ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳಲಿದೆ 'ಮಿನಿ' ಎಲೆಕ್ಟ್ರಿಕ್ ಕಾರು

Written By:

ಬಿಎಂಡಬ್ಲ್ಯು ಅಧೀನದ ಐಷಾರಾಮಿ ಕಾರು ಮಾದರಿ ಮಿನಿ ಎಲೆಕ್ಟ್ರಿಕ್ ಕಾರು ಮಾದರಿಗಳು ಜರ್ಮನಿಯ ಪ್ರತಿಷ್ಠಿತ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದ್ದು, ಹೊಸ ಕಾರು ಆವೃತ್ತಿಗಳ ಸಂಪೂರ್ಣ ವಿವರಣೆ ಇಲ್ಲಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ 'ಮಿನಿ' ಎಲೆಕ್ಟ್ರಿಕ್..!

ಇತ್ತೀಚೆಗೆ ಎಲ್ಲಾ ಐಷಾರಾಮಿ ಕಾರು ಮಾದರಿಗಳು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದ್ದು, ಇದೀಗ ಬಿಎಂಡಬ್ಲ್ಯು ಕೂಡಾ ತನ್ನ ಜನಪ್ರಿಯ ಕಾರು ಮಾದರಿಯಾದ ಮಿನಿ ಕಾರನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ 'ಮಿನಿ' ಎಲೆಕ್ಟ್ರಿಕ್..!

ಹೀಗಾಗಿ ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಜರ್ಮನಿಯ ಫ್ರಾಂಕ್‌ಫ್ರರ್ಟ್ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲಿರುವ ಬಿಎಂಡಬ್ಲ್ಯು, 2019ರಿಂದ ಅಧಿಕೃತವಾಗಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನಾ ಯೋಜನೆ ಚಾಲನೆ ನೀಡಲಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ 'ಮಿನಿ' ಎಲೆಕ್ಟ್ರಿಕ್..!

ಸದ್ಯ ಡ್ರೈವ್ ಟ್ರೈನ್ ತಂತ್ರಜ್ಞಾನಗೊಂದಿಗೆ ಡಿಸೇಲ್ ಮತ್ತು ಪೆಟ್ರೋಲ್ ಆವೃತ್ತಿ ಲಭ್ಯವಿರುವ ಮಿನಿ ಕಾರು, ಮುಂಬರುವ ದಿನಗಳಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಲಭ್ಯವಾಗಲಿವೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ 'ಮಿನಿ' ಎಲೆಕ್ಟ್ರಿಕ್..!

ಆಕ್ಸ್‌ಫರ್ಡ್‌ನಲ್ಲಿರುವ ಬಿಎಂಡಬ್ಲ್ಯು ಮುಖ್ಯ ಕಾರು ಉತ್ಪಾದನಾ ಘಟಕದಲ್ಲೇ ಎಲೆಕ್ಟ್ರಿಕ್ ಆವೃತ್ತಿಗಳು ಅಭಿವೃದ್ದಿಯಾಗಲಿದ್ದು, ಇದಕ್ಕಾಗಿ ಬಿಎಂಡಬ್ಲ್ಯು ಈಗಾಗಲೇ ಬೃಹತ್ ಯೋಜನೆಯೊಂದನ್ನು ಸಿದ್ಧಗೊಳಿಸಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ 'ಮಿನಿ' ಎಲೆಕ್ಟ್ರಿಕ್..!

ಇದಲ್ಲದೇ ಐ3 ಸಂಶೋಧನಾ ತಾಂತ್ರಿಕ ಅಂಶಗಳೊಂದಿಗೆ ಮಿನಿ ಎಲೆಕ್ಟ್ರಿಕ್ ಅಭಿವೃದ್ಧಿಯಾಗುವ ಬಗ್ಗೆ ಸುಳಿವು ನೀಡಿರುವ ಬಿಎಂಡಬ್ಲ್ಯು, ವಿಶೇಷ ಹೊರ ಮತ್ತು ಒಳ ವಿನ್ಯಾಸಗಳೊಂದಿಗೆ ತ್ರಿ ಡೋರ್ ವ್ಯವಸ್ಥೆ ಹೊಂದಿರಲಿದೆ ಎಂದಿದೆ.

ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿದೆ 'ಮಿನಿ' ಎಲೆಕ್ಟ್ರಿಕ್..!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿರುವ ಬಿಎಂಡಬ್ಲ್ಯು ಸಂಸ್ಥೆ ಕೂಡಾ ಎಕ್ಸ್‌3 ಜೊತೆ ಮಿನಿ ಆವೃತ್ತಿಯನ್ನು ಎಲೆಕ್ಟ್ರಿಕ್ ಎಂಜಿನ್ ಜೊತೆ ಅಭಿವೃದ್ಧಿಗೊಳಿಸುತ್ತಿದೆ.

English summary
Read in Kannada about MINI Electric Concept To Debut At Frankfurt Motor Show.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark