ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚಳ

ವಾರ್ಷಿಕ ಬೆಲೆ ಪರಿಷ್ಕರಣೆಯ ಭಾಗವಾಗಿ ಮುಂದಿನ ವರ್ಷದ ಜನವರಿ 1ರಿಂದ ಅದರ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತದೆ ಎಂದು ರೆನಾಲ್ಟ್ ಇಂಡಿಯಾ ಘೋಷಿಸಿದೆ.

By Girish

ವಾರ್ಷಿಕ ಬೆಲೆ ಪರಿಷ್ಕರಣೆಯ ಭಾಗವಾಗಿ ಮುಂದಿನ ವರ್ಷದ ಜನವರಿ 1ರಿಂದ ಅದರ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತದೆ ಎಂದು ರೆನಾಲ್ಟ್ ಇಂಡಿಯಾ ಘೋಷಿಸಿದೆ.

ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚ

2018ರಿಂದ ಹೆಚ್ಚುತ್ತಿರುವ ಇನ್‌ಪುಟ್ ಮತ್ತು ಸರಕು ವೆಚ್ಚದ ಕಾರಣದಿಂದಾಗಿ ತನ್ನ ಕಾರುಗಳ ಬೆಲೆಗಳನ್ನು ಶೇಕಡಾ ಮೂರು ಪರ್ಸೆಂಟ್‌ನಷ್ಟು ಹೆಚ್ಚಿಸಲು ರೆನಾಲ್ಟ್ ಸಂಸ್ಥೆ ನಿರ್ಧರಿಸಿದೆ. ಈ ಬೆಲೆ ಏರಿಕೆಯ ಬಿಸಿ ಕ್ವಿಡ್, ಡಸ್ಟರ್, ಲಾಡ್ಜಿ ಹಾಗು ಮುಂತಾದ ರೆನಾಲ್ಟ್ ಮಾದರಿಗಳಿಗೆ ಅನ್ವಯಿಸುತ್ತದೆ.

ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚ

ಆದರೆ, ಇತ್ತೀಚಿಗೆ ಬಿಡುಗಡೆಯಾದ ಕ್ಯಾಪ್ಟರ್ ಕಾರು ಹೆಚ್ಚು ಸದ್ದು ಮಾಡುತ್ತಿದ್ದು, ಈ ಕಾರಿಗೆ ಸದ್ಯ ಬೆಲೆಯೇರಿಕೆಯಿಂದ ವಿನಾಯಿತಿ ನೀಡಲಾಗಿದೆ ಮತ್ತು ಸದ್ಯ ಮಾರಾಟವಾಗುತ್ತಿರುವ ಬೆಲೆಗೆ ಮುಂದೆಯೂ ಮಾರಾಟವಾಗಲಿದೆ.

ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚ

"ಬೆಲೆ ಹೆಚ್ಚಳವು ಕ್ವಿಡ್, ಡಸ್ಟರ್ ಮತ್ತು ಲಾಡ್ಜಿ ಕಾರುಗಳಿಗೆ ಮಾತ್ರ ಅನ್ವಯವಾಗುತ್ತದೆ. ಕಾರಿಗೆ ಬಳಸಲಾಗುವ ಕಚ್ಚಾ ವಸ್ತು ಮತ್ತು ಇತರ ಕಾರಣಗಳಿಂದಾಗಿ ನಮ್ಮ ಕಾರುಗಳ ಬೆಲೆಗಳನ್ನು ಶೇಕಡಾ 3ರಷ್ಟು ಹೆಚ್ಚಿಸುತ್ತೇವೆ" ಎಂದು ರೆನಾಲ್ಟ್ ಸಂಸ್ಥೆ ಹೇಳಿದೆ.

ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚ

ಕ್ವಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುವ ಉತ್ಪನ್ನವಾಗಿದೆ ಮತ್ತು ಈ ಕಾರಿನ ಫೇಸ್‌ಲಿಫ್ಟ್ ಆವೃತಿಯು ಮುಂದಿನ ವರ್ಷ ಬಿಡುಗಡೆಯಾಗುವ ಸಂಭವವಿದೆ. ಇನ್ನು, ಡಸ್ಟರ್ ಕಾರೂ ಸಹ ಹೊಸ ಅವತಾರದಲ್ಲಿ ಭಾರತಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ.

ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚ

ಪ್ರಸ್ತುತ, ಭಾರತದಲ್ಲಿ ರೆನಾಲ್ಟ್ ಕಂಪನಿಯ ಕ್ವಿಡ್ ಅಗ್ರ ಸ್ಥಾನದಲ್ಲಿದ್ದು, ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ನಿರೀಕ್ಷಿಸುತ್ತದೆ ಹಾಗು ಕಂಪನಿಗಳು ಡಿಸೆಂಬರ್‌ನಲ್ಲಿ ತಮ್ಮ ಸ್ಟಾರ್ಕ್ ಕ್ಲಿಯರ್ ಮಾಡುವ ಸಲುವಾಗಿ ಬೆಲೆ ಹೆಚ್ಚಿಸುವ ತಂತ್ರಗಳನ್ನು ಉಪಯೋಗಿಸುತ್ತವೆ.

ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚ

ರಿನಾಲ್ಟ್ ಹೊರತುಪಡಿಸಿ, ಮಹೀಂದ್ರಾ, ಸ್ಕೋಡಾ, ಫೋರ್ಡ್, ವೋಕ್ಸ್‌ವ್ಯಾಗನ್, ಟಾಟಾ ಮೋಟರ್ಸ್, ಇಸುಸು ಮತ್ತು ಟೊಯೋಟಾದಂತಹ ಪ್ರಮುಖ ಕಾರು ತಯಾರಕರು ಜನವರಿ 1ರಿಂದ ದರ ಹೆಚ್ಚಳ ಮಾಡುವುದಾಗಿ ಘೋಷಿಸಿವೆ.

ಜನವರಿಯಿಂದ ರೆನಾಲ್ಟ್ ಇಂಡಿಯಾ ಕಾರುಗಳ ಬೆಲೆ ಹೆಚ್ಚ

ಜನವರಿ 1ರಿಂದ ಭಾರತದಲ್ಲಿ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ರೆನಾಲ್ಟ್ ಕಂಪನಿ ನಿರ್ಧರಿಸಿದೆ ಹಾಗು ಬೆಲೆ ಹೆಚ್ಚಿಗೆಯ ನಂತರ ಕ್ವಿಡ್ ಕಾರು ಹೇಗೆ ಮಾರಾಟವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Renault India To Hike Prices From January 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X