ಟಾಟಾ ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

Written By:

ಟಿಯಾಗೊ ಕಾರಿನ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಟಾಟಾ ಮೋಟರ್ಸ್ ಸಂಸ್ಥೆ ಟಿಯಾಗೊ ಕಾರಿನ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಈ ಕಾರಿನ ಸ್ಪೈ ಚಿತ್ರಗಳು ಸೋರಿಕೆಯಾಗಿವೆ.

ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

ನಮಗೆಲ್ಲರಿಗೂ ತಿಳಿದಿರುವಂತೆ ಟಾಟಾ ಮೋಟಾರ್ಸ್ ಸಂಸ್ಥೆಯ ಟಿಯಾಗೊ ಕಾರು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗಿ ಯಶಸ್ವಿ ಕಾರು ಎಂಬ ಹಣೆ ಪಟ್ಟಿಯನ್ನು ಹೊತ್ತು ತಿರುಗುತ್ತಿದೆ. ಈ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಬಳಸಲಾಗಿರುವ ಇಂಪ್ಯಾಕ್ಟ್ ಡಿಸೈನ್ ಟೆಕ್ನಾಲಜಿ ಭಾರತೀಯ ಖರೀದಿದಾರನ್ನು ಹೆಚ್ಚು ಸೆಳೆದಿದೆ ಎನ್ನಬಹುದು.

ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಟಿಯಾಗೊ ಕಾರು ಮತ್ತಷ್ಟು ವಿಶೇಷತೆಗಳನ್ನು ಪಡೆದುಕೊಂಡು ವಿಶೇಷ ಆವೃತಿಯಾಗಿ ಮತ್ತೆ ಬಿಡುಗಡೆಗೊಳ್ಳುತ್ತಿದ್ದು, ಈ ಕಾರಿನ ರಹಸ್ಯ ಚಿತ್ರಗಳು ಬಿಡುಗಡೆಗೊಂಡಿವೆ.

ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಟಾಟಾ ಟಿಯಾಗೊ ವಿಶೇಷ ಆವೃತ್ತಿಯ ಕಾರು ಕೇವಲ ಎಕ್ಸ್‌ಟಿ ರೂಪಾಂತರದಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದ್ದು, ಈ ಕಾರಿನ ಎಕ್ಸ್‌.ಝೆಡ್ ಆವೃತಿಯಲ್ಲಿ ಈ ಆವೃತಿ ಬಿಡುಗಡೆಗೊಳ್ಳುವುದು ಅನುಮಾನ ಎನ್ನಲಾಗಿದೆ.

ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಸೋರಿಕೆಯಾಗಿರುವ ಚಿತ್ರಗಳನ್ನು ಗಮನಿಸಿದರೆ, ಸೀಮಿತ ಆವೃತ್ತಿಯ ಟಿಯಾಗೊ ಕಾರಿನ ರೂಫ್ ಕಪ್ಪು ಬಣ್ಣವನ್ನು ಪಡೆದುಕೊಂಡಿದೆ ಮತ್ತು ಕಪ್ಪು ಕವರ್ ಪಡೆದಿರುವ ಅಕ್ಕ ಪಕ್ಕದ ಕನ್ನಡಿಗಳನ್ನು ಇರಿಸಲಾಗಿದೆ. ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಇರುವಂತಹ 14 ಇಂಚಿನ ಚಕ್ರಗಳ ಬದಲಿಗೆ 13 ಇಂಚಿನ ಚಕ್ರಗಳನ್ನು ನಿಯಮಿತ ಮಾದರಿಯಲ್ಲಿ ಕಾಣಬಹುದಾಗಿದೆ.

ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

2016ರಲ್ಲಿ ಬಿಡುಗಡೆಯಾಗಿ ಭರ್ಜರಿ ಮಾರಾಟ ಪ್ರಕ್ರಿಯೆ ಕಂಡಿರುವ ಟಾಟಾ ವಿನೂತನ ಟಿಯಾಗೊ, ಒಂದು ವರ್ಷದ ಅವಧಿಯಲ್ಲಿ 1 ಲಕ್ಷ ಬುಕ್ಕಿಂಗ್ ಪಡೆದುಕೊಳ್ಳುವ ಮೂಲಕ ಹೊಸ ಸಾಧನೆ ಮಾಡಿರುವುದನ್ನು ನಾವು ಸ್ಮರಿಸಬಹುದಾಗಿದೆ.

ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಈ ನವೀನ ರೀತಿಯ ಹ್ಯಾಚ್‌ಬ್ಯಾಕ್ ಶೈಲಿಯ ಸೀಮಿತ ಆವೃತಿಯೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 1.05-ಲೀಟರ್ ಡೀಸೆಲ್ ಎಂಜಿನ್ ವ್ಯವಸ್ಥೆಯನ್ನು ಸಹ ಪಡೆದುಕೊಂಡಿದೆ.

ಟಿಯಾಗೊ ವಿಶೇಷ ಆವೃತ್ತಿ ಕಾರಿನ ಸ್ಪೈ ಚಿತ್ರಗಳು ಸೋರಿಕೆ

ಈಗಾಗಲೇ ಸಾಮಾನ್ಯ ಮಾದರಿಯ ಕಾರು ಭಾರತೀಯ ಗ್ರಾಹಕರನ್ನು ತನ್ನೆಡೆಗೆ ಸೆಳೆಯಲು ಯಶಸ್ವಿಯಾಗಿದ್ದು, ಸದ್ಯ ಅನಾವರಣಗೊಳ್ಳುವ ಹಂತದಲ್ಲಿರುವ ಈ ವಿಶೇಷ ಆವೃತಿಯ ಕಾರಿಗೆ ಜನರು ಹೇಗೆ ಪ್ರತಿಕ್ರಿಯೆ ವ್ಯಕ್ತಪಡಿಸಲಿದ್ದಾರೆ ಕಾದು ನೋಡಬೇಕಾಗಿದೆ.

English summary
Tata Motors has witnessed a surge in sales of the Tiago hatchback as buyers seem to have taken a liking to the IMPACT design philosophy.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark