ಹೊಸ ಡಿಜೈರ್ ಕಾರಿನ ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ 'ಮಾರುತಿ' !!

Written By:

ಇತ್ತೀಚೆಗೆ ಬಿಡುಗಡೆಗೊಂಡ ಡಿಜೈರ್ ಕಾರಿನಲ್ಲಿ ಕೆಲವು ಸಣ್ಣ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿದೆ.

ಹೊಸ ಡಿಜೈರ್ ಕಾರಿನ ಮಾರಾಟ ನಿಲ್ಲಿಸಿದ 'ಮಾರುತಿ' !! ಕಾರಣ ತಿಳ್ಕೊಳಿ

ಭಾರತೀಯ ಮಾರುಕಟ್ಟೆಯಲ್ಲಿ ಕಾರು ದಿಗ್ಗಜ ಎನ್ನಿಸಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆ ಇತ್ತೀಚಿಗೆ ತನ್ನ ಬಹುನಿರೀಕ್ಷಿತ ಡಿಜೈರ್ ಬಿಡುಗಡೆಗೊಳಿಸಿತ್ತು. ಈ ಕಾರಿನ ಸ್ಟೇರಿಂಗ್‌ನಲ್ಲಿ ಬಹಳಷ್ಟು ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಈ ಸ್ಟೇರಿಂಗ್ ಕಿಟ್ ಬದಲಾಯಿಸಿಲು ಸಂಸ್ಥೆ ತೀರ್ಮಾನಿಸಿದೆ.

ಹೊಸ ಡಿಜೈರ್ ಕಾರಿನ ಮಾರಾಟ ನಿಲ್ಲಿಸಿದ 'ಮಾರುತಿ' !! ಕಾರಣ ತಿಳ್ಕೊಳಿ

ಈ ಕಾಂಪ್ಯಾಕ್ಟ್ ಸೆಡಾನ್ ಕಾರಿಗೆ ಆಗಿರುವ ತೊಂದರೆ ಪರಿಹಾರವಾಗುವವರೆಗೂ ವಿತರಣೆಯನ್ನು ಸ್ವಲ್ಪ ದಿನಗಳ ಕಾಲ ನಿಲ್ಲಿಸಲು ವಿತರಕರಿಗೆ ಕಂಪನಿಯು ಸೂಚನೆ ನೀಡಿದೆ ಎನ್ನಲಾಗಿದೆ.

ಹೊಸ ಡಿಜೈರ್ ಕಾರಿನ ಮಾರಾಟ ನಿಲ್ಲಿಸಿದ 'ಮಾರುತಿ' !! ಕಾರಣ ತಿಳ್ಕೊಳಿ

ಎಲ್ಲಾ ಕಾರುಗಳಲ್ಲಿ ಈ ಸಮಸ್ಯೆ ಎದುರಾಗಿದೆಯೇ ಅಥವಾ ನಿರ್ದಿಷ್ಟ ಬ್ಯಾಚ್‌ನ ಕಾರುಗಳಿಗೆ ಈ ತೊಂದರೆ ಕಾಣಿಸಿಕೊಂಡಿದೆಯೇ ಎಂಬ ವಿಚಾರ ಇಲ್ಲಿಯವರೆಗೂ ಬಹಿರಂಗವಾಗಿಲ್ಲ.

ಹೊಸ ಡಿಜೈರ್ ಕಾರಿನ ಮಾರಾಟ ನಿಲ್ಲಿಸಿದ 'ಮಾರುತಿ' !! ಕಾರಣ ತಿಳ್ಕೊಳಿ

ಈಗಾಗಲೇ ಮಾರುತಿ ಕಂಪನಿ ತನ್ನ ಉತ್ಪಾದನಾ ಘಟಕದಿಂದ ಹೊಸ ಸ್ಟೇರಿಂಗ್ ಕಿಟ್ ತರಿಸಿಕೊಳ್ಳುತ್ತಿದ್ದು, ಕಾರುಗಳ ವಿತರಣೆ ಮಾಡುವ ಮೊದಲು ಲೋಪದೋಷಗಳನ್ನು ಸರಿಪಡಿಸಿ ಮಾರಾಟ ಮಾಡಲು ಆದೇಶ ನೀಡಿದೆ ಎಂಬ ವಿಚಾರ ತಿಳಿದುಬಂದಿದೆ.

ಹೊಸ ಡಿಜೈರ್ ಕಾರಿನ ಮಾರಾಟ ನಿಲ್ಲಿಸಿದ 'ಮಾರುತಿ' !! ಕಾರಣ ತಿಳ್ಕೊಳಿ

ಹಾಗು, ಸದ್ಯ ಉತ್ಪಾದನೆ ಹಂತದಲ್ಲಿರುವ ಕಾರುಗಳಲ್ಲಿ ಈ ಸ್ಟೇರಿಂಗ್ ಕಿಟ್ ಲೋಪದೋಷ ಸರಿ ಮಾಡಿ ದೇಶದಾದ್ಯಂತ ಮಾರಾಟಗಾರರಿಗೆ ತಲುಪಿಸುವ ಕಾರ್ಯವನ್ನು ಕಂಪೆನಿಯು ಈಗಾಗಲೇ ಕೈಗೊಂಡಿದೆ.

ಹೊಸ ಡಿಜೈರ್ ಕಾರಿನ ಮಾರಾಟ ನಿಲ್ಲಿಸಿದ 'ಮಾರುತಿ' !! ಕಾರಣ ತಿಳ್ಕೊಳಿ

ಮೂರನೇ ಪೀಳಿಗೆಯ ಈ ಮಾರುತಿ ಡಿಜೈರ್ ಕಾರು, 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.3 ಲೀಟರ್ ನಾಲ್ಕು ಸಿಲಿಂಡರ್ ಆಯಿಲ್ ಬರ್ನರ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ಡಿಜೈರ್ ಕಾರಿನ ಮಾರಾಟ ನಿಲ್ಲಿಸಿದ 'ಮಾರುತಿ' !! ಕಾರಣ ತಿಳ್ಕೊಳಿ

ಈಗಾಗಲೇ ಸಾವಿರಾರು ವಾಹನಗಳು ಮಾರಾಟವಾಗಿವೆ. ನೀವೇನಾದರೂ ಈ ಕಾರನ್ನು ಕೊಂಡಿದ್ದರೆ, ತಕ್ಷಣ ನಿಮ್ಮ ಡಿಲರ್ಸ್ ಬಳಿ ಈ ವಿಚಾರದ ಬಗ್ಗೆ ಮಾಹಿತಿ ಪಡೆಯಿರಿ. ಇನ್ನಾದರೂ ಸಂಸ್ಥೆ ಈ ರೀತಿಯ ತೊಂದರೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂಬುದೇ ಡ್ರೈವ್ ಸ್ಪಾರ್ಕ್ ಆಶಯವಾಗಿದೆ.

Read more on ಮಾರುತಿ maruti
English summary
India's leading automaker Maruti Suzuki recently launched the new-gen Dzire in the Indian market. And now the manufacturer is reportedly dealing with an issue in the car.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark