2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ- ವಿಜೇತರಾಗಿ ಹೊರಹೊಮ್ಮಿದ ಸುರೇಶ್ ರಾಣಾ ಮತ್ತು ನಟರಾಜ್ ಆರ್

Written By:

ಜುಲೈ 15ರಂದು ಪ್ರತಿಷ್ಠಿತ ಮೊಬಿಲ್ ಸಂಸ್ಶೆಯ ನೇತೃತ್ವದಲ್ಲಿ ಬೆಂಗಳೂರಿನಿಂದ ಆರಂಭವಾಗಿದ್ದ 9ನೇ ಮಾರುತಿ ಸುಜುಕಿ ದಕ್ಷಿಣ ಡೇರ್ ರ‍್ಯಾಲಿ ಆವೃತ್ತಿಯು ಅಂತಿಮವಾಗಿ ಪುಣೆಯಲ್ಲಿ ಮುಕ್ತಾಯಗೊಂಡಿದ್ದು, ಆರು ದಿನಗಳ ಕಾಲ ನಡೆದ ರೋಚಕ ಸ್ಪರ್ಧೆಯ ಹೈಲೈಟ್ಸ್‌ಗಳು ಇಲ್ಲಿವೆ.

To Follow DriveSpark On Facebook, Click The Like Button
ತೆರೆಕಂಡ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿ

ಮೊದಲ ದಿನದಿಂದಲೂ ಅಲ್ಟಿಮೆಟ್ ಕಾರುಗಳ ವಿಭಾಗದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಮಾರುತಿ ಸುಜುಕಿ ತಂಡದ ಸುರೇಶ್ ರಾಣಾ, ಕೊನೆ ಕ್ಷಣದವರೆಗೂ ಪ್ರತಿಸ್ಪರ್ಧಿಗಳೊಂದಿಗೆ ಉತ್ತಮ ಪ್ರದರ್ಶನ ನಡೆಸಿ ಪ್ರಥಮ ಸ್ಥಾನದೊಂದಿಗೆ ಪ್ರತಿಷ್ಠಿತ ಮೋಟಾರ್ ರೇಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ತೆರೆಕಂಡ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿ

ಇದೇ ಪ್ರಯತ್ನ ನಡೆಸಿದ್ದ ಅಲ್ಟಿಮೆಟ್ ಬೈಕ್ ವಿಭಾಗದ ಸ್ಪರ್ಧಿ ನಟರಾಜ್ ಆರ್ ಕೂಡ ಪ್ರಥಮ ಸ್ಥಾನದೊಂದಿಗೆ 9ನೇ ದಕ್ಷಿಣ ಡೇರ್ ರ‍್ಯಾಲಿಯಲ್ಲಿ ತಮ್ಮ ಆಪ್ ರೋಡಿಂಗ್ ಕೌಶಲ್ಯಗಳನ್ನು ಪ್ರದರ್ಶನ ಮಾಡುವ ಮೂಲಕ ಮೋಟಾರ್ ರೇಸ್ ಪ್ರಿಯರಿಗೆ ರಸದೌತಣ ನೀಡಿದ್ದು ರೋಚಕವಾಗಿತ್ತು.

ತೆರೆಕಂಡ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿ

ಇನ್ನು ಅಲ್ಟಿಮೆಟ್ ಕಾರು ವಿಭಾಗದಲ್ಲಿ ಉತ್ತಮ ಸಾಧನೆ ತೊರಿದ ಸಮರ್ಥ್ ಯಾದವ್ ಮತ್ತು ಎಸ್ಎಂ ನಿಜಾಮಿ ದ್ವಿತಿಯ ಸ್ಥಾನ ಪಡೆದುಕೊಂಡರೆ ಸಂದೀಪ್ ಶರ್ಮಾ ಮತ್ತು ಕರಣ್ ಶರ್ಮಾ ತೃತಿಯ ಸ್ಥಾನ ತಮ್ಮದಾಗಿಸಿಕೊಂಡರು.

ತೆರೆಕಂಡ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿ

ಅದೇ ರೀತಿಯಾಗಿ ಅಲ್ಟಿಮೆಟ್ ಬೈಕ್ ವಿಭಾಗದಲ್ಲಿ ನಟರಾಜ್ ಆರ್ ನಂತರ ಉತ್ತಮ ಸಾಧನೆ ತೋರಿದ ಅಬ್ದುಲ್ ವಾಹಿದ್ ದ್ವಿತಿಯ ಸ್ಥಾನ ಮತ್ತು ಸಂಜಯ್ ಕುಮಾರ್ ತೃತಿಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ತೆರೆಕಂಡ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿ

ಇನ್ನು ಬೆಂಗಳೂರಿನಿಂದ ಆರಂಭವಾಗಿದ್ದ ದಕ್ಷಿಣ ಡೇರ್ ರ‍್ಯಾಲಿಯೂ ಒಟ್ಟು 2 ಸಾವಿರ ಕಿಮಿ ಸ್ಪರ್ಧೆಯಲ್ಲಿ 180 ಸ್ಪರ್ಧಿಗಳು ಭಾಗಿಯಾಗಿದ್ದರು.

ಆದ್ರೆ ಅಂತಿಮ ಹಂತದವರೆಗೂ ಯಾವುದೇ ರೀತಿಯ ತೊಂದರೆಗೆ ಒಳಗಾಗದೇ ವಿಜೇಯದ ಹಾದಿಯತ್ತ ಸಾಗಿದ್ದ ಸುರೇಶ್ ರಾಣಾ, ನಟರಾಜ್ ಆರ್, ಸಮರ್ಥ್ ಯಾದವ್, ಎಸ್ಎಂ ನಿಜಾಮಿ, ಅಬ್ದುಲ್ ವಾಹಿದ್ ಮತ್ತು ಸಂಜಯ್ ಕುಮಾರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದು ರೋಚಕವಾಗಿತ್ತು.

ತೆರೆಕಂಡ 2017ರ ಮಾರುತಿ ಸುಜುಕಿ ದಕ್ಷಿಣ ಡೇರ್ ಮೋಟಾರ್ ರ‍್ಯಾಲಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮೋಟಾರ್ ರೇಸ್ ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಾರುತಿ ಸುಜುಕಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದಕ್ಕೆ ಬೆಂಬಲವಾಗಿ ನಿಂತಿದ್ದ ಪ್ರತಿಷ್ಠಿತ ಮೊಬಿಲ್ ಸಂಸ್ಥೆ ಕೂಡಾ ಈ ಕಾರ್ಯಕ್ರಮ ಹೊಣೆ ಹೊತ್ತಿತ್ತು.

ಒಟ್ಟಿನಲ್ಲಿ ಮೋಟಾರ್ ರೇಸ್ ಪ್ರಿಯರಿಗೆ ದಕ್ಷಿಣ ಡೇರ್ ರೇಸ್ ಆವೃತ್ತಿಯೂ ಖುಷಿ ನೀಡಿದ್ದು ಮಾತ್ರ ಸುಳ್ಳಲ್ಲ.

English summary
Read in Kannada about 2017 Maruti Suzuki Dakshin Dare Concludes with Suresh Rana and R Nataraj As Winners.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark