ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

Written By:

2017ರ ಇಂಡಿಯಾ ಕಸ್ಟಮರ್ ಸರ್ವೀಸ್ ಇಂಡೆಕ್ಸ್‌ ಅಧ್ಯಯನದ ವರದಿ ಹೊರ ಬಂದಿದ್ದು, ಬೆಂಗಳೂರಿನಲ್ಲಿ ಭಾರತದ ಸುಪ್ರಸಿದ್ದ ವಾಹನ ತಯಾರಕ ಸಂಸ್ಥೆಯಾದ ಟಾಟಾ ಸಂಸ್ಥೆಯು ಗ್ರಾಹಕ ಸೇವಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

ಗ್ರಾಹಕರು, ಕಾರಿನ ಗುಣಮಟ್ಟ, ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಗೆ ಮುಂದಾಗುತ್ತರ್ ಎಂದು ನೀವು ತಿಳಿದಿದ್ದರೆ, ಅದು ಖಂಡಿತ ತಪ್ಪು. ಹೌದು, ಒಬ್ಬ ಗ್ರಾಹಕ ಕೇವಲ ಈ ಮೇಲಿನ ಎರಡು ವಿಚಾರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದು ಸತ್ಯ ಸಂಗತಿ.

ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

ಈ ಎರಡು ವಿಚಾರಗಳ ಜೊತೆ ಮಾರಾಟದ ನಂತರದ ಗ್ರಾಹಕ ಸೇವೆಯನ್ನು ಸಹ ಗಮನದಲ್ಲಿಟ್ಟುಕೊಳ್ಳುತ್ತಾನೆ ಎಂಬುದು ನೆನಪಿರಲಿ ಸ್ನೇಹಿತರ. ಯಾವು ಕಂಪನಿ ಉನ್ನತ ಮಟ್ಟದ ಗ್ರಾಹಕ ಸೇವೆ ಒದಗಿಸುತ್ತದೆ ಎಂಬುದರ ಬಗ್ಗೆ ಸಮೀಕ್ಷೆಯೊಂದು ಹೊರ ಬಂದಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

ಪವರ್ 2017ರ ಇಂಡಿಯಾ ಕಸ್ಟಮರ್ ಸರ್ವೀಸ್ ಇಂಡೆಕ್ಸ್ (ಮಾಸ್ ಮಾರ್ಕೆಟ್) ಅಧ್ಯಯನ ತಂಡ ಈ ವರದಿ ನೀಡಿದ್ದು, ಬೆಂಗಳೂರಿನಲ್ಲಿ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ಕಂಪನಿಗಳ ಪಟ್ಟಿಯಲ್ಲಿ ಟಾಟಾ ಮೋಟರ್ಸ್ ಮೊದಲ ಸ್ಥಾನ ಪಡೆದಿದೆ ಎಂದು ಹೇಳಿದೆ.

ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

ಈ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಟಾಟಾ ಮೋಟರ್ಸ್‌ಗೆ 1000 ಅಂಕಗಳಲ್ಲಿ 958 ಪಾಯಿಂಟ್‌ಗಳು ಪಡೆದುಕೊಳ್ಳುವ ಮೂಲಕ ಅತ್ಯುತ್ತಮ ಗ್ರಾಹಕ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದೇ ರೀತಿ ರಾಷ್ಟ್ರೀಯ ಮಟ್ಟದಲ್ಲಿ ಟಾಟಾ ಮೋಟರ್ಸ್ ಸಂಸ್ಥೆಗೆ 2ನೇ ಸ್ಥಾನ ಲಭಿಸಿದೆ.

ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

ಸೇವಾ ಗುಣಮಟ್ಟ, ಸೇವಾ ಉಪಕ್ರಮ, ಸೇವಾ ಸಲಹೆ, ಸೇವಾ ಸೌಲಭ್ಯ ಮತ್ತು ನಗರದಲ್ಲಿ ವಾಹನ ಪಿಕ್-ಅಪ್, ಹೀಗೆ ಗ್ರಾಹಕರ ಸೇವೆಯ ಐದು ಅಂಶಗಳ ಮೇಲೆ ಟಾಟಾ ಮೋಟರ್ಸ್ ಹೆಚ್ಚು ಗಮನಹರಿಸುತ್ತಾ ಬಂದಿದೆ. ಈ ಮೂಲಕ ಶೇ.100ರಷ್ಟು ಗ್ರಾಹಕ ಸಂತೃಪ್ತಿಯನ್ನು ನೀಡುತ್ತಿದೆ ಎಂದು ಅಧ್ಯಯನ ವರದಿ ಮಾಡಿದೆ.

ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

ಈ ಬಗ್ಗೆ ವಿವರ ನೀಡಿದ ಟಾಟಾ ಮೋಟರ್ಸ್‌ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಯೂನಿಟ್‌ನ ಗ್ರಾಹಕ ಸೇವೆಯ ಮುಖ್ಯಸ್ಥರಾದ ದಿನೇಶ್ ಭಾಸಿನ್ ಅವರು,``ಟಾಟಾ ಮೋಟರ್ಸ್‌ಗೆ ಬೆಂಗಳೂರು ಅತಿ ಮುಖ್ಯವಾದ ಮಾರುಕಟ್ಟೆಯಾಗಿದೆ ಹಾಗು ಸರ್ವಿಸ್ ವಿಚಾರದಲ್ಲಿ ಈ ಮೈಲುಗಲ್ಲು ಸಾಧಿಸಿದ್ದಕ್ಕೆ ನಮಗೆ ಹೆಮ್ಮೆ ಉಂಟಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಇನ್ನೂ ಅತ್ಯುತ್ಕೃಷ್ಟವಾದ ಸೇವೆಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕ ಸೇವೆಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಬದ್ಧರಾಗಿದ್ದೇವೆ" ಎಂದು ತಿಳಿಸಿದರು.

ಗ್ರಾಹಕ ಸೇವಾ ವಿಭಾಗ ; ಬೆಂಗಳೂರಿನಲ್ಲಿ ಮೊದಲ ಸ್ಥಾನ ಪಡೆದ ಟಾಟಾ ಮೋಟರ್ಸ್

ಕಳೆದ ಎರಡೂವರೆ ವರ್ಷಗಳಲ್ಲಿ ಕಂಪನಿಯು ದೇಶಾದ್ಯಂತ ಮೆಗಾ ಸರ್ವೀಸ್ ಕ್ಯಾಂಪ್‌ಗಳನ್ನು ನಡೆಸಿ 8.5 ಲಕ್ಷ ವಾಹನಗಳಿಗೆ ಸರ್ವೀಸ್ ಮಾಡಿದೆ. ದೇಶಾದ್ಯಂತ ಸೇವಾ ಗುಣಮಟ್ಟವನ್ನು ಕಾಯ್ದುಕೊಂಡು ಮತ್ತು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ತಾಂತ್ರಿಕ ಸಿಬ್ಬಂದಿಯ ಕೌಶಲ್ಯವನ್ನು ಹೆಚ್ಚಿಸಲು 10 ತರಬೇತಿ ಕೇಂದ್ರಗಳನ್ನು ಆರಂಭಿಸಿದೆ.

English summary
Tata Motors secured first position for providing consumer service in Bengaluru
Story first published: Friday, November 10, 2017, 10:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark