ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

Written By:

ನಿಸ್ಸಾನ್ ಮೈಕ್ರಾ ಫ್ಯಾಶನ್ ಎಡಿಷನ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ನಿಸ್ಸಾನ್ ಮೈಕ್ರಾ ಫ್ಯಾಶನ್ ಆವೃತಿಯು ರೂ. 6.09 ಲಕ್ಷ ಎಕ್ಸ್ ಷೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

ಬ್ರ್ಯಾಂಡ್ ಯುನೈಟೆಡ್ ಬಣ್ಣಗಳ ಸ್ಫೂರ್ತಿ ಪಡೆದು ಸೀಮಿತ ಆವೃತ್ತಿಯ ನಿಸ್ಸಾನ್ ಮೈಕ್ರಾ ಫ್ಯಾಶನ್ ಕಾರನ್ನು ನಿಸ್ಸಾನ್ ಸಂಸ್ಥೆಯು ಬಿಡುಗಡೆಗೊಳಿಸಿದ್ದು, ಈ ಕಾರು ಫ್ಯಾಷನ್ ಬ್ಲಾಕ್ ಮತ್ತು ಫ್ಯಾಷನ್ ಆರೆಂಜ್ ಎಂಬ ಎರಡು ಬಣ್ಣದ ಆಯ್ಕೆಯನ್ನು ಲಭ್ಯವಿದೆ ಭಾರತದಲ್ಲಿ ಪರಿಚಯವಾಗಿದೆ.

ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

ಇತ್ತೀಚೆಗೆ ಸಂಸ್ಥೆಯು ಬಿಡುಗಡೆಗೊಸಿರುವ ನಿಸ್ಸಾನ್ ಕನೆಕ್ಟ್ ಕನೆಕ್ಟಿವಿಟಿ ಅಪ್ಲಿಕೇಶನ್ ಮತ್ತು ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ನಿಸ್ಸಾನ್ ಮೈಕ್ರಾ ಫ್ಯಾಶನ್ ಕಾರು ಬಿಡುಗಡೆಗೊಂಡಿದೆ.

ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

ಅಲ್ಲದೆ, ಮೊದಲ ಬಾರಿಗೆ ಮೈಕ್ರಾದ ಫ್ಯಾಶನ್ ಎಡಿಷನ್ ಕಾರಿನಲ್ಲಿ 6.2-ಇಂಚಿನ ಟಚ್‌ಸ್ಕ್ರೀನ್ ಆಡಿಯೋ ವಿಷನ್ ನ್ಯಾವಿಗೇಷನ್ ಸೌಲಭ್ಯಗಳನ್ನು ಅಳವಡಿಕೆ ಮಾಡಲಾಗಿದೆ.

ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

ನಿಸ್ಸಾನ್ ಮೈಕ್ರಾ ಫ್ಯಾಶನ್ ರೂಪಾಂತರದ ಕಾರು ಹೊರಭಾಗದಲ್ಲಿ ಮತ್ತು ಆಂತರಿಕವಾಗಿ ಹೆಚ್ಚು ಸ್ಟೈಲಿಶ್ ಆಗಿದ್ದು, ಕ್ರೀಡಾ ಮಾದರಿಯ ಕಪ್ಪು ಬಣ್ಣದ ಜೊತೆ ಕಿತ್ತಳೆ ಬಣ್ಣ ಮಿಶ್ರಣದೊಂದಿಗೆ ಈ ಕಾರನ್ನು ನೋಡಬಹುದಾಗಿದೆ.

ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

ಯಾಂತ್ರಿಕವಾಗಿ, ನಿಸ್ಸಾನ್ ಮೈಕ್ರಾ ಕಾರು ಎಕ್ಸ್ಎಲ್ ಸಿವಿಟಿ ಮಾದರಿಯನ್ನು ಆಧರಿಸಿ ಅನಾವರಣಗೊಂಡಿದ್ದು, ಈ ಕಾರು 1.2-ಲೀಟರ್ ಪೆಟ್ರೋಲ್ ಇಂಜಿನ್ ಪಡೆದು 104 ಎನ್ಎಂ ತಿರುಗುಬಲದಲ್ಲಿ 76 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದನೆ ಮಾಡಲಿದೆ ಹಾಗು ಈ ಕಾರಿನಲ್ಲಿ ಸಿ.ವಿ.ಟಿ ಸ್ವಯಂಚಾಲಿತ ಗೇರ್ ಬಾಕ್ಸ್ ಸಂಯೋಜನೆಯನ್ನು ನೋಡಬಹುದಾಗಿದೆ.

ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

ಒಳಭಾಗದಲ್ಲಿಯೂ ಸಹ ಕಿತ್ತಳೆ ಬಣ್ಣದ ಮಿಶ್ರಣವನ್ನು ನೀವು ನೋಡಬಹಾಗಿದ್ದು, ಕಿತ್ತಳೆ ಬಣ್ಣದ ಹೋಳಿಗೆಯನ್ನು ಪಡೆದ ಯುರೋಪಿಯನ್ ಕಪ್ಪು-ಬಣ್ಣದ ಸೀಟುಗಳು, ಡಿಸೈನರ್ ಸ್ಟೆಪ್ ಮ್ಯಾಟ್‌ಗಳು ನಿಮಗೆ ಮುದ ನೀಡಲಿವೆ.

ನಿಸ್ಸಾನ್ ಮೈಕ್ರಾ ಫ್ಯಾಷನ್ ಆವೃತ್ತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ. 6.09 ಲಕ್ಷ

ಎಆರ್‌ಎಐ ಪ್ರಕಾರ, ನಿಸ್ಸಾನ್ ಮೈಕಾ ಫ್ಯಾಷನ್ ಆವೃತ್ತಿಯ ಕಾರು ಲಿಟರಿಗೆ 19.34 ಕಿ.ಮೀ ಮೈಲೇಜ್ ನೀಡಲಿದ್ದು, ಕಂಪೆನಿಯು ನೀಡಿರುವ 5 ವರ್ಷಗಳ ವಿಸ್ತರಿತ ವಾರೆಂಟಿ ಪ್ಯಾಕೇಜ್ ಅನ್ನು ಗ್ರಾಹಕರು ಪಡೆಯಬಹುದಾಗಿದೆ.

English summary
Nissan Micra Fashion Edition launched in India. The new Nissan Micra Fashion Edition is priced at Rs 6.09 lakh ex-showroom (Delhi).
Story first published: Tuesday, September 12, 2017, 20:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark