51ಹೆಚ್‌ಪಿ ಸಾಮರ್ಥ್ಯದ ಟ್ರಾಕ್ಟರ್ ನಿರ್ಮಾಣದಲ್ಲಿ ಸೋನಾಲಿಕಾ ನಂ.1

Written By:

ಟ್ರಾಕ್ಟರ್ ಸರಣಿಗಳಲ್ಲೇ ಅತಿ ಹೆಚ್ಚು ಸಾಮರ್ಥ್ಯವುಳ್ಳ ಎಂಜಿನ್ ಮಾದರಿಗಳನ್ನು ನಿರ್ಮಾಣ ಮಾಡುವಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಸೋನಾಲಿಕಾ ಸಂಸ್ಥೆಯು ಗರಿಷ್ಠ ಮಟ್ಟದ 51 ಹೆಚ್‌ಪಿ ಟ್ರಾಕ್ಟರ್ ಮಾದರಿಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನಕ್ಕೇರಿದೆ.

51ಹೆಚ್‌ಪಿ ಸಾಮರ್ಥ್ಯದ ಟ್ರಾಕ್ಟರ್ ನಿರ್ಮಾಣದಲ್ಲಿ ಸೋನಾಲಿಕಾ ನಂ.1

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಗಾತ್ರದ ವಾಣಿಜ್ಯ ವಾಹನಗಳನ್ನು ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಸೋನಾಲಿಕಾ ಗ್ರೂಪ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ 51 ಹೆಚ್‌ಪಿ ಟ್ರಾಕ್ಟರ್ ಮಾದರಿಗಳನ್ನು ಪರಿಚಯಿಸುತ್ತಿದ್ದು, ದೇಶದ ನಂ.1 ಟ್ರಾಕ್ಟರ್ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

51ಹೆಚ್‌ಪಿ ಸಾಮರ್ಥ್ಯದ ಟ್ರಾಕ್ಟರ್ ನಿರ್ಮಾಣದಲ್ಲಿ ಸೋನಾಲಿಕಾ ನಂ.1

ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ 20 ಹೆಚ್‌ಪಿ ಯಿಂದ 120 ಹೆಚ್‌ಪಿ ಎಂಜಿನ್ ಸಾಮರ್ಥ್ಯದ ಟ್ರಾಕ್ಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಸೋನಾಲಿಕಾ, ಮೊಟ್ಟ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಗರಿಷ್ಠ ಮಟ್ಟದ 51 ಹೆಚ್‌ಪಿ ಟ್ರಾಕ್ಟರ್‌ಗಳನ್ನು ಪೂರೈಕೆ ಮಾಡಿ ಯಶಸ್ವಿಯಾಗಿದೆ.

51ಹೆಚ್‌ಪಿ ಸಾಮರ್ಥ್ಯದ ಟ್ರಾಕ್ಟರ್ ನಿರ್ಮಾಣದಲ್ಲಿ ಸೋನಾಲಿಕಾ ನಂ.1

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ 30 ಹೆಚ್‌ಪಿ ಎಂಜಿನ್ ಸಾಮರ್ಥ್ಯ ಕೆಲವೇ ಕೆಲವು ಟ್ರಾಕ್ಟರ್ ಮಾದರಿಗಳು ಲಭ್ಯವಿದ್ದು, ವಾಣಿಜ್ಯ ಮತ್ತು ಕೃಷಿ ಚಟುವಟಿಕೆಗಳಿಗೆ ನೆರವಾಗಬಲ್ಲ ಉತ್ತಮ ಕಾರ್ಯಕ್ಷಮತೆಯ ಎಂಜಿನ್‌ಗಳನ್ನು ಸೋನಾಲಿಕ್ ಉತ್ಪಾದನೆ ಮಾಡುತ್ತಿರುವುದು ಮತ್ತೊಂದು ವಿಶೇಷ.

51ಹೆಚ್‌ಪಿ ಸಾಮರ್ಥ್ಯದ ಟ್ರಾಕ್ಟರ್ ನಿರ್ಮಾಣದಲ್ಲಿ ಸೋನಾಲಿಕಾ ನಂ.1

ಇದೇ ಕಾರಣಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.30ರಷ್ಟು ಪ್ರಗತಿ ಸಾಧಿಸಿರೋ ಸೋನಾಲಿಕಾ ಸಂಸ್ಥೆಯು, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ನ್ಯೂ ಹೊಲಾಂಡ್ ಮತ್ತು ಜಾನ್ ಧೀರೆ ಕಂಪನಿಗಳಿಗೆ ತೀವ್ರ ಸ್ಪರ್ಧೆ ಒಡ್ಡಿದೆ.

51ಹೆಚ್‌ಪಿ ಸಾಮರ್ಥ್ಯದ ಟ್ರಾಕ್ಟರ್ ನಿರ್ಮಾಣದಲ್ಲಿ ಸೋನಾಲಿಕಾ ನಂ.1

ಈ ಬಗ್ಗೆ ಮಾತನಾಡಿರುವ ಸೋನಾಲಿಕಾ ಎಂಡಿ ರಮನ್ ಮಿತ್ತಲ್, "ಕಳೆದ ಒಂದು ದಶಕದ ಅವಧಿಯಲ್ಲಿ ತಂತ್ರಜ್ಞಾನ ಪ್ರಗತಿಯನ್ನು ಇಮ್ಮುಡಿಗೊಳಿಸಲಾಗಿದ್ದು, ಅದರ ಫಲವಾಗಿ ಇಂದು ನಂ.1 ಸ್ಥಾನ ಪಡೆಯಲು ಸಾಧ್ಯವಾಗಿದೆ" ಎಂದಿದ್ದಾರೆ.

51ಹೆಚ್‌ಪಿ ಸಾಮರ್ಥ್ಯದ ಟ್ರಾಕ್ಟರ್ ನಿರ್ಮಾಣದಲ್ಲಿ ಸೋನಾಲಿಕಾ ನಂ.1

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಗರಿಷ್ಠ ಮಟ್ಟದ 51 ಹೆಚ್‌ಪಿ ಸಾಮರ್ಥ್ಯ ಎಂಜಿನ್ ನಿರ್ಮಾಣದಲ್ಲಿ ಸದ್ಯ ನಂ.1 ಸ್ಥಾನ ಕಾಯ್ದುಕೊಂಡಿರುವ ಸೋನಾಲಿಕಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತೊಂದು ಸಾಧನೆಯ ತವಕದಲ್ಲಿದೆ.

English summary
Read in Kannada about Sonalika Emerges As India’s No.1 Tractor Company In 51 HP Segment.
Story first published: Saturday, August 12, 2017, 16:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark