ದಯವಿಟ್ಟು ಗಮನಿಸಿ: ಅ.13ರಂದು ಪೆಟ್ರೋಲ್‌, ಡೀಸೆಲ್‌ ಸಿಗೋಲ್ಲ

Written By:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ತಿಂಗಳು 13ರಂದು ಪೆಟ್ರೋಲಿಯಂ ಡೀಲರ್‌ಗಳು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಈ ಹಿನ್ನೆಲೆ ತೈಲ ಕಂಪನಿಗಳು ಮತ್ತು ಡೀಲರ್‌ಗಳ ಮಧ್ಯೆ ಜಟಾಪಟಿ ಶುರುವಾಗಿದೆ.

 ದಯವಿಟ್ಟು ಗಮನಿಸಿ: ಅ.13ರಂದು ಪೆಟ್ರೋಲ್‌, ಡೀಸೆಲ್‌ ಸಿಗೋಲ್ಲ

ನಮ್ಮ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸದೇ ಹೋದಲ್ಲಿ ಮುಷ್ಕರ ತೀವ್ರಗೊಳಿಸುವ ಎಚ್ಚರಿಕೆ ನೀಡಿರುವ ಡೀಲರ್‌ಗಳ ಸಂಘಟನೆಯಾದ ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌, "13ರಂದು ದೇಶಾದ್ಯಂತ ತೈಲ ಕಂಪನಿ ಡೀಲರ್‌ಗಳ ಮುಷ್ಕರಕ್ಕೆ ಕರೆ ನೀಡಿದ್ದೇವೆ. ಉತ್ತಮ ಮಾರ್ಜಿನ್‌ ನೀಡಬೇಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನೂ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದೇವೆ" ಎಂದಿದ್ದಾರೆ.

 ದಯವಿಟ್ಟು ಗಮನಿಸಿ: ಅ.13ರಂದು ಪೆಟ್ರೋಲ್‌, ಡೀಸೆಲ್‌ ಸಿಗೋಲ್ಲ

ಹೀಗಾಗಿ ಬೇಡಿಕೆಗಳನ್ನು ಸೂಕ್ತ ಪೂರೈಸದಿದ್ದರೆ ಅಕ್ಟೋಬರ್‌ 27ರಿಂದ ಅನಿರ್ದಿಷ್ಟಾವಧಿವರೆಗೆ ತೈಲ ಖರೀದಿ ಮತ್ತು ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತದೆ' ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌ ಎಚ್ಚರಿಕೆ ನೀಡಿದೆ.

Recommended Video - Watch Now!
Datsun rediGO Gold 1.0-Litre Launched In India - DriveSpark
 ದಯವಿಟ್ಟು ಗಮನಿಸಿ: ಅ.13ರಂದು ಪೆಟ್ರೋಲ್‌, ಡೀಸೆಲ್‌ ಸಿಗೋಲ್ಲ

ಇನ್ನು ಯುನೈಟೆಡ್‌ ಪೆಟ್ರೋಲಿಯಂ ಫ್ರಂಟ್‌ ಅಡಿಯಲ್ಲಿ ಒಟ್ಟು 54,000 ಡೀಲರುಗಳಿದ್ದು, ಇವರೆಲ್ಲರೂ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಇದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆಗಳಾಗುವ ಸಾಧ್ಯತೆಗಳಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಕೂಡಾ ಸ್ಥಗಿತಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

 ದಯವಿಟ್ಟು ಗಮನಿಸಿ: ಅ.13ರಂದು ಪೆಟ್ರೋಲ್‌, ಡೀಸೆಲ್‌ ಸಿಗೋಲ್ಲ

ಈ ನಡುವೆ ಕಳೆದ ವರ್ಷ ನವೆಂಬರ್‌ನಲ್ಲೇ ಹಲವು ಬೇಡಿಕೆಯನ್ನು ಮುಂದಿಡಲಾಗಿತ್ತಾದರೂ ತೈಲ ಕಂಪನಿಗಳು ಇದನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿರುವ ಡೀಲರ್‌ಗಳು, ಸಮಸ್ಯೆಗಳ ಸುಳಿಯಲ್ಲಿರುವ ಪೆಟ್ರೋಲ್ ಬಂಕ್ ನಿರ್ವಹಣಾ ವೆಚ್ಚದ ಕುರಿತು ಅಳಲು ವ್ಯಕ್ತಪಡಿಸುತ್ತಿದ್ದಾರೆ.

 ದಯವಿಟ್ಟು ಗಮನಿಸಿ: ಅ.13ರಂದು ಪೆಟ್ರೋಲ್‌, ಡೀಸೆಲ್‌ ಸಿಗೋಲ್ಲ

ವಾಸ್ತವವಾಗಿ ನೋಡುವುದಾರರೇ ಪೆಟ್ರೋಲ್ ಬೆಲೆ ಹೆಚ್ಚಳ ಇದ್ದರು ನಷ್ಟದಲ್ಲಿರುವ ಡೀಲರ್‌ಗಳು, ಪ್ರತಿ ತಿಂಗಳಿಗೆ ಡೀಲರ್‌ ಮಾರ್ಜಿನ್‌ ಹೆಚ್ಚಳ, ಹೂಡಿಕೆಗೆ ಸೂಕ್ತ ಲಾಭ, ಮಾನವ ಸಂಪನ್ಮೂಲ ಸಮಸ್ಯೆಗಳ ಪರಿಹಾರ, ನಷ್ಟ ನಿರ್ವಹಣೆ ಅಧ್ಯಯನ ಹಾಗೂ ಸಾರಿಗೆ ಮತ್ತು ಎಥೆನಾಲ್‌ ಮಿಶ್ರಣಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಆಗ್ರಹಿಸುತ್ತಿದ್ದಾರೆ.

 ದಯವಿಟ್ಟು ಗಮನಿಸಿ: ಅ.13ರಂದು ಪೆಟ್ರೋಲ್‌, ಡೀಸೆಲ್‌ ಸಿಗೋಲ್ಲ

ಇದಕ್ಕಾಗಿಯೇ ಅ.13ರಂದು ದೇಶವ್ಯಾಪಿ ಮುಷ್ಕರ ಆರಂಭಿಸುತ್ತಿರುವ ಡೀಲರ್‌ಗಳು, ಕೂಡಲೇ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ತೈಲ ಕಂಪನಿಗಳ ಜೊತೆ ಈಗಾಗಲೇ ಮಾತುಕತೆ ಕೂಡಾ ನಡೆಸಿದ್ದಾರೆ. ಆದ್ರೆ ಮಾತುಕತೆ ವಿಫಲವಾದಲ್ಲಿ ಅನಿರ್ದಿಷ್ಟಾವಧಿವರೆಗೆ ತೈಲ ಖರೀದಿ ಮತ್ತು ಮಾರಾಟದ ಮೇಲೂ ಪರಿಣಾಮ ಬೀರುವುದು ಮಾತ್ರ ಗ್ಯಾರಂಟಿ.

English summary
Read in Kannada: Petrol and Diesel are not available on 13th.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark