ಬೆಲೆ ಏರಿಕೆ ಹೊರತಾಗಿಯೂ ಹೈಬ್ರಿಡ್ ಕಾರುಗಳ ಮಾರಾಟ : ಟೊಯೊಟಾ
ಜಿಎಸ್‌ಟಿ ಬೆಲೆ ಏರಿಕೆಯ ನಂತರವೂ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು ಭಾರತದಲ್ಲಿ ಹೈಬ್ರಿಡ್ ವಾಹನಗಳನ್ನು ಮಾರಾಟವನ್ನು ಮುಂದುವರೆಸುವುದಾಗಿ ಹೇಳಿದೆ.
ಜಿಎಸ್‌ಟಿ ಬೆಲೆ ಏರಿಕೆಯ ನಂತರವೂ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು ಭಾರತದಲ್ಲಿ ಹೈಬ್ರಿಡ್ ವಾಹನಗಳನ್ನು ಮಾರಾಟವನ್ನು ಮುಂದುವರೆಸುವುದಾಗಿ ಹೇಳಿದೆ.

ನಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಜಿಎಸ್‌ಟಿಯಿಂದಾಗಿ ಹೈಬ್ರಿಡ್ ಕಾರುಗಳ ಬೆಲೆಗಳು ಗಗನಕ್ಕೆ ಏರಿದ್ದು, ಆದರೂ ಸಹ ತನ್ನ ಹೈಬ್ರಿಡ್ ಕಾರುಗಳ ಮಾರಾಟ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಹೊಸ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಅನುಷ್ಠಾನಕ್ಕೆ ಬಂದ ನಂತರ ನಿಯಮದಂತೆ ಹೈಬ್ರಿಡ್ ಕಾರುಗಳ ಮೇಲಿನ ತೆರಿಗೆ ಹೆಚ್ಚಳಗೊಂಡಿದ್ದು, ಕಂಪನಿಯ ಈ ನಿರ್ಧಾರ ವಾಹನ ಕ್ಷೇತ್ರದಲ್ಲಿ ಹೆಚ್ಚು ಆಶ್ಚರ್ಯ ತಂದಿರುವುದಂತೂ ಸತ್ಯ.

ಹೊಸ ಜಿಎಸ್‌ಟಿ ಪ್ರಕಾರ, ಹೈಬ್ರಿಡ್ ಕಾರುಗಳು ಭಾರತದಲ್ಲಿ ಐಷಾರಾಮಿ ಕಾರುಗಳಂತೆಯೇ ಶೇಕಡಾ 28% ರಷ್ಟು ಜಿಎಸ್‌ಟಿ ತೆರಿಗೆ ಮತ್ತು 15% ರಷ್ಟು ಸೆಸ್(ಒಟ್ಟು 43%) ವಿಧಿಸಲಾಗುತ್ತದೆ.

ಜಿಎಸ್‌ಟಿ ಜಾರಿಗೆ ಬರುವುದಕ್ಕೂ ಮೊದಲಿದ್ದ ತೆರಿಗೆ ವ್ಯವಸ್ಥೆಯ ಪ್ರಕಾರ ಭಾರತದ ಹೈಬ್ರಿಡ್ ಕಾರುಗಳ ಮೇಲೆ ಶೇಕಡಾ 30.3% ರಷ್ಟು ತೆರಿಗೆ ವಿಧಿಸಲಾಗಿತ್ತು. ಇದರ ಪ್ರಕಾರ ಶೇಕಡಾ 13% ರಷ್ಟು ತೆರಿಗೆ ಹೆಚ್ಚಾಗಿದ್ದು, ಇದರಿಂದಾಗಿ ಪರಿಸರ ಸ್ನೇಹಿ ಹೈಬ್ರಿಡ್ ಕಾರುಗಳ ಬೆಲೆ ಹೆಚ್ಚಿಗೆಯಾಗಿತ್ತು.

ಟೊಯೊಟಾ ಕಂಪನಿಯ ಜನಪ್ರಿಯ ಹೈಬ್ರಿಡ್ ಸೆಡಾನ್ ಕಾರು ಕ್ಯಾಮ್ರಿಯ ದರಗಳು ಜಿಎಸ್‌ಟಿಯಿಂದಾಗಿ ಹೆಚ್ಚು ಕಡಿಮೆ ಹಿಂದಿನ ಕಾರುಗಳ ದರಕ್ಕೆ ಹೋಲಿಸಿದರೆ ಸರಾಸರಿ 3 ಲಕ್ಷ ರೂ ಹೆಚ್ಚಳವಾಗಿದೆ.

ಬೆಂಗಳೂರಿನ ಘಟಕದಲ್ಲಿ ಒಟ್ಟುಗೂಡಿಸಲಾಗಿರುವ ಈ ಕ್ಯಾಮ್ರಿ ಹೈಬ್ರಿಡ್ ಕಾರಿನ ಬೆಲೆ ರೂ 32 ಲಕ್ಷದಿಂದ ರೂ. 35 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿಫಲವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೆಚ್ಚಿನ ತೆರಿಗೆ ವಿಧಿಸುವುದರಿಂದ ಮಾರಾಟಕ್ಕೆ ಹಾನಿಯಾಗಲಿದೆ ಎಂದು ತಿಳಿದಿದ್ದರೂ ಸಹ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಈ ಕಾರಿನ ಮಾರಾಟ ಮುಂದುವರೆಸಲು ಕಂಪನಿ ತೀರ್ಮಾನಿಸಿದೆ.

ಟೊಯೊಟಾ ಭಾರತ ಸಂಸ್ಥೆಯ ಮತ್ತೊಂದು ಹೈಬ್ರಿಡ್ ಪ್ರಿಯುಸ್ ಕಾರಿಗೂ ಕೂಡ ಜಿಎಸ್‌ಟಿಯಿಂದಾಗಿ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಮುಂಬರುವ ದಿನಗಳಲ್ಲಿ ಮಾರಾಟವು ಸುಧಾರಣೆಯಾಗಲಿದೆ ಎಂದು ಟೊಯೊಟಾ ಹೇಳಿಕೊಂಡಿದೆ.


Click it and Unblock the Notifications








