ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!

Written By:

ಹೆದ್ದಾರಿ ಅಕ್ಕ ಪಕ್ಕ ಬಾರ್ ಬಂದ್ ಆಗಿರುವುದರಿಂದ ನಮಗೆಲ್ಲರಿಗೂ ತಿಳಿದಿರುವಂತೆ ಅಪಘಾತಗಳ ಸಂಖ್ಯೆಯ ದೇಶದಲ್ಲಿ ಇಳಿಮುಖವಾಗಿದೆ. ಎಡಕ್ಕೆ ತದ್ವಿರುದ್ಧವೆಂಬಂತೆ ಬೆಂಗಳೂರಿನಲ್ಲಿ ಈ ಸಂಖ್ಯೆ ಜಾಸ್ತಿ ಆಗಿದೆ ಓದುಗರೇ.

To Follow DriveSpark On Facebook, Click The Like Button
ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!

ಹೌದು, ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲೆಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳು ಕಳೆದ ಜೂನ್ ಒಂದರಿಂದ ಬಂದ್ ಮಾಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಅಂಕಿ ಅಂಶಗಳ ಪ್ರಕಾರ ಈ ವರ್ಷದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಈ ತಿಂಗಳು ದಾಖಲಾಗಿವೆ ಎಂದರೆ ನಂಬಲೇ ಬೇಕು.

ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!

ಬೆಂಗಳೂರಿನಲ್ಲಿ ಕುಡಿದು ಚಾಲನೆ ಮಾಡುವವರ ಸಂಖ್ಯೆ ಇಂದೆಂದಿಗಿಂತಲೂ ಹೆಚ್ಚಳವಾಗಿದ್ದು, 2017ರ ಜನವರಿಯಿಂದ ಆಗಸ್ಟ್‌ವರೆಗಿನ ಅಂಕಿ ಅಂಶದ ಪ್ರಕಾರ ಜುಲೈನಲ್ಲಿ ಅತಿ ಹೆಚ್ಚು ಅಂದರೆ 7,438 ಪ್ರಕರಣಗಳು ದಾಖಲಾಗಿವೆ.

ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!

ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಆರಂಭವಾದ ಬಳಿಕ ಜುಲೈ ತಿಂಗಳಲ್ಲಿ 7,438 ಪ್ರಕರಣಗಳು ದಾಖಲಾಗಿರುವುದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ.

ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!

ಕುಡಿತದ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹಮ್ಮಿಕೊಂಡು ಇದರ ಜೊತೆಗೆ ಪೊಲೀಸರ ಕಠಿಣ ಕ್ರಮದ ನಡುವೆಯೂ ಕುಡಿದು ಚಾಲನೆ ಮಾಡುವರ ಸಂಖ್ಯೆ ಜಾಸ್ತಿಯಾಗಿರುವುದು ವಿಪರ್ಯಾಸವೇ ಸರಿ.

ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!

ಕೋರ್ಟ್‌ ಆದೇಶ ಪ್ರಕಾರ, ಎಂಜಿ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆಯ ಮದ್ಯದಂಗಡಿಗಳು ಮತ್ತು ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳ ತವರು ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿಯೂ ಬಾರ್‌ಗಳೂ ಬಂದ್‌ ಆಗಿದ್ದವು. ಆದರೆ, ಈ ಪ್ರದೇಶದಲ್ಲೇ ಹೆಚ್ಚು ಕುಡುಕರು, ಸಂಚಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದು, ದಂಡ ಕಟ್ಟಿಸಿಕೊಂಡಿದ್ದಾರೆ.

ಬಾರ್ ಬಂದ್ ಆದ್ರೂ ಬೆಂಗಳೂರಿಗರು ಕುಡಿಯೋದು ಬಿಟ್ಟಿಲ್ಲ ಅನ್ನುತ್ತೆ ಅಂಕಿ ಅಂಶ !!

ಇತ್ತೀಚೆಗೆ ಪಬ್‌ಗಳು ಮಧ್ಯಾಹ್ನ 2ಗಂಟೆಯಿಂದ 5 ಗಂಟೆವ ಅವಧಿಯಲ್ಲಿ 'ಹ್ಯಾಪಿ ಅವರ್' ಎಂಬ ಹೆಸರಿನಲ್ಲಿ ಕೊಡುಗೆ ನೀಡಿತ್ತಿವೆ. ಇದರ ಲಾಭ ಪಡೆಯುವ ಮೂಲಕ ಮಧ್ಯಾಹ್ನವೂ ಸಹ ಕುಡಿದು ವಾಹನ ಚಲಾಯಿಸುವ ಕೆಲಸವನ್ನು ಸಾರ್ವಜನಿಕರು ಮಾಡುತ್ತಿದ್ದು, ಈ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ.

English summary
drunk and drive cases in bengaluru increased in July month
Story first published: Thursday, September 14, 2017, 18:23 [IST]
Please Wait while comments are loading...

Latest Photos