ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

Written By:

ಈ ಹಿಂದಿನ ಮಾದರಿಗಿಂತ ಅತಿ ಹೆಚ್ಚಿನ ಮಟ್ಟದ ವಿನ್ಯಾಸ ಪಡೆದುಕೊಂಡಿರುವ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಡಿಜೈರ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ರಹಸ್ಯ ಚಿತ್ರಗಳು ಬಿಡುಗಡೆಗೊಂಡಿವೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ತನ್ನದೇ ಅಭಿಮಾನಿ ಬಳಗ ಹೊಂದಿರುವ ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಡಿಜೈರ್ ಕಾರಿನ ಮುಂದಿನ ಆವೃತಿಯ ಬಿಡುಗಡೆಗೊಳಿಸುವ ಮೊದಲೇ ರಹಸ್ಯ ಚಿತ್ರಗಳು ಸೋರಿಕೆಯಾಗಿ ಎಲ್ಲಡೆ ಸದ್ದು ಮಾಡುತ್ತಿವೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಮದ್ಯಮ ವರ್ಗದ ಅಚ್ಚು ಮೆಚ್ಚಿನ ಕಾರು ಎನ್ನಬಹುದಾದ ಸ್ವಿಫ್ಟ್ ಡಿಜೈರ್ ಕಾರಿನ ಈ ಚಿತ್ರಗಳು ಹಿಚ್ಚಿನ ಜನಕ್ಕೆ ಭಾವೋದ್ವೇಗ ಉಂಟು ಮಾಡಿರುವುದಂತೂ ಸತ್ಯ ಸಂಗತಿ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಸೋರಿಕೆಯಾದ ಚಿತ್ರಗಳಲ್ಲಿ ಗಮನಿಸಿದಂತೆ ಬಹಳಷ್ಟು ಬದಲಾವಣೆಗಳೊಂದಿಗೆ ಡಿಜೈರ್ ಕಾರು ಹೊಂದಿದ್ದು, ಜನತೆಯ ಡಾರ್ಲಿಂಗ್ ಆಗುವುದರಲ್ಲಿ ಅನುಮಾನವಿಲ್ಲ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಈ ಹೊಚ್ಚ ಹೊಸ ಕಾರು ಫೇಸ್‌ಲಿಫ್ಟ್ ಅಂಶಗಳನ್ನು ಹೊಂದಿದ್ದು, ನವೀನ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಹೊಸ ಗ್ರಿಲ್ ಪಡೆದುಕೊಂಡಿರುವ ಈ ಕಾರನ್ನು ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಈ ಹೊಸ ಸ್ವಿಫ್ಟ್ ಕಾರು ಸಾಕಷ್ಟು ಬದಲಾವಣೆಗೊಂಡಿದ್ದು, ಹಳೆಯ ಮಾದರಿಗಿಂತ ಹೆಚ್ಚು ತೂಕವನ್ನು ಪಡೆದುಕೊಂಡು ಬಲಿಷ್ಠತೆ ಕಾಯ್ದುಕೊಂಡಿದೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಹಿಂದಿನ ದೀಪಗಳು ಬೂಟ್ ಲಿಪ್ ಸ್ಪಾಯ್‌ಲರ್ ಮರುವಿನ್ಯಾಸದೊಂದಿಗೆ ನಿಮ್ಮ ಮುಂದೆ ಈ ಸ್ವಿಫ್ಟ್ ಡಿಜೈರ್ ಕಾರು ಬರುತ್ತಿದೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಸದ್ಯ ರಹಸ್ಯ ಚಿತ್ರಗಳೊಂದಿಗೆ ನಿಮ್ಮ ಮುಂದೆ ಬಂದಿರುವ ಈ ಕಾರು, ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತಿಯಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಪೆಟ್ರೋಲ್ ಕಾರು 83 ಅಶ್ವಶಕ್ತಿ ಮತ್ತು ಡೀಸೆಲ್ 74 ಅಶ್ವಶಕ್ತಿ ಪಡೆದುಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಇಷ್ಟೆಲ್ಲಾ ಬದಲಾವಣೆಗಳನ್ನು ಒಳಗೊಂಡಿರುವ ಈ ಕಾರು ಕಾಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಹಿಂದಿಕ್ಕಿ ತನ್ನ ಪ್ರಾಬಲ್ಯ ಸಾದಿಸುವುದಂತೂ ಖಂಡಿತ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಈ ಫೇಸ್‌ಲಿಫ್ಟ್ ಕಾರು ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಎರಡು ಮಾದರಿಗಳಲ್ಲಿ ಬಿಡುಗಡೆಗೊಳ್ಳಲಿದ್ದು, ನಿಮಗೆ ಬೇಕೆನ್ನಿಸಿದ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಮತ್ತೊಂದು ಹೊಸ ವಿಷಯವೇನೆಂದರೆ ಈ ಕಾರು ಎರಡು ರೀತಿಯ ಡ್ಯಾಶ್‌ಬೋರ್ಡ್ ಪಡೆದುಕೊಳ್ಳಲಿದ್ದು, ಫ್ಲಾಟ್ ಬಾಟಮ್ ಸ್ಟಿಯರಿಂಗ್ ವೀಲ್ ಪಡೆದುಕೊಂಡಿದೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಸ್ವಿಫ್ಟ್ ಕಾರಿನ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಗೊಳ್ಳುವ ಮುಂಚಿತವಾಗಿಯೇ ಈ ಡಿಜೈರ್ ಕಾರು ಅನಾವರಣಗೊಳಿಸಲು ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ತೀರ್ಮಾನಿಸಿದೆ ಎನ್ನಲಾಗಿದೆ.

ಸೋರಿಕೆಯಾದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ 2017 ಕಾರಿನ ರಹಸ್ಯ ಚಿತ್ರಗಳು

ಕಳೆದ ವಾರ ಬಿಡುಗಡೆಗೊಂಡಿರುವ ಟಾಟಾ ಕಂಪನಿಯ ಟಿಗೋರ್ ಕಾರಿನ ಪ್ರತಿಸ್ಪರ್ಧಿ ಸ್ವಿಫ್ಟ್ ಡಿಜೈರ್ ಫೇಸ್‌ಲಿಫ್ಟ್ ಕಾರನ್ನು ನೀವು ಸದ್ಯದರಲ್ಲಿಯೇ ನಿಮ್ಮ ಹತ್ತಿರದ ಷೋ ರೂಂಗಳಲ್ಲಿ ನೋಡಬಹುದು.

English summary
[read in kannada]The 2017 Maruti Suzuki Swift Dzire images of the new Dzire have appeared online. The pictures have brought about mixed emotions amongst fans, owing to the design.
Please Wait while comments are loading...

Latest Photos