2019ರಲ್ಲಿ 'ಫಾರ್ಮುಲಾ ಇ' ಪ್ರವೇಶವನ್ನು ಖಾತ್ರಿಪಡಿಸಿದ ಪೋರ್ಷೆ
2019ರ ನಂತರ ಫಾರ್ಮುಲಾ ಇ ರೇಸಿಂಗ್ ಆವೃತಿಗೆ ಪ್ರವೇಶ ಮಾಡುವುದಾಗಿ ಹೇಳುವ ಮೂಲಕ ತನ್ನ ಫಾರ್ಮುಲಾ ಇ ರೇಸಿಂಗ್ ಅಧಿಕೃತ ಪ್ರವೇಶವನ್ನು ಪೋರ್ಷೆ ಖಾತ್ರಿಪಡಿಸಿದೆ.
2019ರ ನಂತರ ಫಾರ್ಮುಲಾ ಇ ರೇಸಿಂಗ್ ಆವೃತಿಗೆ ಪ್ರವೇಶ ಮಾಡುವುದಾಗಿ ಹೇಳುವ ಮೂಲಕ ತನ್ನ ಫಾರ್ಮುಲಾ ಇ ರೇಸಿಂಗ್ ಅಧಿಕೃತ ಪ್ರವೇಶವನ್ನು ಪೋರ್ಷೆ ಖಾತ್ರಿಪಡಿಸಿದೆ.

ಈಗಾಗಲೇ ಕಾರು ತಯಾರಿಕೆ ಮತ್ತು ಮಾರಾಟ ವಿಭಾಗದಲ್ಲಿ ಪ್ರಪಂಚದಾದ್ಯಂತ ಹೆಚ್ಚು ಸದ್ದು ಮಾಡಿರುವ ಪೋರ್ಷೆ ಕಂಪನಿಯು ಫಾರ್ಮುಲಾ ಇ ರೇಸಿಂಗ್ ವಿಭಾಗದಲ್ಲಿಯೂ ತನ್ನ ಸಾಮರ್ಥ್ಯ ತೋರಿಸಲು ಮುಂದಾಗಿದೆ. ಹೌದು, ಫಾರ್ಮುಲಾ ಇ ರೇಸಿಂಗ್ ಪಂದ್ಯಗಳಲ್ಲಿ ಸ್ಪರ್ಧಿಸುವುದಾಗಿ ಪೋರ್ಷೆ ಹೇಳಿಕೊಂಡಿದೆ.

ಇದೇ ಋತುವಿನ ಕೊನೆಯಲ್ಲಿ 'ಲೆ ಮ್ಯಾನ್ಸ್' ಸ್ಪೋರ್ಟ್ಸ್‌ಕಾರ್ ರೇಸಿಂಗ್ ಆವೃತ್ತಿಯ ಉನ್ನತ ವಿಭಾಗವನ್ನು ತೊರೆಯುವುದಾಗಿಯೂ ಘೋಷಣೆ ಮಾಡಿದೆ.

ಫಾರ್ಮುಲಾ ಇ ಪ್ರವೇಶಿಸುವುದು ಮತ್ತು ಈ ವಿಭಾಗದಲ್ಲಿ ಯಶಸ್ಸನ್ನು ಸಾಧಿಸುವುದು ನಮ್ಮ ಸದ್ಯದ ಗುರಿ" ಎಂದು ಕಂಪನಿಯ ಅಭಿವೃದ್ಧಿ ಮುಖ್ಯ ಅಧಿಕಾರಿ ಮೈಕೆಲ್ ಸ್ಟೈನರ್ ಹೇಳಿಕೆ ನೀಡಿದ್ದಾರೆ.

ಪೋರ್ಷೆ ಕಂಪನಿ ಕ್ರೀಡಾ ವಿಭಾಗದ ಕಡೆ ಹೆಚ್ಚು ಒಲವು ಹೊಂದಿದ್ದು, ಈ ಯೋಜನೆಯು ತನ್ನ 2025ರ ಒಳಗಾಗಿ ತಲುಪಬಹುದಾದ ಗುರಿಗಳಲ್ಲಿ ಒಂದಾಗಿದೆ ಎಂದು ಕಂಪನಿ ತಿಳಿಸಿದೆ. ಶುದ್ಧ ಮತ್ತು ಸಂಪೂರ್ಣವಾಗಿ ವಿದ್ಯುತ್ ವಾಹನ ಮತ್ತು ಕ್ರೀಡಾ ಕಾರುಗಳ ತಯಾರಿಕೆ ಕೂಡ ಈ ಗುರಿಗಳಲ್ಲಿ ಒಂದಾಗಿದೆ.

ಪೋರ್ಷೆ ಕಾರ್ಖಾನೆ ತಂಡ ಕಳೆದ ಮೂರು ವರ್ಷಗಳಿಂದ 'ಲೆ ಮ್ಯಾನ್ಸ್' ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ದಿಸುತ್ತಿದ್ದು, 2015 ಮತ್ತು 2016ರಲ್ಲಿ ವರ್ಲ್ಡ್ ಇಂಡ್ಯೂರೆನ್ಸ್ ಚಾಂಪಿಯನ್‌ಶಿಪ್(WEC) ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಈಗಾಗಲೇ ತನ್ನ ಫಾರ್ಮುಲಾ ಇ ರೇಸಿಂಗ್ ಕಾರನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿರುವ ಪೋರ್ಷೆ, ಸರಿಯಾದ ಸಮಯದಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಮುಂದಾಗಿದ್ದು, ಪ್ರಪಂಚದ ಗಮನ ಸೆಳೆಯುವಲ್ಲಿ ಸಫಲವಾಗಲಿದೆ.


Click it and Unblock the Notifications








