ಭಾರತದಲ್ಲಿ ಹಲವಾರು ಕಾರುಗಳನ್ನು ಸ್ಥಗಿತಗೊಳಿಸಲಿದೆ ರೆನಾಲ್ಟ್ !!

Written By:

ಪ್ರತಿಷ್ಠಿತ ಕಾರು ತಾಯಾರಕ ಸಂಸ್ಥೆಯಾದ ರೆನಾಲ್ಟ್ ಭಾರತದಲ್ಲಿ ಸದ್ಯ ಮಾರಾಟ ಮಾಡುತ್ತಿರುವ ಹಲವಾರು ಕಾರುಗಳ ಮಾರಾಟವನ್ನು ನಿಲ್ಲಿಸಲು ಯೋಜನೆ ರೂಪಿಸಿದ್ದು, ಈ ವಿಚಾರವಾಗಿ ಈಗಾಗಲೇ ಕ್ರಮ ಕೈಗೊಂಡಿದೆ.

ಭಾರತದಲ್ಲಿ ಹಲವಾರು ಕಾರುಗಳನ್ನು ಸ್ಥಗಿತಗೊಳಿಸಲಿದೆ ರೆನಾಲ್ಟ್ !!

ಈ ಫ್ರೆಂಚ್ ಮೂಲದ ರೆನಾಲ್ಟ್ ಸಂಸ್ಥೆಯು ಹೊಸ ವಾಹನಗಳನ್ನು ಪ್ರಾರಂಭಿಸುತ್ತಿದ್ದು, ಭಾರತದಲ್ಲಿ ಹಲವಾರು ಕಾರುಗಳನ್ನು ನಿಧಾನವಾಗಿ ಸ್ಥಗಿತಗೊಳಿಸಲಿದೆ. ಇತ್ತೀಚೆಗೆ, ತನ್ನ ಪ್ರೀಮಿಯಂ ಎಸ್‌ಯುವಿ ವಿಭಾಗವನ್ನು ಪರಿಪೂರ್ಣಗೊಳಿಸುವ ಸಲುವಾಗಿ ಭಾರತದಲ್ಲಿ ಕ್ಯಾಪ್ಟರ್ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು.

ಭಾರತದಲ್ಲಿ ಹಲವಾರು ಕಾರುಗಳನ್ನು ಸ್ಥಗಿತಗೊಳಿಸಲಿದೆ ರೆನಾಲ್ಟ್ !!

ರೆನಾಲ್ಟ್ ಪಲ್ಸ್ ಹ್ಯಾಚ್ಬ್ಯಾಕ್, ಸ್ಕಲಾ, ಮತ್ತು ಫ್ಲೂಯೆನ್ಸ್ ಸೆಡಾನ್‌ಗಳು ಮತ್ತು ಕೋಲಿಯೊಸ್ ಎಸ್‌ಯುವಿಗಳನ್ನು ಭಾರತದಲ್ಲಿ ಸ್ಥಗಿತಗೊಳಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದ್ದು, ಅಧಿಕೃತ ಮಾಹಿತಿ ಹೊರ ಬರಬೇಕಿದೆ.

ಭಾರತದಲ್ಲಿ ಹಲವಾರು ಕಾರುಗಳನ್ನು ಸ್ಥಗಿತಗೊಳಿಸಲಿದೆ ರೆನಾಲ್ಟ್ !!

ರೆನಾಲ್ಟ್ ಇಂಡಿಯಾ ಭಾರತದಲ್ಲಿ ಈಗಾಗಲೇ ಕ್ವಿಡ್, ಲಾಡ್ಜಿ, ಡಸ್ಟರ್ ಮತ್ತು ಮುಂಬರುವ ಕ್ಯಾಪ್ಟರ್ ಸೇರಿದಂತೆ ನಾಲ್ಕು ಮಾದರಿಗಳನ್ನು ಹೊಂದಿದ್ದು, ಈ ಕಾರುಗಳು ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿವೆ.

ಭಾರತದಲ್ಲಿ ಹಲವಾರು ಕಾರುಗಳನ್ನು ಸ್ಥಗಿತಗೊಳಿಸಲಿದೆ ರೆನಾಲ್ಟ್ !!

"ನಾವು ಆರು ವರ್ಷಗಳ ಹಿಂದೆಯೇ ಭಾರತದಲ್ಲಿ ರೆನಾಲ್ಟ್ ಕಾರ್ಯಾಚರಣೆಯನ್ನು ಆರಂಭಿಸಿದ್ದು ಮತ್ತು ಈಗ ಮೂರು ಕಾರುಗಳಾದ ಕ್ವಿಡ್, ಡಸ್ಟರ್, ಮತ್ತು ಲಾಡ್ಜಿ ಕಾರುಗಳ ಮೇಲೆ ಬಂಡವಾಳವನ್ನು ಹೂಡಿದ್ದೇವೆ ಹಾಗು ನಾವು ಪ್ರತಿ ವರ್ಷವೂ ಒಂದು ಕಾರನ್ನು ಪ್ರಾರಂಭಿಸುವ ಮೂಲಕ ನಮ್ಮ ಬಂಡವಾಳವನ್ನು ವಿಸ್ತರಿಸಲು ಬಯಸುತ್ತೇವೆ" ಎಂದು ರೆನಾಲ್ಟ್ ಇಂಡಿಯಾದ ಎಂಡಿ ಮತ್ತು ಸಿಇಒ ಸುಮಿತ್ ಸಾಹ್ನಿ ಹೇಳಿದರು.

ಭಾರತದಲ್ಲಿ ಹಲವಾರು ಕಾರುಗಳನ್ನು ಸ್ಥಗಿತಗೊಳಿಸಲಿದೆ ರೆನಾಲ್ಟ್ !!

ದುರ್ಬಲ ಮಾರಾಟದ ಕಾರಣದಿಂದಾಗಿ ಭಾರತದಲ್ಲಿ ಈ ವಾಹನಗಳನ್ನು ರೆನಾಲ್ಟ್ ಸ್ಥಗಿತಗೊಳಿಸಿದೆ ಮತ್ತು ಭಾರತದಲ್ಲಿ ತನ್ನ ಕಾರು ಸರಣಿಯನ್ನು ಟ್ರಿಮ್ ಮಾಡಲು ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಮುಂದಿಟ್ಟಿದೆ.

ಭಾರತದಲ್ಲಿ ಹಲವಾರು ಕಾರುಗಳನ್ನು ಸ್ಥಗಿತಗೊಳಿಸಲಿದೆ ರೆನಾಲ್ಟ್ !!

ರೆನಾಲ್ಟ್ ಇಂಡಿಯಾ ಸಂಸ್ಥೆಯು ದೇಶದಲ್ಲಿ ದೊಡ್ಡ ಮಟ್ಟದ ಯೋಜನೆಗಳನ್ನು ಹೊಂದಿದೆ ಮತ್ತು ಪ್ರತಿ ವರ್ಷವೂ ಒಂದು ಕಾರು ಪ್ರಾರಂಭಿಸಲು ಮೀಸಲಿಡಿದೆ. 2017ರಲ್ಲಿ ಕಾಪ್ಟರ್ ಕಾರನ್ನು ಬಿಡುಗಡೆಗೊಳಿಸಲು ಯೋಜಿಸಿದ್ದು, 2018ರಲ್ಲಿ ಹೊಸ ಡಸ್ಟರ್ ಮತ್ತು 2019ರಲ್ಲಿ ಹೊಸ ಎಂಪಿವಿ ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

English summary
Renault India recently unveiled the Captur SUV in India to cater to the premium SUV segment. While the French company is launching new vehicles, it has silently discontinued several other cars in India as well.
Story first published: Monday, October 9, 2017, 12:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark