ಹೊಚ್ಚ ಹೊಸ ಟಿಗೋರ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

Written By:

ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ 'ಟಿಯಾಗೊ' ಹ್ಯಾಚ್ ಬ್ಯಾಕ್ ಕಾರಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವ ಬೆನ್ನಲೇ ತನ್ನ ಮತ್ತೊಂದು ಹೊಸ ಕಾಂಪ್ಯಾಕ್ಟ್ ಸೆಡಾನ್ ಟಿಗೋರ್ ಕಾರನ್ನು ಇದೇ ತಿಂಗಳು(ಮಾರ್ಚ್) 29ರಂದು ಬಿಡುಗಡೆಗೊಳಿಸಲು ಎಲ್ಲಾ ತಯಾರಿ ನೆಡೆಸಿದೆ.

ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ಹೊಂದಿರುವ ಟಾಟಾದ ಮೂರನೇ ಕಾರು ಎಂಬ ಶ್ರೇಯಸ್ಸಿಗೆ ಹೊಸದಾಗಿ ನಾಮಕರಣವಾಗಿರುವ ಟೈಗೊರ್ ಕಾರು ಪಾತ್ರವಾಗಿದೆ.

ಹೊಚ್ಚ ಹೊಸ ಟಿಗೋರ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

ಟಾಟಾ ಮೋಟರ್ಸ್ ನ ಮೊದಲ ಸ್ಟೈಲ್ ಬ್ಯಾಕ್ ಕಾರು ಎಂಬ ಖ್ಯಾತಿಗೆ ಪಾತ್ರವಾಗಿರುವ ಟಿಗೋರ್, ಯುವ ಜನತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಲಾಗಿರುವ ಕಾರು ಎಂದು ಕಂಪನಿ ತಿಳಿಸಿದೆ.

ಹೊಚ್ಚ ಹೊಸ ಟಿಗೋರ್ ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

1.2 ಪೆಟ್ರೋಲ್ ಮತ್ತು 1.05 ಡೀಸೆಲ್ ಇಂಜಿನ್ ಹೊಂದಿರುವ ಟಿಗೋರ್ ಕಾರನ್ನು ಟಾಟಾ ಮೋಟಾರ್ಸ್ ಕಂಪನಿಯು ಈ ಮೊದಲೇ 2016 ನಲ್ಲಿ ನೆಡೆದ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು.

ಹೊಚ್ಚ ಹೊಸ 'ಟಿಗೋರ್' ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

ಈ ಮೊದಲು ಟಾಟಾ ಮೋಟರ್ಸ್ ಟಿಗೋರ್ ಕಾರಿಗೆ 'ಕೈಟ್ 5' ಎಂದು ನಾಮಕರಣ ಮಾಡಿತ್ತು, ಟಿಯಾಗೊ ಕಾರಿಗೆ ದೊರಕಿರುವ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಟಾಟಾ ಮೋಟರ್ಸ್, ಹೊಸ ಕಾರಿಗೆ 'ಟಿಗೋರ್' ಎಂಬ ಹೆಸರನ್ನು ಇಡುವ ಮೂಲಕ 'ಗೊ' ಎಂಬ ಉಚ್ಚಾರಣೆಯನ್ನು ಟಾಟಾ ಮುಂದುವರಿಸಲಿದೆ.

ಹೊಚ್ಚ ಹೊಸ 'ಟಿಗೋರ್' ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

ಟಾಟಾ ಕಂಪನಿ ಈಗಾಗಲೇ ಟಿಗೋರ್ ಮತ್ತು ಟಾಟಾ ನಿಕ್ಸನ್ ಕಾರುಗಳನ್ನು ಜಿನೆವ ಮೋಟಾರ್ ಷೋನಲ್ಲಿ ಅನಾವರಣಗೊಳಿಸಿತ್ತು. ಸದ್ಯ ಟಿಗೋರ್ ಮಾತ್ರ ಬಿಡುಗಡೆಗೊಳ್ಳುತ್ತಿದೆ ಎಂದು ಕಂಪನಿ ತಿಳಿಸಿದೆ.

ಹೊಚ್ಚ ಹೊಸ 'ಟಿಗೋರ್' ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

ಎಲ್ಲಾ ಟಾಟಾ ಕಾರುಗಳಲ್ಲಿ ಇರುವಂತಹ ಇಂಪ್ಯಾಕ್ಟ್ ರಚನೆಯ ವ್ಯವಸ್ಥೆ ಈ ಕಾರುಗಳಲ್ಲಿಯೂ ಇರಲಿದ್ದು, ಸ್ವೀಪ್ಟ್-ಬ್ಯಾಕ್ ಹೆಡ್ ಲ್ಯಾಂಪ್ ಹೊಂದಿರಲಿದೆ ಮತ್ತು ಎಲ್ಇಡಿ ದೀಪಗಳನ್ನು ಹೊಂದಿರಲಿದೆ.

ಹೊಚ್ಚ ಹೊಸ 'ಟಿಗೋರ್' ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

ಹಳೆ ಕಾಲದ ನೋಟ್ ಬ್ಯಾಕ್ ಕಾರನ್ನು ಮತ್ತೆ ನೆನಪಿಸುತ್ತದೆ ಎಂಬ ಕಾರಣಕ್ಕೆ ಈ ಕಾರಿಗೆ ಸ್ಟೈಲ್ ಬ್ಯಾಕ್ ಎಂದು ಹೆಸರಿಡಲಾಗಿದೆ.

ಹೊಚ್ಚ ಹೊಸ 'ಟಿಗೋರ್' ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

ಬಾಗಿದ ರೂಫ್ ಹೊಂದಿರುವ ಕಾರು ಇದಾಗಿದ್ದು, ಮೂರು ಸಿಲಿಂಡರ್ ಹೊಂದಿರುವ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು ಮೂರು ಸಿಲಿಂಡರ್ ಹೊಂದಿರುವ ರೆವೊಟೊರ್ಕ್ 1.05-ಲೀಟರ್ ಡೀಸೆಲ್ ಇಂಜಿನ್ ಹೊಂದಿರುವ ಎರಡು ಮಾದರಿಗಳಲ್ಲಿ ಈ ಕಾರು ಬಿಡುಗಡೆಗೊಳ್ಳುತ್ತಿದೆ.

ಹೊಚ್ಚ ಹೊಸ 'ಟಿಗೋರ್' ಕಾರಿನ ಬಿಡುಗಡೆ ದಿನಾಂಕ ಫಿಕ್ಸ್ ಆಯ್ತು

ಎಂದಿನಂತೆ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿರುವ ಕಾರು ಇದಾಗಿದ್ದು, ಎಎಂಟಿ ಹೊರಸೂಸುವಿಕೆ ಹೊಂದಿರಲಿರುವ ಈ ಕಾರು ಎಲ್ಲರ ಮೆಚ್ಚುಗೆಗಳಿಸಲಿದೆಯೇ ಎಂಬುದು ಮಾರ್ಚ್ 29ರ ನಂತರ ತಿಳಿಯಲಿದೆ.

ಟಾಟಾ ತನ್ನ ಮತ್ತೊಂದು ಸ್ಪೋರ್ಟ್ಸ್ ಕಾರು ಟಮೋ ರೆಸಮೋ ಕಾರಿನ ಫೋಟೋಗಳನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಚಿತ್ರಗಳನ್ನು ಈಗಲೇ ನೋಡಿ.

English summary
Tata Motors has revealed the launch date of its much awaited subcompact sedan, the Tigor. The new car will be launched in India on March 29, 2017.
Story first published: Thursday, March 9, 2017, 16:31 [IST]
Please Wait while comments are loading...

Latest Photos