ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

Written By:

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ವಾಣಿಜ್ಯ ಚಟುವಟಿಕೆ ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ಇದೀಗ ಫ್ರೆಂಚ್ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಪ್ಯೂಜೊ ಕೂಡಾ ದೇಶಿಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದೆ.

To Follow DriveSpark On Facebook, Click The Like Button
ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

ಈ ಹಿಂದೆ ಅತ್ಯುತ್ತಮ ಮಾದರಿಯ ಮೋಟಾರ್ ಸೈಕಲ್ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದ್ದ ಪ್ಯೂಜೊ ಸಂಸ್ಥೆಯು ಇದೀಗ ತನ್ನ ಪ್ರಮುಖ ಕಾರು ಮಾದರಿಗಳನ್ನು ಕೂಡಾ ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ಉತ್ಸುಕವಾಗಿದೆ.

Recommended Video
Tata Nexon Price And Features Variant-wise - DriveSpark
ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

2020ರ ವೇಳೆಗೆ ಪ್ಯೂಜೊ ಉತ್ಪಾದಿತ ಮೋಟಾರ್ ಸೈಕಲ್‌ಗಳು ಹಾಗೂ ಮಧ್ಯಮ ಗಾತ್ರ ಪ್ರಿಮಿಯಂ ಎಸ್‌ಯುವಿ ಕಾರು ಆವೃತ್ತಿಗಳು ಖರೀದಿಗೆ ಲಭ್ಯವಾಗಲಿದ್ದು, ಇದಕ್ಕಾಗಿಯೇ ದೇಶಿಯ ಮಾರುಕಟ್ಟೆಯಲ್ಲಿನ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳ ಜೊತೆ ಜಂಟಿಯಾಗಿ ಕಾರ್ಯಚರಣೆ ನಡೆಸಲು ಯೋಜನೆ ರೂಪಿಸುತ್ತಿದೆ.

ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

ಈಗಾಗಲೇ ತನ್ನ ಮೋಟಾರ್ ಉತ್ಪನ್ನಗಳು ಮಾರಾಟ ಮಾಡಲು ಉದ್ದೇಶದಿಂದ 2014ರಲ್ಲೇ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಜೊತೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿಕೊಂಡಿರುವ ಪ್ಯೂಜೊ ಸಂಸ್ಥೆಯು, ದೇಶಿಯ ಮಾರುಕಟ್ಟೆಯಲ್ಲಿ ಮೋಟಾರ್ ಸೈಕಲ್‍ಗಳನ್ನು ಮಹೀಂದ್ರಾ ನೆರವು ಪಡೆಯಲಿದೆ.

ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

ಹಾಗೆಯೇ ಕಾರು ಮಾರಾಟ ವಿಭಾಗದಲ್ಲಿ ಹಿಂದೂಸ್ತಾನ್ ಮೋಟಾರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಂಗಸಂಸ್ಥೆಯಾದ ಸಿಕೆ ಬಿರ್ಲಾ ಗ್ರೂಪ್ ಜೊತೆ ಕೈ ಜೋಡಿಸಿರುವ ಪ್ಯೂಜೊ, ಮಧ್ಯಮ ಗಾತ್ರ ಪ್ರಿಮಿಯಂ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

ಇನ್ನು ಪ್ಯೂಜೊ ಉತ್ಪನ್ನಗಳ ಬಗೆಗೆ ಹೇಳುವುದಾರರೇ ಈಗಾಗಲೇ ಅಂತರ್‌ರಾಷ್ಟ್ರಿಯ ಮನ್ನಣೆ ಪಡೆದಿರುವ ಪ್ಯೂಜೊ, ಯರೋಪ ಮಾರುಕಟ್ಟೆಯಲ್ಲಿ 111 ವರ್ಷಗಳ ಇತಿಹಾಸದೊಂದಿಗೆ 120 ಬಿಲಿಯನ್ ಯುರೋ ಮೌಲ್ಯದೊಂದಿಗೆ ಭಾರೀ ಜನಪ್ರಿಯತೆ ಗಳಿಸಿಕೊಂಡಿರುವುದು ಉತ್ತಮ ಕಾರ್ಯಕ್ಷಮತೆಯ ಕೈಗನ್ನಡಿಯಾಗಿದೆ.

ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಪ್ರಿಮಿಯಂ ಎಸ್‌ಯುವಿ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಈ ಹಿನ್ನೆಲೆ ಪ್ಯೂಜೊ ತನ್ನ ಬಹುನೀರಿಕ್ಷಿತ 3008 ಮಾದರಿಯನ್ನು ಮೊದಲ ಹಂತದ ಕಾರು ಮಾದರಿಯನ್ನಾಗಿ ಬಿಡುಗಡೆಗೊಳಿಸಲು ಮುಂದಾಗಿದೆ.

ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

ಪ್ಯೂಜೊ 3008 ಎಸ್‌ಯುವಿ ಕೂಡಾ ವಿಶ್ವದರ್ಜೆ ಬಿಡಿಭಾಗಗಳಿಂದ ನಿರ್ಮಾಣವಾಗಿದ್ದು, 1.2-ಲೀಟರ್ ಪೆಟ್ರೋಲ್ ಹಾಗೂ 1.6-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, ಆರು ಏರ್‌ಬ್ಯಾಗ್, ಪನೋರಮಿಕ್ ಸನ್‌ರೂಫ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಭಾರತೀಯ ಮಾರುಕಟ್ಟೆಯ ಪ್ರವೇಶವನ್ನು ಖಚಿತಗೊಳಿಸಿದ ಪ್ಯೂಜೊ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಯುರೋಪ್ ಆಟೋ ಉದ್ಯಮದಲ್ಲಿ ಈಗಾಗಲೇ ಅತ್ಯುತ್ತಮ ಉತ್ಪನ್ನಗಳ ಮೂಲಕ ಭಾರೀ ಜನಪ್ರಿಯತೆ ಗಳಿಸಿರುವ ಪ್ಯೂಜೊ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಯತ್ತ ಮುಖ ಮಾಡಿದ್ದು, ಹ್ಯುಂಡೈ ಕ್ರೇಟಾ ಹಾಗೂ ರೆನಾಲ್ಟ್ ಡಸ್ಟರ್‌ಗೆ ತೀವ್ರ ಪ್ರತಿಸ್ಪರ್ಧೆ ನೀಡುವ ತವಕದಲ್ಲಿದೆ.

English summary
Read in Kannada about Peugeot 3008 To Rival Hyundai Creta And Renault Duster In India.
Story first published: Tuesday, October 3, 2017, 12:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark