ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

Written By:

ಟಾಟಾ ಮೋಟರ್ಸ್ ಭಾರತಕ್ಕೆ ಹೊಸ ಪ್ರೀಮಿಯಂ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ವಾಹನ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಆದರಿಸಲಿದೆ. ಇದರ ಹೊರತಾಗಿ ಹೊಸ ಉತ್ಪನ್ನದ ಕುರಿತು ಹೆಚ್ಚಿನ ವಿವರ ಬಹಿರಂಗವಾಗಿದೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ಹೌದು, ಪ್ರೀಮಿಯಂ ಎಸ್‌ಯುವಿ ಕಾರನ್ನು ಹೊರತುಪಡಿಸಿ ಟಾಟಾ ಮೋಟಾರ್ಸ್ ತನ್ನ ಹೊಸ ಮಧ್ಯದ ಗಾತ್ರದ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಹೊಸ ವಾಹನವ ಟಾಟಾ ಮೋಟರ್ಸ್ ಕಂಪನಿಯ ನೆಕ್ಸನ್ ಮತ್ತು ಹೆಕ್ಸಾ ಕಾರುಗಳ ನಡುವೆ ಸ್ಥಾನ ಪಡೆಯಲಿದೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ಹೊಸ ಮಧ್ಯದ ಗಾತ್ರದ ಎಸ್‌ಯುವಿ ಕಾರು ಮತ್ತು ಪ್ರೀಮಿಯಂ ಎಸ್‌ಯುವಿ ಕಾರುಗಳಿಗೆ ಕ್ಯೂ501 ಎಂಬ ಸಂಕೇತನಾಮ ನೀಡಲಾಗಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಕಾರು ಹ್ಯುಂಡೈ ಕ್ರೆಟಾ ಮತ್ತು ರೆನಾಲ್ಟ್ ಕಾಪ್ಟರ್ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ತನ್ನ ಪ್ರತಿಸ್ಪರ್ದೆಗಳು ಹೊಂದಿರುವಂತೆ ಈ ಕಾರು ಸಹ 5 ಆಸನಗಳ ಸಂರಚನೆಯನ್ನು ಪಡೆದುಕೊಂಡಿದೆ. ಈ ವಾಹನವು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಲ್ 550 ಕಾರಿನ ಪ್ಲಾಟ್‌ಫಾರಂ ಆಧರಿಸಿದೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ಕಳೆದ ಎರಡು ವರ್ಷಗಳಿಂದ ಟಾಟಾ ಮೋಟರ್ಸ್ ಕಂಪನಿಯು ತನ್ನ ಎರಡು ಉತ್ಪನ್ನಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಸದ್ಯ ಹೊಸ ರೂಪ ಪಡೆದ ವಾಹನಗಳು ಅಂತಿಮ ಹಂತದಲ್ಲಿ ಕಾಣಿಸಿಕೊಂಡಿವೆ. ಈ ಎರಡು ಮಾದರಿಗಳನ್ನು ಟಾಟಾ ಭಾರತೀಯ ರಸ್ತೆಗಳ ಮೇಲೆ ಪರೀಕ್ಷೆ ನೆಡೆಸುತ್ತಿದೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ಹೊಸ ಎಸ್‌ಯುವಿ ಕಾರುಗಳನ್ನು ಸಂಸ್ಥೆಯು ತನ್ನ ರಂಜನ್‌ಗಾನ್ ಸ್ಥಾವರದಲ್ಲಿ ಉತ್ಪಾದನೆ ಮಾಡುತ್ತಿದ್ದು, ಫಿಯೆಟ್ ಮೂಲದ 2-ಲೀಟರ್ ಮಲ್ಟಿಜೆಟ್ II ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತವೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ಇದೇ ಎಂಜಿನ್ ಆಯ್ಕೆಯನ್ನು ಜೀಪ್ ಕಂಪಾಸ್ ಕಾರಿನಲ್ಲಿಯೂ ನೀಡಲಾಗಿದೆ. ಆದರೆ ಟಾಟಾ ಸಂಸ್ಥೆಯು ಹೊಸ ಕಾರಿನಲ್ಲಿ ವಿಭಿನ್ನವಾಗಿ ಎಂಜಿನ್ ಟ್ಯೂನ್ ಮಾಡಲು ನಿರ್ಧರಿಸಿದೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ಟಿಯಾಗೊ, ಟಿಗೋರ್, ಹೆಕ್ಸಾ ಮತ್ತು ಇತ್ತೀಚೆಗೆ ಬಿಡುಗಡೆಯಾದ ನೆಕ್ಸನ್ ಕಾರುಗಳಲ್ಲಿ ಅಳವಡಿಸಲಾಗಿರುವ ಟಾಟಾ ಮೋಟಾರ್ಸ್ ಇಂಪ್ಯಾಕ್ಟ್ ಡಿಸೈನ್ ಭಾಷೆಯನ್ನು ತನ್ನ ಹೊಸ ಎಸ್‌ಯುವಿಗಳಲ್ಲಿ ಅಳವಡಿಸುವ ನಿರೀಕ್ಷೆ ಇದೆ.

ಜೀಪ್ ಕಂಪಾಸ್ ಕಾರಿಗೆ ಸ್ಪರ್ಧೆ ನೀಡಲಿದೆ ಟಾಟಾ ಕಂಪನಿಯ ಈ ಹೊಸ ಕಾರು

ಐದು ಆಸನಗಳ ಎಸ್ಯುವಿ ಸುಮಾರು 140 ಬಿಎಚ್‌ಪಿಯಷ್ಟು ಶಕ್ತಿಯನ್ನು ಉತ್ಪಾದಿಸುವ ಸಾಧ್ಯತೆಯಿದೆ ಹಾಗು ಏಳು ಆಸನಗಳ ಮಾದರಿಯು 170 ಬಿಎಚ್‌ಪಿ ಉತ್ಪಾದಿಸುವ ನಿರೀಕ್ಷೆ ಇದೆ. ಎರಡೂ ವಾಹನಗಳು ಒಂದೇ ರೀತಿಯ ಪ್ಲಾಟ್‌ಫಾರಂ ಮತ್ತು ಎಂಜಿನ್ ಒಳಗೊಂಡಿದ್ದರೂ ಸಹ, ಸಂಪೂರ್ಣವಾಗಿ ಭಿನ್ನವಾದ ವಿನ್ಯಾಸವನ್ನು ಕಾರುಗಳು ಪಡೆಯಲಿವೆ.

English summary
Tata Motors is developing a new mid-size SUV which will be slotted between the Nexon and Hexa.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark