ಯಾಕೇಂದ್ರೆ ಆ ದಿನದ ಕಚ್ಚಾ ತೈಲದ ಬೆಲೆ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿಗದಿಯಾಗುತ್ತವೆ.

ಹೀಗಾಗಿ ಗ್ರಾಹಕರಿಗೆ ಇದು ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಹೊಸ ನಿಯಮ ಕಾರ್ಯರೂಪಕ್ಕೆ ಬಂದ ನಂತವಷ್ಟೇ ಈ ಯೋಜನೆಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

English summary
Read in Kannada about u can check the daily price change of petrol and diesel.
Please Wait while comments are loading...

Latest Photos