ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

Written By:

ದೇಶಿಯ ಮಾರುಕಟ್ಟೆಯಲ್ಲಿನ ಲಗ್ಷುರಿ ಕಾರು ಉತ್ಪಾದಕರು ಮುಂಬರುವ ಜನವರಿ 1ರಿಂದಲೇ ಬೆಲೆ ಹೆಚ್ಚಳ ಮಾಡುವ ಬಗ್ಗೆ ಸುಳಿವು ನೀಡಿದ್ದು, ಜಿಎಸ್‌ಟಿ ಸೆಸ್ ಹೆಚ್ಚಳ ಹಿನ್ನೆಲೆಯಲ್ಲಿ ಕಾರು ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಿರುವುದಾಗಿ ಸ್ಪಷ್ಟನೆ ನೀಡಿವೆ.

ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

ನಾವು ಹಿಂದೆ ಕಾರುಗಳ ಬೆಲೆಗಳು ಜನವರಿ 1ರಿಂದಲೇ ಹೆಚ್ಚಳವಾಗುವ ಬಗ್ಗೆ ಮಾಡಿದ್ದ ವರದಿ ಬೆನ್ನಲ್ಲೇ ಇದೀಗ ಲಗ್ಷುರಿ ಕಾರು ಉತ್ಪದಕರು ಕೂಡಾ ಬೆಲೆ ಹೆಚ್ಚಳ ಮಾಡಿದ್ದು, ಐಷಾರಾಮಿ ಕಾರುಗಳ ಮೇಲೆ ಶೇ.28 ಜಿಎಸ್‌ಟಿ ಸೆಸ್ ವಿಧಿಸಿರುವುದೇ ಕಾರುಗಳ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

ಕಳೆದ ಜುಲೈ 1ರಂದು ದೇಶಾದ್ಯಂತ ಜಾರಿಗೆ ಬಂದಿದ್ದ ಏಕರೂಪದ ತೆರಿಗೆ ಪದ್ದತಿ(ಜಿಎಸ್‌ಟಿ) ಜಾರಿಯಿಂದ ಭಾರತೀಯ ಆಟೋ ಮೊಬೈಲ್ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸಿತ್ತು. ಇದಕ್ಕೆ ಕಾರಣ ಸಣ್ಣ ಕಾರಿನಿಂದ ಹಿಡಿದು ಐಷಾರಾಮಿ ಕಾರುಗಳ ಬೆಲೆಗಳು ಭಾರೀ ಪ್ರಮಾಣದಲ್ಲಿ ಕಡಿತವಾಗಿದ್ದವು.

Recommended Video - Watch Now!
Best Cars Of 2017 In India - DriveSpark
ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

ಇದರಿಂದ ಎಲ್ಲ ಆಟೋ ಉತ್ಪಾದಕರು ಕೂಡಾ ತಮ್ಮ ಉತ್ಪನ್ನಗಳ ಮಾರಾಟವನ್ನು ದುಪ್ಪಟ್ಟು ಮಾಡಿಕೊಂಡಿದ್ದರು. ಆದ್ರೆ ಜಿಎಸ್‌ಟಿ ಜಾರಿಯಿಂದಾದ ಕಾರಿನ ಬೆಲೆಗಳ ಇಳಿಕೆಯ ಖುಷಿ ಬಹಳ ದಿನ ಉಳಿಯಲಿಲ್ಲ.

ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

ಐಷಾರಾಮಿ ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಗಳು ಕಡಿತವಾದ ಹಿನ್ನೆಲೆ ದೇಶದ ವರಮಾನಕ್ಕೆ ಹಿನ್ನಡೆಯಾದ ಕಾರಣ ಜಿಎಸ್‌ಟಿ ತೆರಿಗೆಗಳಲ್ಲಿ ಮಹತ್ವದ ಬದಲಾವಣೆ ತರಲಾಯಿತು. ಇದರಿಂದ ಕಾರುಗಳ ಮೇಲಿನ ಜಿಎಸ್ ಟಿ ಸೆಸ್ ನ್ನು ಶೇ.15ರಿಂದ ಶೇ.25 ಕ್ಕೆ ಏರಿಕೆ ಮಾಡಲಾಯ್ತು.

ತಪ್ಪದೇ ಓದಿ-ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪಿಗ್ಗಿ ಬಳಿ ಯಾವೆಲ್ಲಾ ಐಷಾರಾಮಿ ಕಾರುಗಳಿವೆ ಗೊತ್ತಾ?

ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

ಜೊತೆಗೆ 4 ಮೀಟರ್‌ಗಿಂತಲೂ ಹೆಚ್ಚಿನ ಗಾತ್ರ ಹೊಂದಿರುವ ಐಷಾರಾಮಿ ಕಾರುಗಳ ಮೇಲಿನ ಜಿಎಸ್‌ಟಿ ಸೆಸ್ ಅನ್ನು ಶೇ.28ಕ್ಕೆ ಏರಿಕೆ ಮಾಡಲಾಗಿದ್ದು, ಹೊಸ ನಿಯಮದಿಂದಾಗಿ ಪ್ರತಿ ಕಾರಿನ ಬೆಲೆಯು 2 ರಿಂದ 5 ಲಕ್ಷದವರಿಗೆ ಹೆಚ್ಚಾಗುವ ಸಾಧ್ಯತೆಗಳಿವೆ.

ಜ.1ರಿಂದಲೇ ಗಗನಮುಖಿಯಾಗಲಿವೆ ಲಗ್ಷುರಿ ಕಾರುಗಳ ಬೆಲೆ..

ಹೀಗಾಗಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮರ್ಸಿಡಿಸ್ ಬೆಂಝ್, ಜಾಗ್ವಾರ್, ಡಿಸ್ಕವರಿ, ಜೀಪ್ ಚರೋಕಿ, ಟೊಯೊಟಾ ಫಾರ್ಚೂನರ್, ಬಿಎಂಡಬ್ಲ್ಯೂ, ಆಡಿ, ಲೆಕ್ಸಸ್, ವೊಲ್ಪೋ, ಸ್ಕೋಡಾ, ಮೆಸಾರಟಿ, ಪೋರ್ಷೆ, ಆಸ್ಟನ್ ಮಾರ್ಟಿನ್, ರೊಲ್ಸ್ ರಾಯ್ಸ್ ಬೆಲೆಗಳು ಗಗನಮುಖಿಯಾಗಲಿವೆ.

ತಪ್ಪದೇ ಓದಿ-ಸಚಿನ್ ತಂಡೊಲ್ಕರ್ ವೀರುಗೆ ದುಬಾರಿ ಬೆಲೆಯ ಗಿಫ್ಟ್ ಕೊಟ್ಟಿದ್ದೇಕೆ?

Trending DriveSpark YouTube Videos

Subscribe To DriveSpark Kannada YouTube Channel - Click Here

Read more on luxury cars gst
English summary
Read in Kannada about Luxury Cars To Cost More In India.
Story first published: Friday, December 29, 2017, 14:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark