ತನ್ನ ಮೊದಲ ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಲು ಸಜ್ಜುಗೊಂಡ ನಿಸ್ಸಾನ್

Written By:

ಜಪಾನ್ ಆಟೋ ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಆವೃತ್ತಿಯಾದ ಲೀಫ್ ನಿಸ್ಮೋ ಪರಿಕಲ್ಪನೆಯನ್ನು ಅನಾವರಣಗೊಳಿಸಲಿದ್ದು, ಮೊದಲ ನೋಟದಲ್ಲೇ ಕಾರ್ ರೇಸ್ ಪ್ರಿಯರ ಸೆಳೆಯುವ ವಿನ್ಯಾಸಗಳನ್ನು ಹೊಂದಿದೆ.

To Follow DriveSpark On Facebook, Click The Like Button
ತನ್ನ ಮೊದಲ ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಲು ಸಜ್ಜುಗೊಂಡ ನಿಸ್ಸಾನ್

ಸದ್ಯ ವಿಶ್ವಾದ್ಯಂತ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಎಲ್ಲಿಲ್ಲ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ನಿಸ್ಸಾನ್ ಸಂಸ್ಥೆಯು ಲೀಫ್ ನಿಸ್ಮೋ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಅ.25 ರಿಂದ ನಡೆಯಲಿರುವ ಟೊಕಿಯೋ ಆಟೋ ಮೇಳದಲ್ಲಿ ಪ್ರದರ್ಶನಗೊಳಿಸಲು ಮುಂದಾಗಿದೆ.

ತನ್ನ ಮೊದಲ ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಲು ಸಜ್ಜುಗೊಂಡ ನಿಸ್ಸಾನ್

ಇನ್ನು ನಿಸ್ಸಾನ್ ಬಿಡುಗಡೆಗೊಳಿಸಲು ಮುಂದಾಗಿರುವ ಲೀಫ್ ನಿಸ್ಮೋ ಎಲೆಕ್ಟ್ರಿಕ್ ಕಾರು ಮಾದರಿಯು ಹಾಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಹೊರ ಮತ್ತು ಒಳ ವಿನ್ಯಾಸಗಳಲ್ಲಿ ಗುರುತರ ಬದಲಾವಣೆಗಳನ್ನು ತರಲಾಗಿದೆ.

Recommended Video
Datsun rediGO Gold 1.0-Litre Launched In India - DriveSpark
ತನ್ನ ಮೊದಲ ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಲು ಸಜ್ಜುಗೊಂಡ ನಿಸ್ಸಾನ್

ಕಾರಿನ ಅಂಚುಗಳಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಫಿನಿಶಿಂಗ್ ನೀಡಲಾಗಿದ್ದು, ಸಾಂಪ್ರದಾಯಿಕ ಲೀಫ್ ಮಾದರಿ ವೈಶಿಷ್ಟ್ಯತೆಗಳ ಜೊತೆಗೆ ಏರೋ ಡೈನಾಮಿಕ್ ಪ್ಯಾಕೇಜ್ ಅಂಶಗಳನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ ಸೇರಿಸಲಾಗಿದೆ.

ತನ್ನ ಮೊದಲ ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಲು ಸಜ್ಜುಗೊಂಡ ನಿಸ್ಸಾನ್

ಹೀಗಾಗಿ ಉತ್ತಮ ಕಾರ್ಯಕ್ಷಮತೆಗೆ ಹೆಚ್ಚಿನ ಗಮನಹರಿಸಿರುವ ನಿಸ್ಸಾನ್ ಸಂಸ್ಥೆಯು ಒಂದು ಬಾರಿ ಚಾರ್ಜಿಂಗ್ ಮಾಡಿದಲ್ಲಿ 379 ಕಿ.ಮಿ ಮೈಲೇಜ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸುವ ಮೂಲಕ ವಿಶ್ವದರ್ಜೆಯ 40ಕೆವಿಹೆಚ್ ಬ್ಯಾಟರಿಯನ್ನು ಬಳಕೆ ಮಾಡಿದೆ.

ತನ್ನ ಮೊದಲ ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಲು ಸಜ್ಜುಗೊಂಡ ನಿಸ್ಸಾನ್

ಇದಷ್ಟೇ ಅಲ್ಲದೇ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯೋಗಗಳನ್ನು ಕೈಗೊಂಡಿರುವ ನಿಸ್ಸಾನ್ ಒಂದು ಬಾರಿ ಮಾಡಿದಲ್ಲಿ 550 ಕಿ.ಮಿ ಗಿಂತಲೂ ಹೆಚ್ಚಿನ ಮೈಲೇಜ್ ನೀಡಬಲ್ಲ ಬ್ಯಾಟರಿ ಉತ್ಪಾದನೆ ಬಗ್ಗೆಯೂ ಸುಳಿವು ನೀಡಿದೆ.

ತನ್ನ ಮೊದಲ ಎಲೆಕ್ಟ್ರಿಕ್ ಕಾರುನ್ನು ಅನಾವರಣಗೊಳಿಸಲು ಸಜ್ಜುಗೊಂಡ ನಿಸ್ಸಾನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2019ಕ್ಕೆ ತನ್ನ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಸಂಸ್ಥೆಯು ಸದ್ಯ ಟೊಕಿಯೊ ಆಟೋ ಮೇಳ ಹೊಸ ಮಾದರಿಯ ಕಾರನ್ನು ಪ್ರದರ್ಶನ ಮಾಡಲಿದ್ದು, ತದನಂತರ ಮತ್ತಷ್ಟು ಬದಲಾವಣೆಗೊಳಿಸಿ ಮಾರುಕಟ್ಟೆಗೆ ಪರಿಚಯಿಸಲಿದೆ.

English summary
Read in Kannada about Nissan Leaf Nismo Concept Revealed Ahead Of Tokyo Debut.
Story first published: Tuesday, October 3, 2017, 17:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark