ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ

Written By:

ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಟಿ10, ಟಿ10 ಡ್ಯುಯಲ್-ಟೋನ್, ಟಿ10 ಎಎಂಟಿ ಮತ್ತು ಟಿ10 ಎಎಂಟಿ ಡುಯಲ್-ಟೋನ್ ಎಂಬ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.

ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ

ಮಹೀಂದ್ರಾ ಕಂಪನಿ ತನ್ನ ಟಿಯುವಿ300 ಟಿ10 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಮಹೀಂದ್ರಾ ಟಿಯುವಿ300 ಟಿ10 ಬೆಲೆ ರೂ 9.75 ಲಕ್ಷದಿಂದ(ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗಲಿದೆ ಮತ್ತು ಡ್ಯುಯಲ್-ಟೋನ್ ಎಎಂಟಿ ಮಾದರಿಯ ಕಾರು ರೂ. 10.65 ಲಕ್ಷ ಬೆಲೆ ಪಡೆದುಕೊಂಡಿದೆ.

ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ

ಟಿ 10 ಆವೃತಿಯು ಕಾಂಪ್ಯಾಕ್ಟ್ ಎಸ್‌ಯುವಿ ಬ್ಯಾಡ್ಜ್ ಪಡೆದುಕೊಂಡಿದ್ದು, ಬ್ಲ್ಯಾಕ್ಡ್ ಔಟ್ ಹೆಡ್‌ಲ್ಯಾಂಪ್ ಕ್ಲಸ್ಟರ್, ರೂಫ್ ಹಳಿಗಳ ಭಾಗ, ಅಲಾಯ್ ಚಕ್ರಗಳು ಮತ್ತು ಟೈಲ್ ಗೇಟ್ ಸ್ಪೇರ್ ವೀಲ್ ಕವರ್ ಈಗ ಮೆಟಾಲಿಕ್ ಗ್ರೇ ಬಣ್ಣ ಪಡೆದಿದೆ ಬದಲಾವಣೆಗಳನ್ನು ಪಡೆದಿದೆ.

ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ

ಕ್ಯಾಬಿನ್ ಒಳಗೆ, ಮ್ಯಾಪ್ ಮೈ ಇಂಡಿಯಾ ಅಪ್ಲಿಕೇಶನ್ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ನವೀಕರಿಸಲಾಗಿರುವ ನ್ಯಾವಿಗೇಷನ್ ಮತ್ತು ಮಹೀಂದ್ರಾ ಬ್ಲೂ ಸೆನ್ಸ್ ಅಪ್ಲಿಕೇಶನ್ ಹೊಂದಿದೆ.

ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ

ಮಹೀಂದ್ರಾ ಟಿಯುವಿ300 ಟಿ10 ಕಾರು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು ಮತ್ತು ಎಬಿಎಸ್ ಜೊತೆ ಇಬಿಡಿ ಮತ್ತು ISOFIX ಅಳವಡಿಸಲಾಗಿರುವ ಮಕ್ಕಳ ಆಸನಗಳನ್ನು ಈ ಕಾರು ಪಡೆದುಕೊಂಡಿದೆ.

ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ

ಮಹೀಂದ್ರಾ 'ಟಿ 10' ಶ್ರೇಣಿಯಲ್ಲಿ ಟಿಯುವಿ300 ಟಿ10 ಉನ್ನತ ಶ್ರೇಣಿಯ ಕಾರಾಗಿದ್ದು, ಈ ಕಾರು ಸಂಪೂರ್ಣವಾಗಿ ಲೋಡ್ ಮಾಡಲಾದ ಅಲಾಯ್ ಚಕ್ರಗಳು, ಹಿಂಭಾಗದ ಸ್ಪಾಯ್ಲರ್ ಮತ್ತು ಮುಂಭಾಗದ ಫಾಗ್ ದೀಪಗಳು ಮತ್ತು ಕಪ್ಪು ಬಣ್ಣದ ಕ್ರೋಮ್ ಪಡೆದ ಗ್ರಿಲ್ ಒಳಗೊಂಡಿದೆ.

ಮಹೀಂದ್ರಾ ಟಿಯುವಿ300 ಟಿ10 ಎಸ್‌ಯುವಿ ಕಾರು ಭಾರತದಲ್ಲಿ ಬಿಡುಗಡೆ

ಹೊಸ ಮಹೀಂದ್ರಾ 'ಟಿ 10' ಎಸ್‌ಯುವಿ ಕಾರು 1.5 ಲೀಟರ್ mHawk100 ಡೀಸೆಲ್ ಎಂಜಿನ್ ಅಳವಡಿಕೆಗೊಂಡಿದ್ದು, ಈ ಎಂಜಿನ್ 240 ಎನ್‌ಎಂ ತಿರುಗುಬಲದಲ್ಲಿ 100 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ. ಈ ಎಂಜಿನ್‌ 5 ಸ್ಪೀಡ್ ಮಾನ್ಯುಯಲ್ ಹಾಗು ಸ್ವಯಂಚಾಲಿತ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಬಿಡುಗಡೆಯಾಗಿದೆ.

English summary
Mahindra TUV300 T10 launched in India. Prices for the Mahindra TUV300 T10 start from Rs 9.75 lakh (Ex-showroom Delhi) and goes up to Rs 10.65 lakh for the dual-tone AMT model.
Story first published: Friday, September 22, 2017, 18:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark