ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಬುಕ್ ಮಾಡಲು ಅನುವು ಮಾಡಿಕೊಟ್ಟ ಜೆ.ಎಲ್.ಆರ್

ಜೆ.ಎಲ್.ಆರ್ ಸಂಸ್ಥೆ ಭಾರತದಲ್ಲಿ ತನ್ನ ನೂತನ ತಲೆಮಾರಿನ ಲ್ಯಾಂಡ್ ರೋವರ್ ಡಿಸ್ಕವರಿ ಕಾರನ್ನು ಅನಾವರಣಗೊಳಿಸಲು ಮುಂದಾಗಿದ್ದು, ಈಗಾಗಲೇ ಕಾರಿನ ಬುಕ್ ಮಾಡಲು ಅನುಕೂಲ ಮಾಡಿಕೊಟ್ಟಿದೆ.

By Girish

ಜಗ್ವಾರ್ ಲ್ಯಾಂಡ್ ರೋವರ್ ಕಂಪನಿಯ ಲ್ಯಾಂಡ್ ರೋವರ್ ಡಿಸ್ಕವರಿ 7 ಆಸನ ವಿನ್ಯಾಸದ ಪೂರ್ಣಪ್ರಮಾಣದ ಎಸ್‌ಯುವಿ ಕಾರಾಗಿದ್ದು, ಬಲಿಷ್ಠ ಸಾಮರ್ಥ್ಯ ಪಡೆದುಕೊಂಡಿರುವ ಈ ಕಾರನ್ನು ರೂ. 3 ಲಕ್ಷ ನೀಡಿ ಬುಕ್ ಮಾಡಬಹುದು ಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಬುಕ್ ಮಾಡಲು ಅನುವು ಮಾಡಿಕೊಟ್ಟ ಜೆ.ಎಲ್.ಆರ್

ಬಿಡುಗಡೆಗೊಳ್ಳುತ್ತಿರುವ ಕಾರು ಮೂರನೇ ತಲೆಮಾರಿನ ಮಾದರಿಯಾಗಿದ್ದು, ಆದರೂ ಸಹ 1989ರಿಂದ ಇಲ್ಲಿಯವರೆಗೆ 5 ಆವೃತಿಗಲ್ಲಿ ಡಿಸ್ಕವರಿ ಬಿಡುಗಡೆಗೊಂಡಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಬುಕ್ ಮಾಡಲು ಅನುವು ಮಾಡಿಕೊಟ್ಟ ಜೆ.ಎಲ್.ಆರ್

ನೂತನ ತಲೆಮಾರಿನ ಡಿಸ್ಕವರಿ ಮುಂಚಿನ ಮಾದರಿಯಂತೆ ಹೆಚ್ಚು ಸಾಮರ್ಥ್ಯ, ಆರಾಮದಾಯಕವಾಗಿ, ಹಗುರವಾಗಿ ಮತ್ತು ಹೆಚ್ಚು ವೇಗವಾಗಿ ಇರಲಿದೆ ಎಂದು ಮಾರುಕಟ್ಟೆ ತಜ್ಞರ ನಿರೀಕ್ಷೆಯಾಗಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಬುಕ್ ಮಾಡಲು ಅನುವು ಮಾಡಿಕೊಟ್ಟ ಜೆ.ಎಲ್.ಆರ್

ಈ ಕಾರು ಹಿಂದಿನ ಪೀಳಿಗೆಯಲ್ಲಿ ಇರುವಂತಹ ಚಾರ್ಸಿಯ ಬದಲು ಗಟ್ಟಿಯಾದ ಮತ್ತು ಹಗುರವಾದ ಅಲ್ಯೂಮಿನಿಯಂ ಮಾನೋಕಾಕ್ ಚಾರ್ಸಿಯನ್ನು ಈ ಎಸ್‌ಯುವಿ ಕಾರು ಪಡೆದುಕೊಂಡಿದೆ ಮತ್ತು ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಈ ಡಿಸ್ಕವರಿ ಕಾರು 480 ಕೆ.ಜಿ ಹಗುರವಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ಬುಕ್ ಮಾಡಲು ಅನುವು ಮಾಡಿಕೊಟ್ಟ ಜೆ.ಎಲ್.ಆರ್

ಲ್ಯಾಂಡ್ ರೋವರ್ ಡಿಸ್ಕವರಿ 3-ಲೀಟರ್ ಪೆಟ್ರೋಲ್ V6 ಎಂಜಿನ್ ಪಡೆದುಕೊಂಡಿದ್ದು, 450 ಏನ್‌ಎಂ ತಿರುಗುಬಲದಲ್ಲಿ 335 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ ಹಾಗು ಮತ್ತೊಂದು ಎಂಜಿನ್ 3-ಲೀಟರ್ ಆರು ಸಿಲಿಂಡರ್ ಡೀಸೆಲ್ 254 ಅಶ್ವಶಕ್ತಿ ಮತ್ತು 600 ಏನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

dqwad

ಮುಂದಿನ ಜನರೇಶನ್ ಡಿಸ್ಕವರಿ ಕಾರಿನ ಕಾರಿನ ಬೆಲೆ ರೂ. 1 ಕೋಟಿ ಆಸುಪಾಸಿನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್, ಮತ್ತು ವೋಲ್ವೋ XC90 ಕಾರುಗಳೊಂದಿಗೆ ಸ್ಪರ್ಧಿ ನೆಡೆಸಲಿದೆ.

Most Read Articles

Kannada
English summary
Jaguar Land Rover (JLR) is all set to launch the new-generation Land Rover Discovery in India on August 9, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X