ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ?

Written By:

ಎಸ್‌ಯುವಿ ಕಾರು ವಿಭಾಗದ ಬಹುನೀರಿಕ್ಷಿತ ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಮಾರುಕಟ್ಟೆಗೆ ಲಗ್ಗೆಯಿಡಲು ದಿನಗಣನೆ ಶುರುವಾಗಿದ್ದು, ಬಿಡುಗಡೆ ದಿನಾಂಕವನ್ನು ಕೂಡಾ ಪ್ರಕಟಣೆ ಮಾಡಲಾಗಿದೆ. ಮಹೀಂದ್ರಾ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ ಹೊಸ ಕಾರು ನವೆಂಬರ್ 14ಕ್ಕೆ ಬಿಡುಗಡೆಗೊಳ್ಳುವುದು ಪಕ್ಕಾ ಎನ್ನಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ?

ಈ ಹಿಂದಿನ ಎಂಜಿನ್ ಮಾದರಿಯನ್ನೇ ಹೊಸ ಕಾರು ಮಾದರಿಯಲ್ಲೂ ಹೊತ್ತು ಬರುತ್ತಿರುವ ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಕಾರು ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ಪಡೆದುಕೊಳ್ಳುವ ಮೂಲಕ ಎಸ್‌ಯುವಿ ವಿಭಾಗದ ಪ್ರಿಯರನ್ನು ಸೆಳೆಯುವ ತವಕದಲ್ಲಿದ್ದು, ನವೀಕೃತ ಸೆವೆನ್ ಸ್ಲಾಟ್ ಗ್ರೀಲ್ ಜೋಡಣೆ ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ?

ಈ ಮೂಲಕ ಹೊಸ ಕಾರು ಆವೃತ್ತಿಯನ್ನು ಸಂಪೂರ್ಣ ಸ್ಪೋರ್ಟ್ ಲುಕ್‌ನೊಂದಿಗೆ ಬದಲಾವಣೆಗೊಳಿಸಲಾಗಿದ್ದು, ಬಂಪರ್ ವಿನ್ಯಾಸ, ಟರ್ನ್ ಇಂಡಿಕೇಟರ್, ಓಆರ್‌ವಿಎಂ ವಿಭಾಗಳಲ್ಲಿ ಹೊಸತನ ನೀಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ?

ಇದರಿಂದಾಗಿ ಈ ಹಿಂದಿನ ಸ್ಕಾರ್ಪಿಯೋ ಆವೃತ್ತಿಗಿಂತ ಫೇಸ್‌ಲಿಫ್ಟ್ ಆವೃತ್ತಿಯ ನೋಟದಲ್ಲಿ ಸಖತ್ ಸ್ಟೈಲಿಷ್ ಇದ್ದು, ಉತ್ಕೃಷ್ಟ ಗುಣಮಟ್ಟದ ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್ ಹಾಗೂ ಹೊಸ ವಿನ್ಯಾಸದ ಅಲಾಯ್ ಚಕ್ರಗಳನ್ನು ಹೊಂದಿರಲಿದೆ.

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ?

ಎಂಜಿನ್ ಸಾಮರ್ಥ್ಯ

2.2-ಲೀಟರ್ ಎಂ ಹ್ವಾಕ್ ಡೀಸೆಲ್ ಎಂಜಿನ್ ಪಡೆದಿರುವ ಫೇಸ್‌ಲಿಫ್ಟ್ ಸ್ಕಾರ್ಪಿಯೋ ಮಾದರಿಯು 138-ಬಿಎಚ್‌ಪಿ ಮತ್ತು 120-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ತಪ್ಪದೇ ಓದಿ-ತಮ್ಮ ಹುಟ್ಟುಹಬ್ಬದಂದು ಕಾರ್ ಡ್ರೈವರ್ ಗೆ ದುಬಾರಿ ಗಿಫ್ಟ್ ಕೊಟ್ಟ ಅನುಷ್ಕಾ ಶೆಟ್ಟಿ..!!

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ?

ಜೊತೆಗೆ ಆಯ್ಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆವೃತ್ತಿಯು ಲಭ್ಯವಿರಲಿದ್ದು, ಈ ಬಾರಿಯ ಆಟೋಮೆಟಿಕ್ ಬಾಕ್ಸ್ ಅನ್ನು ಜಪಾನ್ ಮೂಲದ ಪ್ರತಿಷ್ಠಿತ ಕಾರು ಬಿಡಿಭಾಗಗಳ ಉತ್ಪಾದನಾ ಸಂಸ್ಥೆಯಾದ ಐಸಿನ್ ಶೈಕಿಯಿಂದ ಎರವಲು ಪಡೆದಿರುವುದು ಮತ್ತೊಂದು ವಿಶೇಷ ಎನ್ನಬಹುದು.

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಬಿಡುಗಡೆ ಯಾವಾಗ?

ಆದ್ರೆ ಈ ಹಿಂದಿನ ಮಾದರಿಯಂತೆ ಹೊಸ ಆವೃತ್ತಿಯಲ್ಲಿ ಮೈಲ್ಡ್ ಹೈಬ್ರಿಡ್ ಎಂಜಿನ್ ಬಳಕೆಯನ್ನು ಕಡಿತ ಮಾಡಲಾಗಿದ್ದು, ಹೈಬ್ರಿಡ್ ಎಂಜಿನ್ ವಾಹನಗಳ ಮೇಲಿನ ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ಈ ಯೋಜನೆಯನ್ನು ಕೈಬಿಡಲಾಗುತ್ತಿದೆ.

Trending On DriveSpark Kannada:

ತನ್ನ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ಮಾರುತಿ ಸುಜುಕಿ

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೋಂಡಾ ಹೊಸ ಸ್ಕೂಟರ್ ಗ್ರಾಜಿಯಾ..!

English summary
Read in Kannada about Mahindra Scorpio Facelift India Launch Date Revealed.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark