ಬದಲಾದ ಆರ್ಥಿಕ ನೀತಿಗಳು- ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

Written By:

ದೇಶಿಯ ಮಾರುಕಟ್ಟೆಯಲ್ಲಿ ವಾಹನ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಾರಾಟ ಪ್ರಮಾಣ ಮಾತ್ರ ಇಳಿಮುಖ ಕಾಣುತ್ತಿದೆ. ಇದಕ್ಕೆ ಕಾರಣ ಸಷ್ಟೆಂಬರ್ ಅವಧಿಯಲ್ಲಿನ ವಾಹನ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದಲ್ಲಿ ಕಳೆದ ತಿಂಗಳು ತೀವ್ರ ಕುಸಿತ ಕಂಡಿದೆ.

To Follow DriveSpark On Facebook, Click The Like Button
ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

ಅಕ್ಟೋಬರ್ ಅವಧಿಯಲ್ಲಿನ ಪ್ರಮುಖ ಹಬ್ಬಗಳ ಸಮಯದಲ್ಲಿ ವಾಹನಗಳು ಹೆಚ್ಚು ಮಾರಾಟವಾಗಬಹುದೆಂಬ ವಾಹನ ತಯಾರಿಕಾ ಸಂಸ್ಥೆಗಳ ಲೆಕ್ಕಾಚಾರ ತಪ್ಪಾಗಿದ್ದು, ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ನಲ್ಲಿ ವಾಹನ ಮಾರಾಟ ಇಳಿಮುಖಗೊಂಡಿದೆ.

ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

ಆದ್ರೆ ಇದೇ ಅವಧಿಯಲ್ಲಿ ಕರ್ಮಷಿಯಲ್ ವೆಹಿಕಲ್ ಮತ್ತು ತ್ರಿಚಕ್ರ ವಾಹನಗಳ ಮಾರಾಟವು ಪ್ರಗತಿ ಕಂಡಿದ್ದು, ಅಕ್ಟೋಬರ್ ತಿಂಗಳಿನಲ್ಲಿ 1,84,666 ಕಾರುಗಳು ಮಾರಾಟ ಮಾಡಿರುವ ಬಗ್ಗೆ ಪ್ರಕಟನೆ ಹೊರ ಬಂದಿದೆ.

ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

ಇನ್ನು ಕಳೆದ ವರ್ಷದ ಅಕ್ಟೋಬರ್ ಅವಧಿಯಲ್ಲಿ 1,95,036 ಕಾರುಗಳು ಮಾರಾಟವಾಗಿದ್ದವು ಹೀಗಾಗಿ ಈ ಬಾರಿ ಕಾರ್ ಮಾರಾಟದಲ್ಲಿ ಶೇ. 5.32 ರಷ್ಟು ಕಡಿಮೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಸೊಸೈಟಿ (ಎಸ್ಐಎಎಂ) ಅಂಕಿ ಅಂಶ ಬಿಡುಗಡೆ ಮಾಡಿದೆ.

ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್‌ಗೆ ಮುನ್ನಡೆ

ಹೌದು. ಅಕ್ಟೋಬರ್ ಅವಧಿಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಯು ಹಿನ್ನೆಡೆ ಅನುಭವಿಸಿದ್ರೆ ಟಾಟಾ ಮೋಟಾರ್ಸ್‌ ಮಾತ್ರ 18,314 ವಾಹನಗಳನ್ನು ಮಾರಾಟ ಮಾಡಿ ಮಾರಾಟ ವಿಭಾಗದಲ್ಲಿ ಶೇ. 3.22 ಮುನ್ನಡೆ ದಾಖಲಿಸಿದೆ.

ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

ಹಾಗೆಯೇ ಮಾರುತಿ ಸುಜುಕಿಯು 1,35,413 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ಅವಧಿಗೆ ಹೋಲಿಸಿದ್ರೆ ಅಷ್ಟೇನು ಕಡಿಮೆಯಾಗಿಲ್ಲ. ಆದ್ರೆ ಹುಂಡೈ ಮೋಟಾರ್ ಇಂಡಿಯಾ ಮಾರಾಟ ಕೂಡ ಶೇ. 0.86 ರಷ್ಟು ಕುಸಿತ ಕಂಡಿದ್ದು, ಮಹೀಂದ್ರಾ ಮತ್ತು ಮಹೀಂದ್ರಾ ಶೇ.5.35 ಶೇಕಡ ಇಳಿಕೆ ದಾಖಲಿಸಿ 23,413 ವಾಹನಗಳನ್ನು ಮಾರಾಟ ಮಾಡಿದೆ.

ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

ಇದಕ್ಕೆ ಕಾರಣ ಕಾರುಗಳ ಮೇಲಿನ ಜಿಎಸ್‌ಟಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸೆಷ್ಟೆಂಬರ್ ತಿಂಗಳು ಕೊನೆಯಲ್ಲಿ ನಡೆದ ವಿದ್ಯಮಾನಗಳು ಮಾರಾಟ ಪ್ರಕ್ರಿಯೆ ಮೇಲೆ ಪ್ರತಿಕೂಲಕರ ಪರಿಣಾಮ ಬೀರಿದ್ದು,ಹೊಸ ವಾಹನಗಳ ಖರೀದಿಗೆ ಗ್ರಾಹಕರು ಹಿಂದೇಟು ಹಾಕಿರುವುದು ಸ್ಪಷ್ಟವಾಗುತ್ತದೆ.

ಅಕ್ಪೋಬರ್ ಅವಧಿಯಲ್ಲಿನ ವಾಹನಗಳ ಮಾರಾಟ ಪ್ರಮಾಣ ಇಳಿಮುಖ

ಒಟ್ಟಾರೆ ವಾಹನ ಮಾರಾಟ ವಹಿವಾಟು ಇಳಿಮುಖವಾಗಿದ್ದು ಅಕ್ಟೋಬರ್ 2016 ರ 22,01,489 ವಾಹನ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಶೇ. 1.79 ರಷ್ಟು ಕಡಿಮೆಯಾಗಿ 21,62,164 ವಾಹನಗಳು ಮಾರಾಟವಾಗಿದೆ.ಇದರಿಂದ ಹಬ್ಬದ ಅವಧಿಯಲ್ಲಿ ಭರ್ಜರಿ ಕಾರು ಮಾರಾಟ ಮಾಡಬೇಕಿದ್ದ ಪ್ರಮುಖ ಸಂಸ್ಥೆಗಳ ಲೆಕ್ಕಾಚಾರ ತಲೆಕೆಳಗಾಗಿದೆ.

Trending on DriveSpark Kannada:

ನಂಬಿದರೆ ನಂಬಿ ಬಿಟ್ಟರೆ ಬಿಡಿ... 10ನೇ ತರಗತಿ ಹುಡುಗ ಕಂಡು ಹಿಡಿದ ಈ ಬೈಕ್ ನೀರಿನಿಂದ ಚಲಿಸುತ್ತೆ !!

ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಬಳಿಕ 'ಇಂದಿರಾ ಸಾರಿಗೆ' ಭಾಗ್ಯ..!!

English summary
Read in Kannada about Passenger vehicle sales decline in October.
Story first published: Saturday, November 11, 2017, 17:27 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark