ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

Written By:

ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾ ತನ್ನ ಟೆಸ್ಲಾ ಮಾದರಿ 3 ಕಾರನ್ನು ಪ್ರಪಂಚದಾದ್ಯಂತ ಬಿಡುಗಡೆಗೊಳಿಸಿದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

ಅತ್ಯಂತ ಕಡಿಮೆ ಬೆಲೆ ಹೊಂದಿರುವ ಟೆಸ್ಲಾ ಕಾರನ್ನು ಅನಾವರಗೊಳಿಸಿದ್ದು, $ 35,000 (22.45 ಲಕ್ಷ ರೂಪಾಯಿಗಳು) ಬೆಲೆ ನಿಗದಿಪಡಿಸಲಾಗಿದೆ. ಈ ಮಾದರಿಯು ಸಣ್ಣದಾಗಿದ್ದು, ಸರಳ ಹಾಗೂ ಕೈಗೆಟುಕುವ ಬೆಲೆಯಲ್ಲಿ ನಿಮ್ಮ ಕೈಸೇರಲಿದೆ ಎಂದು ಕಂಪನಿ ತಿಳಿಸಿದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

ತೆಸ್ಲಾ 3 ಮಾದರಿಯಲ್ಲಿ ಸ್ಟ್ಯಾಂಡರ್ಡ್ ಬ್ಯಾಟರಿ ಅಳವಡಿಸಲಾಗಿದ್ದು, ಈ ಕಾರು ಚಾರ್ಜ್ ಮಾಡಿದ ಮೇಲೆ ಸರಿ ಸುಮಾರು 220 ಮೈಲಿ (355 ಕಿ.ಮೀ) ಚಲಿಸುವಷ್ಟು ಸಾಮರ್ಥ್ಯ ಹೊಂದಿದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

ಈ ಕಾರು ಮತ್ತೊಂದು ಬೆಲೆಯಲ್ಲಿ (28.22 ಲಕ್ಷ ರೂ) ಸಹ ಬಿಡುಗಡೆಗೊಂಡಿದ್ದು, ಈ ಕಾರು 310 ಮೈಲಿ (500km) ಗಳವರೆಗೆ ಚಲಿಸುತ್ತದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

ಈ ಎಲೆಕ್ಟ್ರಿಕ್ ಕಾರಿನ ಸ್ಟ್ಯಾಂಡರ್ಡ್ ಬ್ಯಾಟರಿ 5.6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವಷ್ಟು ಸಾಮರ್ಥ್ಯ ಹೊಂದಿದೆ ಹಾಗು 210 ಕಿ.ಮೀ ಗರಿಷ್ಠ ವೇಗ ಪಡೆದುಕೊಂಡಿದೆ. ಇನ್ನು ಮತ್ತೊಂದು ಮಾದರಿಯು 5.1 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವಷ್ಟು ಶಕ್ತಿ ಪಡೆದುಕೊಂಡಿದೆ ಮತ್ತು 225 ಕಿ.ಮೀ ಗರಿಷ್ಠ ವೇಗ ಹೊಂದಲಿದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

ವಿಶ್ವದ ಗಮನವನ್ನು ಪರ್ಯಾಯ ಇಂಧನದ ಕಡೆ ಕರೆದೊಯ್ಯುವ ನಿಟ್ಟಿನಲ್ಲಿ ವಿಶ್ವದ ಬೃಹತ್-ಮಾರುಕಟ್ಟೆಗೆ ಟೆಸ್ಲಾ 3ನೇ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

ತೆಸ್ಲಾ 3 ಮಾದರಿಯ ಕಾರು 4,694 ಎಂಎಂ ಉದ್ದ, 1,849 ಎಂಎಂ ಅಗಲ ಮತ್ತು 1,443 ಎಂಎಂ ಎತ್ತರ 2,875 ಎಂಎಂ ಉದ್ದನೆಯ ವೀಲ್ ಬೇಸ್ ಹೊಂದಿದೆ. ಈ ಕಾರು 1,610 ಕೆ.ಜಿ ಕೂಕ ಇರಲಿದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

18 ಇಂಚಿನ ಮಿಶ್ರಲೋಹದ ಚಕ್ರಗಳು, ಸುಂದರವಾದ 15.4 ಇಂಚಿನ ಟಿವಿ ಪರದೆ, ಉಭಯ ವಲಯ ಹವಾಮಾನ ನಿಯಂತ್ರಣ, ವೈ-ಫೈ ಇಂಟರ್ನೆಟ್ ಸಂಪರ್ಕ, ಸ್ಮಾರ್ಟ್ಫೋನ್ ಮೂಲಕ ಪ್ರವೇಶ ಸೌಲಭ್ಯಗಳನ್ನು ಈ ಕಾರು ಹೊಂದಿದೆ.

ಅಗ್ಗದ ಕಾರನ್ನು ಬಿಡುಗಡೆಗೊಳಿಸಿದ ಟೆಸ್ಲಾ: ಹೊಸ ಕಾರು ಯುಗ ಆರಂಭ ?

ಅಗ್ಗದ ವಿದ್ಯುತ್ ವಾಹನಗಳನ್ನು ತಯಾರಿಸುವ ಮೂಲಕ ಟೆಸ್ಲಾ ಭವಿಷ್ಯದ ವಾಹನೋದ್ಯಮದ ಚಿತ್ರಣವನ್ನೇ ಬದಲಾವಣೆ ಮಾಡಲು ಹೊರಟಿದ್ದು, ಈ ಟೆಸ್ಲಾ ಕಾರು ಇದಕ್ಕೆ ಮುನ್ನುಡಿಯಾಗಿದೆ.

Read more on ಟೆಸ್ಲಾ tesla
English summary
Tesla Model 3 launched. Electric carmaker Tesla launched its most affordable electric car Model 3 with a price tag of $35,000 (Rs 22.45 lakh).
Story first published: Saturday, July 29, 2017, 15:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark