ಮಾರಾಟದಲ್ಲಿ ಸ್ವಿಫ್ಟ್ ಕಾರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ 'ಆಲ್ಟೊ'

Written By:

2017ರ ಮೇ ತಿಂಗಳಲ್ಲಿ ಅಗ್ರ 10 ಮಾರಾಟದ ಕಾರುಗಳಲ್ಲಿ ಮಾರುತಿ ಆಲ್ಟೊ ಕಾರು ಹೆಚ್ಚು ಮಾರಾಟವಾಗುವ ಮೂಲಕ ಮತ್ತೆ ನಂ.1 ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಭಾರತದ ಜನತೆಯ ಮತ್ತೊಂದು ನೆಚ್ಚಿನ ಕಾರು ಸ್ವಿಫ್ಟ್ ಹಿಂದಿಕ್ಕಿ ಆಲ್ಟೊ ಈ ಸಾಧನೆ ಮಾಡಿದ್ದು, ಅಗ್ರ 10 ಮಾರಾಟದ ಕಾರುಗಳಲ್ಲಿ ಮಾರುತಿ ಆಲ್ಟೊ ಕಾರು ಮೊದಲ ಸ್ಥಾನದಲ್ಲಿ ಪಡೆದುಕೊಂಡಿದೆ.

ಮುಂದಿನ ಪೀಳಿಗೆಯ ಸ್ವಿಫ್ಟ್ ಕಾರನ್ನು ಪರಿಚಯಿಸಲು ತಯಾರಾಗುತ್ತಿರುವ ಮಾರುತಿ ಕಂಪನಿಯು ತನ್ನ ಮಾರಾಟದ ಚಾರ್ಟ್ ಅನ್ನು ಹೆಚ್ಚು ತಳ್ಳುತಿದೆ ಎನ್ನಲಾಗಿದೆ.

ಕಂಪನಿಯು 23,802 ಸ್ವಿಫ್ಟ್ ಕಾರುಗಳನ್ನು ಏಪ್ರಿಲ್ 2017ರಲ್ಲಿ ಮಾರಾಟ ಮಾಡಿತ್ತು ಮತ್ತು ಅದೇ ತಿಂಗಳಿನಲ್ಲಿ ಉನ್ನತ ಗೌರವವನ್ನು ಗಳಿಸಿತು.

ಆದರೆ, ಮಾರುತಿ ಸಂಸ್ಥೆ 2017ರ ಮೇ ತಿಂಗಳಲ್ಲಿ 23,618 ಆಲ್ಟೊ ಕಾರುಗಳನ್ನು ಮಾರಾಟ ಮಾಡಿದ್ದು, ಸ್ವಿಫ್ಟ್ 16,532 ಕಾರುಗಳನ್ನು ಮಾರಾಟ ಮಾಡಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಮೇ ತಿಂಗಳಲ್ಲಿ ಸ್ವಿಫ್ಟ್ ತನ್ನ ಮೊದಲ ಸ್ಥಾನವನ್ನು ಆಲ್ಟೊ ಕಾರಿಗೆ ಬಿಟ್ಟುಕೊಟ್ಟಿದೆ ಹಾಗು ಹೆಚ್ಚು ಬದಲಾವಣೆಗಳನ್ನು ಕಂಡ ಆಲ್ಟೊ ಈಗಲೂ ಸಹ ಜನಪ್ರಿಯ ಕಾರು ಎನ್ನಿಸಿಕೊಂಡಿದೆ.

ಮತ್ತೊಂದೆಡೆ ಮಾರುತಿ ಸಂಸ್ಥೆಯ ಮತ್ತೊಂದು ಯಶಸ್ವಿ ಕಾರು ಬಲೆನೊ, ತನ್ನ ಮಾರಾಟದಲ್ಲಿ ಕ್ಷಿಪ್ರಗತಿಯ ಪ್ರಗತಿ ಕಂಡಿದ್ದು, ಮೇ ತಿಂಗಳಲ್ಲಿ 14,629 ಕಾರುಗಳನ್ನು ಮಾರಾಟ ಮಾಡಿದೆ.

ಮಾರುತಿ ಡಿಜೈರ್ ಕಾರು ಮಾರಾಟದಲ್ಲಿ ಗಮನಾರ್ಹವಾಗಿ ಕುಸಿತ ಕಂಡಿದ್ದು, ಮೇ 2017ರಲ್ಲಿ 9,413 ಕಾರುಗಳನ್ನು ಮಾರಾಟ ಮಾಡಲು ಮಾತ್ರ ಮಾರುತಿ ಸಂಸ್ಥೆ ಸಫಲವಾಗಿದೆ. ಹೊಸ ಡಿಜೈರ್ ಭಾರತದಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರಿ ಪ್ರತಿಕ್ರಿಯೆ ಪಡೆದುಕೊಂಡಿದೆ.

Read more on ಮಾರುತಿ maruti
English summary
Read in Kannada about Maruti Alto regained No. 1 position in the top 10 selling cars for the month of May 2017.
Story first published: Saturday, June 10, 2017, 10:19 [IST]
Please Wait while comments are loading...

Latest Photos