ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಮಾಹಿತಿ ಅನಾವರಣ

Written By:

ಟಾಟಾ ಸಂಸ್ಥೆಯು ತನ್ನ ಟಿಯಾಗೊ ಎಲೆಕ್ಟ್ರಿಕ್ ವೆಹಿಕಲ್(ಇವಿ) ಕಾರನ್ನು ಯುಕೆ ದೇಶದ ಮಿಲ್‌ಬ್ರೂಕ್‌ನಲ್ಲಿ ನೆಡೆಯುವ LCV2017 ಪ್ರದರ್ಶನದಲ್ಲಿ ಅನಾವರಣಗೊಂಡಿದ್ದ ಕಾರಿನ ಚಿತ್ರಗಳು ಲಭ್ಯವಾಗಿವೆ.

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಮಾಹಿತಿ ಅನಾವರಣ ಹ್ಯಾಚ್ ಬ್ಯಾಕ್

ಯುಕೆ ಮೂಲದ ಟಾಟಾ ಮೋಟಾರ್ಸ್ ಯೂರೋಪಿಯನ್ ಟೆಕ್ನಿಕಲ್ ಸೆಂಟರ್(ಟಿಎಂಇಟಿಸಿ)ಯಿಂದ ಈ ಟಿಯಾಗೊ ಕಾರನ್ನು ವಿನ್ಯಾಸಗೊಳಿಸಲಾಗಿದ್ದು,ಈ ಟಿಯೊಗೊ ವಿದ್ಯುತ್ ಕಾರು ಲಿಕ್ವಿಡ್-ಕೋಲ್ಡ್ 85 ಕಿಲೋವ್ಯಾಟ್ ಎಲೆಕ್ಟ್ರಿಕ್ ಡ್ರೈವ್ ಮೋಟಾರ್ ಅನ್ನು ಬಳಸಲಿದೆ ಎಂಬ ಮಾಹಿತಿ ಹೊರಬಂದಿದೆ.

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಮಾಹಿತಿ ಅನಾವರಣ ಹ್ಯಾಚ್ ಬ್ಯಾಕ್

ಗಂಟೆಗೆ 135 ಕಿ.ಮೀ ಚಲಿಸುವಷ್ಟು ವೇಗವನ್ನು ಹೊಂದಿರುವ ಈ ಟಾಟಾ ಕಂಪನಿಯ ಟಿಯಾಗೊ ಎಲೆಕ್ಟ್ರಿಕ್ ಕಾರು, 200 ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ.

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಮಾಹಿತಿ ಅನಾವರಣ ಹ್ಯಾಚ್ ಬ್ಯಾಕ್

ಸಾಂಪ್ರದಾಯಿಕ ಆಂತರಿಕ ದಹನಕಾರಿ ಎಂಜಿನ್ ಪಡೆದುಕೊಂಡಿರುವ ಈ ಟಿಯಾಗೊ ಕಾರು ಸಾಮಾನ್ಯ ಕಾರಿಗೆ ಹೋಲಿಸಿದರೆ 20 ಕೆ.ಜಿ ಹಗುರವಾದದ್ದು, 1,040 ಕಿ.ಗ್ರಾಂ ತೂಗುತ್ತದೆ.

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಮಾಹಿತಿ ಅನಾವರಣ ಹ್ಯಾಚ್ ಬ್ಯಾಕ್

ಸಾಮಾನ್ಯವಾಗಿ ಎಲೆಕ್ಟ್ರಿಕ್ ಕಾರು ಎಂದರೆ ಹೆಚ್ಚು ಶಕ್ತಿ ಇರುವುದಿಲ್ಲ ಎಂಬ ಮಾತಿದೆ, ಆದ್ರೆ ಈ ಕಾರು 11 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವಷ್ಟು ಶಕ್ತಿಯುತವಾಗಿದೆ.

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಮಾಹಿತಿ ಅನಾವರಣ ಹ್ಯಾಚ್ ಬ್ಯಾಕ್

ಈ ಟಾಟಾ ಟಿಯಾಗೊ ಕಾರಿನ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿದರೆ 100 ಕಿ.ಮೀ ವ್ಯಾಪ್ತಿಯನ್ನು ತಲುಪುವಷ್ಟು ಸಾಮರ್ಥ್ಯ ಪಡೆದುಕೊಂಡಿದೆ. ಕಳೆದ ಮೂರು ತಿಂಗಳಿನಿಂದ ಈ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಆವೃತಿಯು ಹೆಚ್ಚು ಮಾರಾಟವಾಗುತ್ತಿದ್ದು, ಈ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದರೆ ಹೆಚ್ಚು ಮಾರಾಟವಾಗುವ ವಿಶ್ವಾಸವನ್ನು ಟಾಟಾ ಹೊಂದಿದೆ.

ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರಿನ ಮಾಹಿತಿ ಅನಾವರಣ ಹ್ಯಾಚ್ ಬ್ಯಾಕ್

ಹೊಸ ವಿದ್ಯುತ್ ವಾಹನವನ್ನು ಅಭಿವೃದ್ಧಿಪಡಿಸುವ ಬದಲಾಗಿ, ಅಸ್ತಿತ್ವದಲ್ಲಿರುವ ಮಾದರಿಯನ್ನು ಇ.ವಿ ಕಾರುಗಳಾಗಿ ಪರಿವರ್ತಿಸುವ ಹೊಸ ವಿಧಾನವನ್ನು ಅನುಸರಿಸುತ್ತಿದ್ದು, ಇದರಿಂದಾಗಿ ಹೆಚ್ಚು ವೆಚ್ಚ ತಡೆಗಟ್ಟಬಹುದು ಎಂಬುದು ಟಾಟಾ ಮೋಟಾರ್ಸ್ ನಂಬಿಕೆಯಾಗಿದೆ.

English summary
Tata Tiago Electric Vehicle (EV) revealed. The fully electric vehicle concept was unveiled at the LCV2017 (an exhibition for low carbon emissions vehicles) in Millbrook, UK.
Story first published: Saturday, September 9, 2017, 16:04 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark