ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ

Written By:

ಭಾರತದ ವಾಹನ ತಯಾರಕ ಕಂಪೆನಿಯಾದ ಟಾಟಾ ಮೋಟರ್ಸ್, ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟ ಹೆಚ್ಚಿಸಲು ಸ್ವಯಂಚಾಲಿತ ಮ್ಯಾನುಯಲ್ ಟ್ರಾನ್ಸ್ಮಿಷನ್(ಎಎಂಟಿ) ಕಾರುಗಳನ್ನು ಹೆಚ್ಚು ಉತ್ಪಾದನೆ ಮಾಡಲು ಮುಂದಾಗಿದೆ.

To Follow DriveSpark On Facebook, Click The Like Button
ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ ಸಂಸ್ಥೆ

ಟಾಟಾ ಮೋಟಾರ್ಸ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಮುಂಬರುವ ದಿನಗಳಲ್ಲಿ ಸಂಸ್ಥೆಯು ಸ್ವಯಂಚಾಲಿತ ಮ್ಯಾನುಯಲ್ ಟ್ರಾನ್ಸ್ಮಿಷನ್(ಎಎಂಟಿ) ಕಾರುಗಳ ಬಗ್ಗೆ ಹೆಚ್ಚು ಸಂಶೋಧನೆ ನೆಡೆಸಲು ಮುಂದಾಗಿದ್ದು, ಭವಿಷ್ಯದಲ್ಲಿ ಶೇಕಡಾ 50% ಗೂ ಹೆಚ್ಚು ಉತ್ಪನ್ನಗಳಲ್ಲಿ ಎಎಂಟಿ ಗೇರ್ ಬಾಕ್ಸ್ ಅಳವಡಿಸಲು ಟಾಟಾ ಮುಂದಾಗಿದೆ ಎನ್ನಲಾಗಿದೆ.

ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ ಸಂಸ್ಥೆ

ಇತ್ತೀಚೆಗೆ, ಟಾಟಾ ಮೋಟಾರ್ಸ್ ಸಂಸ್ಥೆಯ ಯಶಸ್ವಿ ಮಾದರಿಯಾದ ಟಿಯಾಗೊ ಕಾರಿನ ರೂಪಾಂತರದಲ್ಲಿ ಸ್ವಯಂಚಾಲಿತ ಮ್ಯಾನುಯಲ್ ಟ್ರಾನ್ಸ್ಮಿಷನ್(ಎಎಂಟಿ) ತಂತ್ರಜ್ಞಾನ ಅಳವಡಿಕೆ ಮಾಡಿದ್ದು ನಮಗೆಲ್ಲರಿಗೂ ತಿಳಿದ ವಿಚಾರವಾಗಿದೆ.

Recommended Video
Tata Tiago XTA AMT Launched In India | In Kannada - DriveSpark ಕನ್ನಡ
ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ ಸಂಸ್ಥೆ

ಟಾಟಾ ಮೋಟಾರ್ಸ್ ಕಂಪನಿಯ ಮತ್ತೊಂದು ಮಾದರಿಯಾದ ಟಿಗೊರ್ ಕಾಂಪ್ಯಾಕ್ಟ್ ಸೆಡಾನ್ ಮಾದರಿಯಲ್ಲಿಯೂ ಸಹ ಈ ವಿಶಿಷ್ಟ ರೀತಿಯ ಎಎಂಟಿ ತಂತ್ರಜ್ಞಾನ ಅಳವಡಿಕೆ ಮಾಡಲು ಮುಂದಾಗಿದೆ ಎಂಬ ಖಚಿತ ಮಾಹಿತಿ ಹೊರಬಂದಿದೆ.

ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ ಸಂಸ್ಥೆ

ಕಾರು ಕೊಳ್ಳುವ ಜನತೆ ಎಎಂಟಿ ಟಾಟಾ ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದು, ಈ ಕಾರಣದಿಂದಾಗಿ ಕಾರಿನ ಮಾರಾಟ ಹೆಚ್ಚಿಗೆಯಾಗಿರುವುದು ಖುಷಿಯ ವಿಚಾರ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕರ ವಾಹನ ಉದ್ಯಮ ಘಟಕದ ಮಾರ್ಕೆಟಿಂಗ್ ಮುಖ್ಯಸ್ಥರಾದ ವಿವೇಕ್ ಶ್ರೀವಾತ್ಸಾ ತಿಳಿಸಿದ್ದಾರೆ.

ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ ಸಂಸ್ಥೆ

ಎಎಂಟಿ ತಂತ್ರಜ್ಞಾನ ಪಡೆದ ಟಿಗೊರ್ ಕಾಂಪ್ಯಾಕ್ಟ್ ಸೆಡಾನ್ ಕಾರು ಮುಂದಿನ ಮೂರು ಅಥವಾ ನಾಲ್ಕು ತಿಂಗಳುಗಳಲ್ಲಿ ಬಿಡುಗಡೆಯಾಗಲಿದ್ದು, ದೀಪಾವಳಿ ಸಮಯದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ನೆಕ್ಸನ್ ಕಾರೂ ಸಹ ಈ ಸ್ವಯಂಚಾಲಿತ ಮ್ಯಾನುಯಲ್ ಟ್ರಾನ್ಸ್ಮಿಷನ್(ಎಎಂಟಿ) ತಂತ್ರಜ್ಞಾನ ಪಡೆದು ಈ ವರ್ಷದ ಕೊನೆಯಲ್ಲಿ ಅನಾವರಣಗೊಳ್ಳಲಿದೆ.

ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ ಸಂಸ್ಥೆ

ಎಎಂಟಿ ತಂತ್ರಜ್ಞಾನವನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಪರಿಚಯಿಸುವ ಮೂಲಕ ಟಾಟಾ ಮೋಟಾರ್ಸ್ ಟಿಯಾಗೊ ಕಾರಿನ 5000 ಎಎಂಟಿ ಆವೃತಿಗಳನ್ನು ಮಾರಾಟ ಮಾಡಿರುವುದನ್ನು ಗಮನಿಸಬಹುದಾಗಿದೆ.

ಎಎಂಟಿ ಕಾರುಗಳ ಅಭಿವೃದ್ಧಿಯ ಕಡೆ ಒಲವು ತೋರಿದ ಟಾಟಾ ಸಂಸ್ಥೆ

ಎಎಂಟಿ ಗೇರ್ ಬಾಕ್ಸ್ ತಂತ್ರಜ್ಞಾನದಿಂದಾಗಿ ನಗರದಲ್ಲಿ ಚಾಲನೆ ಮಾಡುವಾಗ ಇಂಧನ ದಕ್ಷತೆ ಮತ್ತು ಕಡಿಮೆ ಬೆಲೆಯಲ್ಲಿ ಚಾಲನೆ ಮಾಡುವ ಕಾರಣದಿಂದಾಗಿ ಭಾರತದಲ್ಲಿ ಈ ತಂತ್ರಜ್ಞಾನ ಉತ್ತಮವಾಗಿ ಸ್ವೀಕೃತವಾಗುತ್ತದೆ ಎಂಬುದು ಕಂಪನಿಯ ನಂಬಿಕೆಯಾಗಿದೆ.

English summary
Indian automaker Tata Motors is betting high on the Automated Manual Transmission (AMT) to boost the passenger vehicle sales in the country.
Story first published: Monday, August 21, 2017, 17:53 [IST]
Please Wait while comments are loading...

Latest Photos