ಭಾರತದಲ್ಲಿ ಆಡಿ ಡೀಸೆಲ್ ಕಾರುಗಳ ಸದ್ದು; ಬಿಡುಗಡೆಗೊಂಡಿದೆ ಪವರ್ ಫುಲ್ ಎ4 35 ಟಿಡಿಐ

Written By:

ಜರ್ಮನಿ ಮೂಲದ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆ ಆಡಿ, ತನ್ನ ಬಹುನೀರಿಕ್ಷಿತ ಆಡಿ ಎ4 35 ಟಿಡಿಐ ಡೀಸೆಲ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.40.20 ಲಕ್ಷಕ್ಕೆ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಹೊಸ ತಂತ್ರಜ್ಞಾನ ಹೊಂದಿರುವ ಆಡಿ ಎ4 35 ಟಿಡಿಐ, 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಜೊತೆಗೆ 190ಬಿಎಚ್‌ಪಿ ಮತ್ತು 400ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿದ್ದು, ನಾಲ್ಕು ಸಿಲಿಂಡರ್‌ವುಳ್ಳ ಡೀಸೆಲ್ ಎಂಜಿನ್ ಟರ್ಬೋಚಾರ್ಜ್ಡ್ ವ್ಯವಸ್ಥೆಯಿದೆ. ಹೊಸ ಆಡಿ ಪ್ರತಿ ಲೀಟರ್ ಡೀಸೆಲ್‌ಗೆ 18.25 ಕಿ.ಮಿ ಮೈಲೇಜ್ ನೀಡಲಿದೆ ಎಂದು ಆಡಿ ಹೇಳಿಕೊಂಡಿದೆ.

ಇನ್ನೊಂದು ಪ್ರಮುಖ ಅಂಶವೇನೆಂದರೆ, ಈ ಹಿಂದಿನ ಆಡಿ ಆವೃತ್ತಿಗಳಿಂತಲೂ ಹೆಚ್ಚು ಪರಿಷ್ಕರಣೆ ಹೊಂದಿರುವ ಆಡಿ ಎ4 35 ಟಿಡಿಐ, ಶೇಕಡಾ 7ರಷ್ಟು ಹೆಚ್ಚುವರಿ ಮೈಲೇಜ್ ನೀಡಲಿವೆ. ಹೀಗಾಗಿ ಮೈಲೇಜ್ ವಿಚಾರವಾಗಿ ಹಿಂಜರಿಯುವ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಿದೆ.

ಇನ್ನು ಎ4 35 ಟಿಡಿಐ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಭಾರತ ಆಡಿ ಹೆಡ್ ರಹೀಲ್ ಅನ್ಸಾರಿ, "ಇದೊಂದು ಅತ್ಯುತ್ತಮ ಕಾರುಗಳಲ್ಲಿ ಒಂದಾಗುವ ನೀರಿಕ್ಷೆಯಿದ್ದು, ಹೊಸ ವಿನ್ಯಾಸ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುವ ನೀರಿಕ್ಷೆಯಿದೆ. ಅದಕ್ಕಾಗಿ ಹಿಂದಿನ ಆವೃತ್ತಿಗಳಲ್ಲಿನ ವೈಶಿಷ್ಟ್ಯತೆಗಳನ್ನು ಸಂಪೂರ್ಣ ಪರಿಷ್ಕರಣೆ ಮಾಡಿಯೇ ಆಡಿ ಎ4 35 ಟಿಡಿಐ ಅಭಿವೃದ್ಧಿಗೊಳಿಸಲಾಗಿದೆ." ಎಂದಿದ್ದಾರೆ. 

ಆಡಿ ಎ4 35 ಟಿಡಿಐ ಆವೃತ್ತಿಯಲ್ಲಿ ಪ್ರಸ್ತುತ ತಂತ್ರಜ್ಞಾನಗಳ ಸಮ್ಮಿಲಿನವಾಗಿದ್ದು, ಇಂಟಿರಿಯರ್ ಡಿಸೈನ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಪುನಾರಾಭಿವೃದ್ಧಿಗೊಂಡಿರುವ ಆಡಿ ಡೀಸೆಲ್ ಆವೃತ್ತಿ, ಮುಂದಿನ ಪೀಳಿಗೆಯ ನೆಚ್ಚಿನ ಕಾರ್ ಆಗಿ ಹೊರಹೊಮ್ಮುವ ನೀರಿಕ್ಷೆಯಿದೆ. ಇದರೊಂದಿಗೆ ಬಿಎಂಡಬ್ಲ್ಯು 3 ಸೀರಿಸ್ ಹಾಗೂ ಮೆರ್ಸಿಡಿಸ್ ಬೆಂಝ್ ಸಿ ಕ್ಲಾಸ್‌ಗೆ ಪ್ರತಿಸ್ವರ್ಧಿಯಾಗಲಿದೆ.

ಐಷಾರಾಮಿ ಆಡಿ A4 ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಆಡಿ audi
English summary
New Audi A4 35 TDI diesel variant launched in India. Audi has claimed the new A4 delivers 7 percent better mileage compared to the older car.
Please Wait while comments are loading...

Latest Photos