ಅಮೆರಿಕದಲ್ಲಿ ಹೊಸ ಅಲೆ ಸೃಷ್ಠಿಸಿದ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಭಾರೀ ಬೇಡಿಕೆ

Written By:

ಸದ್ಯ ಆಟೋ ಮೊಬೈಲ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಟೆಸ್ಲಾ ಮಾಡೆಲ್ 3 ಕಾರು ಮಾದರಿಯು ಅಮೆರಿಕದಲ್ಲಿ ಹೊಸ ಅಲೆ ಸೃಷ್ಠಿಸಿದ್ದು, ಹೊಸ ಕಾರು ಖರೀದಿಗಾಗಿ ಪ್ರತಿ ದಿನ 1800 ಬುಕ್ಕಿಂಗ್‌ಗಳು ಹರಿದುಬರುತ್ತಿವೆ.

To Follow DriveSpark On Facebook, Click The Like Button
ಹೊಸ ಅಲೆ ಸೃಷ್ಠಿಸಿದ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಭಾರೀ ಬೇಡಿಕೆ

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡಿರುವ ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರು ಮಾದರಿಯೂ ಅಮೆರಿಕದಲ್ಲಿ ಕಳೆದ 15 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಈಗಾಗಾಲೇ 30 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಹರಿದು ಬಂದಿರುವುದು ಮತ್ತೊಂದು ವಿಶೇಷ.

ಹೊಸ ಅಲೆ ಸೃಷ್ಠಿಸಿದ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಭಾರೀ ಬೇಡಿಕೆ

ಇದೇ ಕಾರಣಕ್ಕೆ ಬೃಹತ್ ಯೋಜನೆಯೊಂದನ್ನು ರೂಪಿಸಿರುವ ಟೆಸ್ಲಾ ಸಂಸ್ಥೆಯು ಮಾಡೆಲ್ 3 ಕಾರುಗಳ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಈ ಮೂಲಕ 1.5 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಕಂಡುಕೊಳ್ಳುವ ತವಕದಲ್ಲಿದೆ.

ಹೊಸ ಅಲೆ ಸೃಷ್ಠಿಸಿದ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಭಾರೀ ಬೇಡಿಕೆ

ಇನ್ನು ಗ್ರಾಹಕರ ಮನಗೆದ್ದಿರುವ ಟೆಸ್ಲಾ ಮಾಡೆಲ್ 3 ಕಾರು ಕೂಡಾ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಂಜಿನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣಗೊಂಡಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 356 ಕಿಮಿ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವುದೇ ಇದರ ಮತ್ತೊಂದು ವಿಶೇಷ.

ಹೊಸ ಅಲೆ ಸೃಷ್ಠಿಸಿದ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಭಾರೀ ಬೇಡಿಕೆ

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ವಿಶ್ವದ ಗಮನವನ್ನು ಪರ್ಯಾಯ ಇಂಧನದ ಕಡೆ ಕರೆದೊಯ್ಯುವ ನಿಟ್ಟಿನಲ್ಲಿ ವಿಶ್ವದ ಬೃಹತ್ ಮಾರುಕಟ್ಟೆಗೆ 3ನೇ ಮಾದರಿಗಳನ್ನು ಬಿಡುಗಡೆಗೊಳಿಸಿರುವ ಟೆಸ್ಲಾ, ಮುಂದಿನ 6 ತಿಂಗಳು ಕಾಲ ಬೃಹತ್ ಪ್ರಮಾಣದಲ್ಲಿ ಹೊಸ ಕಾರುಗಳ ಉತ್ಪಾದನೆ ಕೈಗೊಳ್ಳಲಿದೆ.

ಹೊಸ ಅಲೆ ಸೃಷ್ಠಿಸಿದ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಭಾರೀ ಬೇಡಿಕೆ

ಈ ಮೂಲಕ ಅಗ್ಗದ ವಿದ್ಯುತ್ ವಾಹನಗಳನ್ನು ತಯಾರಿಸುವ ಮೂಲಕ ಟೆಸ್ಲಾ ಭವಿಷ್ಯದ ವಾಹನೋದ್ಯಮದ ಚಿತ್ರಣವನ್ನೇ ಬದಲಾವಣೆ ಮಾಡಲು ಹೊರಟಿದ್ದು, ಇದೀಗ ಮಾಡೆಲ್ 3 ಕಾರು ಮಾದರಿಗಳು ಇದಕ್ಕೆ ಮುನ್ನುಡಿಯಾಗಿವೆ.

ಹೊಸ ಅಲೆ ಸೃಷ್ಠಿಸಿದ ಟೆಸ್ಲಾ ಮಾಡೆಲ್ 3 ಕಾರುಗಳಿಗೆ ಭಾರೀ ಬೇಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯಕ್ಕೆ ಅಮೆರಿಕದ ಸಂಯುಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಮಾತ್ರ ಟೆಸ್ಲಾ ಮಾಡೆಲ್ 3 ಕಾರುಗಳು ಖರೀದಿಗೆ ಲಭ್ಯವಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ವಿಶೇಷ ಬೇಡಿಕೆ ಹಿನ್ನೆಲೆ ಮುಂಬರುವ ದಿನಗಳಲ್ಲಿ ವಿನೂತನ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

Read more on ಟೆಸ್ಲಾ tesla
English summary
Read in Kannada about Tesla Model 3 Makers Looking To Raise $1.5 Billion.
Story first published: Tuesday, August 8, 2017, 12:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark