ಲೆಕ್ಸಸ್ ಕಂಪನಿಯ ನಾಲ್ಕನೇ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ

Written By:

ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಲೆಕ್ಸಸ್ ಸಂಸ್ಥೆ ಭಾರತದಲ್ಲಿ ತನ್ನ ನಾಲ್ಕನೇ ಷೋರೂಂ ಉದ್ಘಾಟನೆ ಮಾಡಿದ್ದು, ಈ ಷೋರೂಂ ಬಗ್ಗೆ ತಿಳಿದುಕೊಳ್ಳಿ.

ಲೆಕ್ಸಸ್ ಸಂಸ್ಥೆಯ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ

ಈಗಾಗಲೇ ಲೆಕ್ಸಸ್ ಅತಿಥಿ ಅನುಭವ ಕೇಂದ್ರಗಳು(GECS) ಎಂಬ ಹೆಸರಿನಡಿಯಲ್ಲಿ ಲೆಕ್ಸಸ್ ಕಂಪನಿಯು ಭಾರತದಲ್ಲಿ ಮೂರು ಷೋರೂಂಗಳನ್ನು ತೆರೆದಿದ್ದು, ತನ್ನ ನಾಲ್ಕನೇ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದೆ.

ಲೆಕ್ಸಸ್ ಸಂಸ್ಥೆಯ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ

ಗುರಂಗಾವ್‌, ಮುಂಬೈ ಹಾಗು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ಈಗಾಗಲೇ ಪ್ರೀಮಿಯಂ ಷೋರೂಂ ತೆರೆದಿದ್ದು, ಈಗ ಬೆಂಗಳೂರಿಗೂ ಕಾಲಿಟ್ಟಿರುವ ಲೆಕ್ಸಸ್ ಸಂಸ್ಥೆ, ತನ್ನ ನಾಲ್ಕನೇ ಷೋರೂಂ ಅನಾವರಣಗೊಳಿಸಿದೆ.

ಲೆಕ್ಸಸ್ ಸಂಸ್ಥೆಯ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ

ಲೆಕ್ಸಸ್ ಅತಿಥಿ ಅನುಭವ ಕೇಂದ್ರವು(GECS) ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ, ಲಾವೆಲ್ಲೆ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗಿದ್ದು, ಕಾರುಗಳ ಬಗ್ಗೆ, ಲೆಕ್ಸಸ್ ಜೀವನಶೈಲಿ ಅನುಭವ, ಹಾಗು ಸಂಸ್ಥೆಯು ಗ್ರಾಹಕರಿಗೆ ಅರಿವು ಮೂಡಿಸಲಿದೆ.

ಲೆಕ್ಸಸ್ ಸಂಸ್ಥೆಯ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ

ಬೆಂಗಳೂರು ಲೆಕ್ಸಸ್ ಅತಿಥಿ ಅನುಭವ ಕೇಂದ್ರವು ಕರ್ನಾಟಕದ ಮತ್ತು ಜಪಾನಿನ ಸಂಸ್ಕೃತಿಗಳ ಸಂಯೋಜನೆಯಾಗಿದೆ. 'ನಮಸ್ತೆ ಮತ್ತು' ಓಮೋಟೆನ್ಷನ್ ' ಸ್ವಾಗತ ವಾಕ್ಯಗಳನ್ನು ನೀವು ಕಾಣಬಹುದಾಗಿದೆ. ಇನ್ನು ಗೋಡೆಗಳ ಮೇಲೆ ಹಂಪಿಯ ಕಲ್ಲಿನ ರಥದ ಕರಕುಶಲತೆಯನ್ನು ಪ್ರದರ್ಶಿಸಲಾಗಿದೆ.

ಲೆಕ್ಸಸ್ ಸಂಸ್ಥೆಯ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ

ಭಾರತದಲ್ಲಿ ಇಎಸ್ 300ಎಚ್, ಗ್ಲುಟೋನಿ 450ಎಚ್ ಮತ್ತು ಎಲ್‌ಎಕ್ಸ್ 450ಡಿ ಉತ್ಪನ್ನಗಳನ್ನು ಒಳಗೊಂಡಿದೆ. ಇದಲ್ಲದೆ ಅತಿಥಿ ಅನುಭವ ಕೇಂದ್ರಗಳ ಹೊರತಾಗಿ, ಮಾರಾಟದ ನಂತರ ಸೌಲಭ್ಯಗಳನ್ನು ಚಂಡೀಘಢ, ಹೈದರಾಬಾದ್, ಚೆನೈ ಮತ್ತು ಕೊಚ್ಚಿ ನಗರಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

ಲೆಕ್ಸಸ್ ಸಂಸ್ಥೆಯ ಷೋರೂಂ ಬೆಂಗಳೂರಿನಲ್ಲಿ ಉದ್ಘಾಟನೆ

ಲೆಕ್ಸಸ್ ತನ್ನ ಗ್ರಾಹಕರಿಗೆ ಪ್ರೀಮಿಯಂ ಅನುಭವ ನೀಡಲು ಅತಿಥಿ ಅನುಭವ ಕೇಂದ್ರಗಳನ್ನು ಭಾರತದಲ್ಲಿ ತೆರೆಯುತ್ತಿದ್ದು, ಪ್ರತಿಯೊಂದು ಕೇಂದ್ರಗಳಲ್ಲಿ ಅನನ್ಯವಾಗಿ ಸ್ಥಳೀಯ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯವನ್ನು ಮಾಡುತ್ತಿದೆ.

English summary
Read in Kannada about Luxury carmaker Lexus has inaugurated its fourth showroom in India at Bengaluru. Know more about this Showroom

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark