ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ

ವಾಹನಗಳ ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಕಾರುಗಳ ಬೆಲೆಯನ್ನು ಏರಿಕೆ ಮಾಡಲು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಂಸ್ಥೆ ನಿರ್ಧರಿಸಿದ್ದು, 2018ರ ಜನವರಿ 1ರಿಂದಲೇ ಹೊಸ ಬೆಲೆಗಳನ್ನು ಪರಿಷ್ಕಣೆ ಮಾಡಲು ಮುಂದಾಗಿದೆ.

By Praveen

ದೇಶಿಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ಕಾರುಗಳು, ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯು ತನ್ನ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ಶೇ.3 ರಷ್ಟು ಬೆಲೆ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದೆ.

ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ

ಕಾರುಗಳು ಮತ್ತು ವಾಣಿಜ್ಯ ವಾಹನಗಳ ನಿರ್ಮಾಣಕ್ಕೆ ಬಳಸಲಾಗುವ ಬಿಡಿಭಾಗಗಳು ಮತ್ತು ಕೇಂದ್ರದ ಆದೇಶದಂತೆ ಕೆಲವು ಕಡ್ಡಾಯ ಸೌಲಭ್ಯಗಳನ್ನು ಒದಗಿಸುತ್ತಿರುವ ಹಿನ್ನೆಲೆ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಇದರಿಂದಾಗಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಆಟೋ ಉತ್ಪಾದಕರು ಮುಂದಾಗಿದ್ದಾರೆ.

Recommended Video

Bangalore City Police Use A Road Roller To Crush Loud Exhausts
ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ

ಹೀಗಾಗಿ ಮಹೀಂದ್ರಾ ನಿರ್ಮಾಣದ ಜನಪ್ರಿಯ ವಾಹನಗಳಾದ ವೆರಿಟೊ, ಬೊರೆರೊ, ಎಕ್ಸ್‌ಯುವಿ 500, ಎಕ್ಸ್‌ಯುವಿ 100, ಟಿಯುವಿ 300,4X4 ಜೀಪ್, ಸ್ಕಾರ್ಪಿಯೋ, ಇ2ಒ ಎಲೆಕ್ಟ್ರಿಕ್ ಮತ್ತು ಪಿಕ್‌ಅಪ್ ಟ್ರಕ್‌ಗಳು ಹಾಗೂ ಬಸ್‌ಗಳ ಖರೀದಿ ದುಬಾರಿಯಾಗಲಿದೆ.

ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಆಟೋಮೆಟಿವ್ ಸೆಕ್ಟರ್ ನಿರ್ದೇಶಕರಾದ ರಾಜನ್ ವದೇರಾ ಅವರು "ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ" ಎಂದಿದ್ದಾರೆ.

ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ

ಇದರಿಂದಾಗಿ ಜನಪ್ರಿಯ ಕಾರು ಮಾದರಿಯಾದ ವೆರಿಟೋ ಬೆಲೆಯು ಹೆಚ್ಚುವರಿಯಾಗಿ 25 ರಿಂದ 30 ಸಾವಿರ ಬೆಲೆ ಹೆಚ್ಚಳ ಸಾಧ್ಯತೆಗಳಿದ್ದು, ಉನ್ನತ ಶ್ರೇಣಿಯ ಕಾರು ಮಾದರಿಯಾದ ಎಕ್ಸ್‌ಯುವಿ 500 ಬೆಲೆಯು 1 ಲಕ್ಷದಿಂದ 1.30 ಲಕ್ಷದ ತನಕ ಬೆಲೆ ಹೆಚ್ಚಳವಾಗಲಿದೆ.

ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಿಸಿದ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬಿಡಿಭಾಗಗಳ ಬಳಕೆ ಹೆಚ್ಚಳ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಟಾಟಾ, ಸ್ಕೋಡಾ, ಹೋಂಡಾ, ಇಸುಝು, ಫೋರ್ಡ್, ಫೋಕ್ಸ್‌ವ್ಯಾಗನ್, ಮಾರುತಿ ಸುಜುಕಿ ಮತ್ತು ಟೊಯೊಟೊ ಸಂಸ್ಥೆಗಳು ಈಗಾಗಲೇ ಬೆಲೆ ಹೆಚ್ಚಳ ಮಾಡುವ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೀಗ ಮಹೀಂದ್ರಾ ಕೂಡಾ ಇದೇ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Most Read Articles

Kannada
English summary
Read in Kannada about Mahindra To Hike Prices Of Passenger And Commercial Vehicles From 2018.
Story first published: Friday, December 15, 2017, 13:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X